November 25, 2024

Newsnap Kannada

The World at your finger tips!

school , learning , teaching

ಕಠಿಣ ಪರಿಸ್ಥಿತಿಯಲ್ಲೂ ಇಂದಿನಿಂದ ಶಾಲಾ – ಕಾಲೇಜು ಆರಂಭ

Spread the love

ರಾಜ್ಯದಲ್ಲಿನ ರೂಪಾಂತರ ವೈರಸ್ ಸೋಂಕಿನ ಭೀತಿಯ ನಡುವೆಯೂ ಇಂದಿನಿಂದ ಶಾಲಾ-ಕಾಲೇಜು ಆರಂಭಗೊಳ್ಳುತ್ತಿದೆ.

ಇಂದು ಮುಂಜಾಗ್ರತಾ ಕ್ರಮವಾಗಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಮಾತ್ರ ಆರಂಭಗೊಳ್ಳಲಿವೆ.

ಕಠಿಣ ಪರಿಸ್ಥಿತಿಯಲ್ಲೂ ಆರಂಭವಾಗುತ್ತಿರುವ ಶಾಲೆ ಕಾಲೇಜು ಗಳಲ್ಲಿ ಕೈಗೊಳ್ಳುವ ಕ್ರಮಗಳ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ.

ವಿದ್ಯಾರ್ಥಿ’ಗಳಿಗೆ ಮಾರ್ಗದರ್ಶಿ ಸೂತ್ರಗಳು

1) 10 ನೇ ತರಗತಿ ವಿದ್ಯಾರ್ಥಿಗಳಿಗೆ ಅರ್ಧ ದಿನ ಮಾತ್ರ ತರಗತಿ.‌

2) ತರಗತಿಯು ಬೆಳಗ್ಗೆ 09.30 ರಿಂದ ಮಧ್ಯಾಹ್ನ 1.00 ರವರೆಗೆ ನಡಯಲಿದೆ.

3) ವಿದ್ಯಾರ್ಥಿಗಳು ಶಾಲಾ ಸಮವಸ್ತ್ರದಲ್ಲಿ ಶಾಲೆಗೆ ತೆರಳಬೇಕು. ಒಂದು ತರಗತಿಯಲ್ಲಿ 15 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.

4) ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಂತರ ಕಾಪಾಡಿಕೊಳ್ಳಬೇಕು.

5) ಶಾಲೆಗೆ ಹಾಜರಾಗದವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳು ಇವೆ.

6) ವಿದ್ಯಾರ್ಥಿಗಳಲ್ಲಿ ಕೆಮ್ಮು, ಶೀತ, ಜ್ವರ ಇತರ ಖಾಯಿಲೆಯ ಲಕ್ಷಣ ಕಂಡುಬಂದರೆ ಪ್ರತ್ಯೇಕ ಐಸೊಲೇಷನ್ ವ್ಯವಸ್ಥೆ ಮಾಡಿ ಪೋಷಕರಿಗೆ ಪರೀಕ್ಷೆ ಮಾಡಿಸಲು ಸೂಚಿಸಲಾಗುತ್ತದೆ. ಅಂತಹ ವಿದ್ಯಾರ್ಥಿಗಳು ಮನೆಯಲ್ಲೇ ಇರಬೇಕು.

7) ವಿದ್ಯಾರ್ಥಿಗಳು ಮನೆಯಿಂದಲೇ ಕುಡಿಯುವ ನೀರು, ಪ್ರತ್ಯೇಕ ಸ್ಯಾನಿಟೈಸರ್, ಸೋಪ್, ಟವಲ್, ಟಿಶ್ಯುಪೇಪರ್ ಬಳಸುವುದು.ತರಗತಿಯ ಇತರ ನೋಟ್ಸ್, ಬರವಣಿಗೆಯ ಸಾಮಗ್ರಿಗಳನ್ನು ಸಹ ಯಾರೊಂದಿಗೂ ಹಂಚಿಕೊಳ್ಳುವಂತಿಲ್ಲ

8) ಸಾಮೂಹಿಕ ಪ್ರಾರ್ಥನೆ ನಡೆಸಲು ಅವಕಾಶವಿಲ್ಲ. ವಿದ್ಯಾರ್ಥಿಗಳು ತಾವಿರುವ ಕೊಠಡಿಯಿಂದಲೇ ಪ್ರಾರ್ಥನೆ ನಡೆಸುವುದು.

47644b81 8528 471e b860 797e746ee8c3

ಪೋಷಕರಿಗೆ ಮಾರ್ಗದರ್ಶಿ ಸೂತ್ರಗಳು:

1)ಕೆಮ್ಮು, ಶೀತ, ಜ್ವರ ಇತರ ಯಾವುದೇ ಖಾಯಿಲೆಯ ಲಕ್ಷಣವಿದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸುವಂತಿಲ್ಲ.
ಮಕ್ಕಳಿಗೆ ಶಾಲೆಗೆ ಕಳುಹಿಸಲು ಯಾವುದೇ ಖಾಯಿಲೆ ಇಲ್ಲವೆಂದು, ಶಾಲೆಗೆ ಕಳಿಸಲು ಒಪ್ಪಿಗೆ ಇದೆ ಎಂಬ ದೃಢೀಕರಣ ಪತ್ರ ನೀಡುವುದು ಕಡ್ಡಾಯ.

2)ಮಕ್ಕಳಿಗೆ ಪ್ರತ್ಯೇಕವಾದ ಸ್ಯಾನಿಟೈಸರ್, ಮಾಸ್ಕ್, ಟವಲ್, ಸೋಪ್, ಟಿಶ್ಯುಗಳನ್ನು ಬಳಸುವಂತೆ ತಿಳಿಸುವುದು.

3)ಮಕ್ಕಳಿಗೆ ಶಾಲಾ ದಾಖಲಾತಿ ಕಡ್ಡಾಯ. ಆನ್‍ಲೈನ್ ಮತ್ತು ಆಫ್‍ಲೈನ ತರಗತಿಗಳು ಎರಡೂ ಸಹ ನಡೆಯುತ್ತವೆ

Copyright © All rights reserved Newsnap | Newsever by AF themes.
error: Content is protected !!