July 4, 2022

Newsnap Kannada

The World at your finger tips!

b c nagesh

ಇಂದಿನಿಂದ 1ರಿಂದ 5ನೇ ತರಗತಿ. ಆರಂಭ : ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ

Spread the love

ಇಂದಿನಿಂದ ರಾಜ್ಯದಲ್ಲಿ ಪ್ರಾಥಮಿಕ ಶಾಲೆ ಆರಂಭವಾಗಲಿವೆ. ಕೊರೊನಾ ಕಾರಣಕ್ಕಾಗಿ ಬಂದ್ ಆಗಿದ್ದ ಶಾಲೆಗಳು ಒಂದೂವರೆ ವರ್ಷಗಳ ಬಳಿಕ ಇಂದಿನಿಂದ ಆರಂಭ ಆಗಲಿದೆ. 1-5 ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಶುರುವಾಗಲಿವೆ.

ಮಾಗ೯ಸೂಚಿಯಲ್ಲಿ ಏನಿದೆ ?

1) ಇಂದಿನಿಂದ ಇನ್ನೊಂದು ವಾರ ಅರ್ಧ ದಿನ ಕ್ಲಾಸ್ ನಡೆಯಲಿದೆ.

2)ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ.

3)ನವೆಂಬರ್ 2ರಿಂದ ಪೂರ್ಣ ಪ್ರಮಾಣದಲ್ಲಿ ತರಗತಿ ಶುರುವಾಗಲಿದೆ.

4) ಸೋಮವಾರದಿಂದ ಶುಕ್ರವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30ರವರೆಗೆ ಕ್ಲಾಸ್ ನಡೆಯಲಿದೆ.

5) ಇನ್ನುಳಿದ ಎರಡು ದಿನ ಶಾಲೆ ಕೊಠಡಿಗಳ ಕ್ಲೀನಿಂಗ್ ಕಾರ್ಯ ನಡೆಯಲಿದೆ.

school reopen 1600779901

6) ಪಾಸಿಟಿವಿಟಿ ದರ ಶೇ.1 ಕ್ಕಿಂತ ಕಡಿಮೆ ಇರುವಲ್ಲಿ ಮಾತ್ರ ಸ್ಕೂಲ್ ಓಪನ್ ಮಾಡಲಾಗುತ್ತಿದೆ.

7) ಮಕ್ಕಳು ಶಾಲೆಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ. ಮಕ್ಕಳಲ್ಲಿ ಸೋಂಕು ಇಲ್ಲದೆ ಇರೋದನ್ನು ಪೋಷಕರು ದೃಢೀಕರಿಸಬೇಕು.

7) ಒಂದು ತರಗತಿಯಲ್ಲಿ 20 ಮಕ್ಕಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ.

8) ನ.2ರಿಂದ ಶಾಲೆಯಲ್ಲೇ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

9)ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು. ಆನ್ ಲೈನ್ ಅಥವಾ ಆಫ್ ಲೈನ್ ಎರಡೂ ತರಗತಿಗೂ ಅವಕಾಶ. 15 ರಿಂದ 20 ಮಕ್ಕಳ ತಂಡ ರಚಿಸಿ ಮಕ್ಕಳಿಗೆ ಪಾಠ ಮಾಡಬೇಕು.

9) 50 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ಫೇಸ್‍ಶೀಲ್ಡ್ ಕಡ್ಡಾಯ ಹಾಗೂ ಶಿಕ್ಷಕರು, ಸಿಬ್ಬಂದಿ 2 ಡೋಸ್ ಲಸಿಕೆ ಕಡ್ಡಾಯವಾಗಿದೆ.

10) ಮಕ್ಕಳಲ್ಲಿ ಒಂದು ಮೀಟರ್ ಅಂತರ ಪಾಲನೆ ಕಡ್ಡಾಯ. ಸ್ಯಾನಿಟೈಸೇಷನ್ ಹಾಗೂ ಶೌಚಾಲಯಗಳಲ್ಲಿ ಶುಚಿತ್ವ ಕಡ್ಡಾಯವಾಗಿದೆ

error: Content is protected !!