ಅ.25 ರಿಂದ 1 ರಿಂದ 5 ನೇ ತರಗತಿ ಶಾಲೆ ಆರಂಭ – ಮಾರ್ಗಸೂಚಿ ಹೇಗಿದೆ ?

Team Newsnap
1 Min Read

ಅ. 25 ರಿಂದ 1 ರಿಂದ 5 ತರಗತಿ ಶಾಲೆ ಆರಂಭಿಸಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ

ಕೋವಿಡ್ 19 ನಿಂದ ಬಂದ್ ಆಗಿದ್ದ 1 ರಿಂದ 5ನೇ ತರಗತಿ ತೆರೆಯಲು ಸರ್ಕಾರ ಇಂದು ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಈ ಹಿಂದೆ ಶಿಕ್ಷಣ ಸಚಿವ ನಾಗೇಶ್ ದಸರಾ ಬಳಿಕ ಪ್ರಾಥಮಿಕ ಶಾಲೆಯನ್ನು ಆರಂಭಿಸಲಾಗುವುದು ಎಂದು ಹೇಳಿದ್ದರು. ಅದರಂತೆ ಸರ್ಕಾರ ತಜ್ಞರ ವರದಿಯನ್ನು ಪಡೆದು ಇಂದು ಮಾರ್ಗಸೂಚಿಯನ್ನು ಪ್ರಕಟಿಸಿದೆ.

b c nagesh

ಮಾರ್ಗಸೂಚಿಯಲ್ಲಿ ಇರುವುದು ಏನು?

  • ಶೇ.50 ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ
  • ಕೊರೊನಾ ಮಾರ್ಗಸೂಚಿ ಕಡ್ಡಾಯವಾಗಿ ಪಾಲನೆ ಮಾಡಬೇಕು
  • ತರಗತಿಯಲ್ಲಿ 1 ಮೀಟರ್ ಅಂತರದಲ್ಲಿ ಕೂರಬೇಕು. ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯವಾಗಿ ಬಳಕೆ ಮಾಡಬೇಕು.
  • ಪೋಷಕರ ಅನುಮತಿ ಪಡೆದು ಮಕ್ಕಳು ತರಗತಿಗೆ ಬರಬಹುದು
  • ಪ್ರವೇಶ ದ್ವಾರಗಳಲ್ಲಿ ಸೇರದಂತೆ ಶಾಲೆಯ ಒಳಗೆ, ಆವರಣದಲ್ಲಿ, ತರಗತಿಗಳ ಒಳಗೆ ಗುಂಪುಗೂಡುವಂತಿಲ್ಲ.
  • ಶಿಕ್ಷಕರು, ಸ್ಟಾಫ್ ಎರಡು ಡೋಸ್ ಲಸಿಕೆಯನ್ನು ಕಡ್ಡಾಯವಾಗಿ ಪಡೆದಿರಬೇಕು.
  • ಎರಡು ಡೋಸ್ ಪೂರ್ಣ ಮಾಡಿರುವ ಶಿಕ್ಷಕರು, ಸ್ಟಾಫ್ ಗೆ ಮಾತ್ರ 1-5 ತರಗತಿಗಳೊಳಗೆ ಪ್ರವೇಶ.
  • ಶೇ.50 ರಷ್ಟು ಸಾಮರ್ಥ್ಯದಲ್ಲಿ ಸ್ವಿಮ್ಮಿಂಗ್ ಪೂಲ್ ಬಳಕೆಗೆ ಅನುಮತಿ ನೀಡಲಾಗಿದೆ.
  • ಕೋವಿಡ್ ನಿಯಮಗಳ ಕಡ್ಡಾಯವಾಗಿ ಪಾಲನೆ ಮಾಡಬೇಕಾಗಿದೆ.
Share This Article
Leave a comment