ಮಂಡ್ಯ: ಹನಕೆರೆ ಬಳಿ ಕೆಳ ಸೇತುವೆಗಾಗಿ ಉಪವಾಸ ಸತ್ಯಾಗ್ರಹ ಅಂತ ಹೇಳ್ತಾರೆ.ಅದರಲ್ಲಿ ಎಷ್ಟು ಸತ್ಯ ಇದೆ. ಯಾವಾಗ್ಲೂ ಸತ್ಯವನ್ನು ಇಟ್ಟುಕೊಂಡು ಮಾತನಾಡಬೇಕು. ಸತ್ಯಕ್ಕೆ ತುಂಬಾ ದೂರವಾದದ್ದು ಅವರು ಮಾಡುತ್ತಿದ್ದಾರೆ ಎಂದು ಶಾಸಕ ರವಿಕುಮಾರ್ ಗಣಿಗ ಅವರ ಉಪವಾಸ ಸತ್ಯಾಗ್ರಹ ಕುರಿತು ಸಂಸದೆ ಸುಮಲತಾ ಅಂಬರೀಷ್ ಪ್ರತಿಕ್ರಿಯಿಸಿದರು.
ಮಂಡ್ಯದ ಚಾಮುಂಡೇಶ್ವರಿ ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹನಕೆರೆ ಗ್ರಾಮದ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ನಾನು ಎನ್‌ಎಚ್‌ಎಐ ಅಧಿಕಾರಿಗಳಿಗೆ ಪತ್ರ ಬರೆದಿದ್ದೆ ಎಂದು ಹೇಳಿ, ಪತ್ರ ಬರೆದಿದ್ದನ್ನ ಓದಿ ಹೇಳಿದ ಅವರು, ಅಂಡರ್ ಪಾಸ್ ವಿಚಾರದಲ್ಲಿ ಸಂಸದರು ಕ್ರೆಡಿಟ್ ತಗೊಳಕೆ ಪ್ರಯತ್ನಿಸುತ್ತಿದ್ದಾರೆ ಎಂದು ಶಾಸಕ ರವಿಕುಮಾರ್ ಹೇಳಿದ್ದಾರೆ. ಆದರೆ ಕ್ರೆಡಿಟ್ ಗಾಗಿ ನಾನು ಈ ಕೆಲಸ ಮಾಡ್ತಿಲ್ಲ ಎಂದು ಹೇಳಿದರು.
ಈ ಬಗ್ಗೆ ನಾನು ಅಫಿಶಿಯಲ್ ಲೆಟರ್ ಅಂಡ್ ರೆಕಾರ್ಡ್ ತೋರಿಸ್ತಾ ಇದೀನಿ. ಸುಮ್ಮನೆ ಈ ರೀತಿ ದಾರಿ ತಪ್ಪಿಸಿ ನಾಳೆ ದಿನ ಆದಾಗ ನನ್ನ ಒಂದು ಹೋರಾಟದ ಫಲದಿಂದ ಇದಾಗಿದೆ ಅಂತ ಹೇಳಿ ಕೊಡುವ ಒಂದು ಕಾರಣ ಇರಬಹುದು ಅದು ಬಿಟ್ಟರೆ ಇನ್ನೇನು ಇಲ್ಲ. ಶಾಸಕರಾಗಿ ಈ ಮಾಹಿತಿಯನ್ನು ತರಿಸಿಕೊಂಡು ನೋಡಿ ಆಮೇಲೆ ಏನು ಬೇಕೋ ಮಾಡಬಹುದಿತ್ತು ಎಂದು ತರಾಟೆಗೆ ತೆಗೆದುಕೊಂಡರು.
ಯಾರೇ ಕ್ಯಾಂಡಿಡೇಟ್ ಆದ್ರೂ ಬಿಜೆಪಿ ಪಕ್ಷದ ಸೂಚನೆಯಂತೆ ಕೆಲಸ ಮಾಡೇನೆ, ಟಿಕೆಟ್ ಆದ ಕೂಡಲೇ ನಾನು ತಾಲೂಕುವಾರು ಸಭೆಗಳನ್ನ ಮಾಡೇನೆ ಎಂದರು.
ಮೈತ್ರಿ ಧರ್ಮ ಪಾಲಿಸಬೇಕು ಎಂದು ಜೆಡಿಎಸ್ ನಾಯಕರು ಹೇಳಿರುವುದು ಒಳ್ಳೆಯ ಬೆಳವಣಿಗೆ ಅಂತ ನಾನು ಭಾವಿಸುತ್ತೇನೆ. ಹೈಕಮಾಂಡ್ ನಮಗೆ ಯಾವ ರೀತಿ ಡೈರೆಕ್ಷನ್ ಬರುತ್ತೆ ಅದನ್ನ ನಾವು ಪಾಲಿಸಬೇಕಾಗುತ್ತದೆ ಎಂದರು.
ಇಡೀ ದೇಶದಲ್ಲಿ ಇವತ್ತು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಯಾವ ರೀತಿ ಪ್ರೋಗ್ರೆಸ್ ಆಗುತ್ತಿದೆ. ೪ ವರ್ಷಗಳಲ್ಲಿ ಎಷ್ಟು ಸಾವಿರ ಕಿಲೋಮೀಟರ್ ರಸ್ತೆ ನಿತಿನ್‌ಗಡ್ಕರಿ ಅವರು ಬಿಜೆಪಿ ಸರ್ಕಾರ ಬಂದ್ಮೇಲೆ ಮಾಡಿದ್ದಾರೆ ಅನ್ನೋದಕ್ಕೆ ನಿಮ್ಮ ಕಣ್ಣುಮುಂದೆ ಪ್ರತ್ಯಕ್ಷ ಸಾಕ್ಷಿಯಿದೆ.ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಾಗಿ ಕೆಲಸ ಮಾಡೋಣ: ಡಿಸಿ ಪಿ.ಎನ್ ರವೀಂದ್ರ
ಇನ್ನೊಂದೆರಡು ದಿನಗಳು ಅಥವಾ ಒಂದು ವಾರ ಕಾಯಿರಿ ಎಲ್ಲದಕ್ಕೂ ಉತ್ತರ ಸಿಗಲಿದೆ. ನೀವು ನಮ್ಮ ಪಕ್ಷಕ್ಕೆ ಬೇಕು ಮಂಡ್ಯದಲ್ಲಿ ಪಕ್ಷ ಸಂಘಟನೆಗೆ ನೀವು ಬೇಕು ಎಂದು ಬಿಜೆಪಿಯವರು ಹೇಳಿದ್ದಾರೆ. ಇನ್ನೊಂದು ವಾರ ಕಾಯಿರಿ.ಬಿಜೆಪಿ ಎಂಪಿ ಆಗೋಕೆ ನಾನು ಆಸೆ ಪಡ್ತಾ ಇರೋದು. ನನ್ನ ಪ್ರಯತ್ನ ಏನಿದ್ದರೂ ಬಿಜೆಪಿ ಈ ಸೀಟ್‌ನ ಉಳಿಸಿಕೊಳ್ಳಬೇಕು ಎಂಬುದಾಗಿದೆ ಎಂದರು.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ