ಅ. 25 ರಿಂದ 1 ರಿಂದ 5 ತರಗತಿ ಶಾಲೆ ಆರಂಭಿಸಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ
ಕೋವಿಡ್ 19 ನಿಂದ ಬಂದ್ ಆಗಿದ್ದ 1 ರಿಂದ 5ನೇ ತರಗತಿ ತೆರೆಯಲು ಸರ್ಕಾರ ಇಂದು ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಈ ಹಿಂದೆ ಶಿಕ್ಷಣ ಸಚಿವ ನಾಗೇಶ್ ದಸರಾ ಬಳಿಕ ಪ್ರಾಥಮಿಕ ಶಾಲೆಯನ್ನು ಆರಂಭಿಸಲಾಗುವುದು ಎಂದು ಹೇಳಿದ್ದರು. ಅದರಂತೆ ಸರ್ಕಾರ ತಜ್ಞರ ವರದಿಯನ್ನು ಪಡೆದು ಇಂದು ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಮಾರ್ಗಸೂಚಿಯಲ್ಲಿ ಇರುವುದು ಏನು?
ಶೇ.50 ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ
ಕೊರೊನಾ ಮಾರ್ಗಸೂಚಿ ಕಡ್ಡಾಯವಾಗಿ ಪಾಲನೆ ಮಾಡಬೇಕು
ತರಗತಿಯಲ್ಲಿ 1 ಮೀಟರ್ ಅಂತರದಲ್ಲಿ ಕೂರಬೇಕು. ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯವಾಗಿ ಬಳಕೆ ಮಾಡಬೇಕು.
ಪೋಷಕರ ಅನುಮತಿ ಪಡೆದು ಮಕ್ಕಳು ತರಗತಿಗೆ ಬರಬಹುದು
ಪ್ರವೇಶ ದ್ವಾರಗಳಲ್ಲಿ ಸೇರದಂತೆ ಶಾಲೆಯ ಒಳಗೆ, ಆವರಣದಲ್ಲಿ, ತರಗತಿಗಳ ಒಳಗೆ ಗುಂಪುಗೂಡುವಂತಿಲ್ಲ.
ಶಿಕ್ಷಕರು, ಸ್ಟಾಫ್ ಎರಡು ಡೋಸ್ ಲಸಿಕೆಯನ್ನು ಕಡ್ಡಾಯವಾಗಿ ಪಡೆದಿರಬೇಕು.
ಎರಡು ಡೋಸ್ ಪೂರ್ಣ ಮಾಡಿರುವ ಶಿಕ್ಷಕರು, ಸ್ಟಾಫ್ ಗೆ ಮಾತ್ರ 1-5 ತರಗತಿಗಳೊಳಗೆ ಪ್ರವೇಶ.
ಶೇ.50 ರಷ್ಟು ಸಾಮರ್ಥ್ಯದಲ್ಲಿ ಸ್ವಿಮ್ಮಿಂಗ್ ಪೂಲ್ ಬಳಕೆಗೆ ಅನುಮತಿ ನೀಡಲಾಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು