ಒಂದು ಅವಧಿಯ ಫೀಸ್ ಮಾತ್ರ ಪಡೆಯಲು ಸಚಿವ ಸೂಚನೆ

Team Newsnap
1 Min Read
Just for fun, I threatened with a bomb call - statement of a minor boy ಜಸ್ಟ್ ಫಾರ್ ಫನ್‍ ಗೆ ಬಾಂಬ್ ಬೆದರಿಕೆ ಹಾಕಿದ್ದೆ – ಅಪ್ರಾಪ್ತ ಬಾಲಕ ಹೇಳಿಕೆ

ನ್ಯೂಸ್ ಸ್ನ್ಯಾಪ್
ಚಾಮರಾಜನಗರ: ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಂದ ಒಂದು ಅವಧಿಯ ಪ್ರವೇಶ ಶುಲ್ಕ ಮಾತ್ರ ಪಡೆಯಲು ಸೂಚಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-19 ಕಾರಣದಿಂದ ಜೂನ್ ತಿಂಗಳಲ್ಲಿ ಆರಂಭವಾಗಬೇಕಿದ್ದ ಶಾಲೆಗಳು ಇನ್ನೂ ಆರಂಭವಾಗಿಲ್ಲ. ಇದರಿಂದ ಖಾಸಗಿ ಶಾಲೆಗಳ ಶಿಕ್ಷಕರು ವೇತನವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಒಂದು ಅವಧಿಯ ಅಧಿಕೃತ ಶುಲ್ಕ ಮಾತ್ರ ಪಡೆಯಬೇಕು. ಸೆಪ್ಟಂಬರ್ 30ರೊಳಗೆ ಮಕ್ಕಳ ದಾಖಲಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಅದನ್ನು ಶಿಕ್ಷಕರಿಗೆ ವೇತನ ನೀಡುವಂತೆ ತಿಳಿಸಲಾಗಿದೆ. ಅಧಿಕ ಶುಲ್ಕ ವಸೂಲಿ ಮಾಡಿದರೆ, ಅಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

Share This Article
Leave a comment