May 29, 2022

Newsnap Kannada

The World at your finger tips!

b c nagesh

ನಿಗದಿಯಂತೆ ಮೇ. 16 ರಿಂದಲೇ ಶಾಲೆಗಳು ಪ್ರಾರಂಭ : ಸಚಿವ ನಾಗೇಶ್ ಸ್ಪಷ್ಟನೆ

Spread the love

ರಾಜ್ಯದಲ್ಲಿ ನಿಗದಿಯಂತೆ ಮೇ. 16 ರಿಂದಲೇ ಶಾಲೆಗಳು ಪ್ರಾರಂಭ ವಾಗುತ್ತವೆ ಎಂದು ಸಚಿವ ನಾಗೇಶ್ ಸ್ಪಷ್ಟನೆ ನೀಡಿದ್ದಾರೆ

ಕರ್ನಾಟಕದ ಕೆಲವು ಭಾಗಗಳಲ್ಲಿ ಏರುತ್ತಿರುವ ತಾಪಮಾನವು ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳ ಶೈಕ್ಷಣಿಕ ವೇಳಾಪಟ್ಟಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.

ಇದನ್ನು ಓದಿ : ಶ್ರೀ ಶಂಕರಾಚಾರ್ಯರು

ಸುದ್ದಿಗಾರರೊಂದಿಗೆ ಮಾನಾಡಿದ ಅವರು, 2022-23 ನೇ ಸಾಲಿನ ತರಗತಿಗಳು ಮೇ 16 ರಂದು ನಿಗದಿತ ವೇಳಾಪಟ್ಟಿಯಂತೆ ಪ್ರಾರಂಭವಾಗಲಿವೆ. ಅದರಲ್ಲಿ ಯಾವ ಬದಲಾವಣೆಯೂ ಇರುವುದಿಲ್ಲ, ‘ಶೈಕ್ಷಣಿಕ ವರ್ಷದ ಆರಂಭವನ್ನು ವಿಳಂಬಗೊಳಿಸುವಂತೆ ಸರ್ಕಾರಕ್ಕೆ ಯಾವುದೇ ಮನವಿಗಳು ಬಂದಿಲ್ಲ. ಹವಾಮಾನ ಇಲಾಖೆ ತಾಪಮಾನ ಏರಿಕೆಯ ಬಗ್ಗೆ ಯಾವುದೇ ಮುನ್ಸೂಚನೆ ನೀಡಿಲ್ಲ ಎಂದರು.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಕಲಿಕಾ ಮಟ್ಟದಲ್ಲಿನ ನಷ್ಟವನ್ನು ಸರಿದೂಗಿಸಲು ಇಲಾಖೆ ಬೇಸಿಗೆ ರಜಾದಿನಗಳನ್ನು 15 ದಿನಗಳವರೆಗೆ ಕಡಿತಗೊಳಿಸಲಾಗಿದೆ ಎಂದರು.

error: Content is protected !!