December 23, 2024

Newsnap Kannada

The World at your finger tips!

WhatsApp Image 2023 03 02 at 2.56.20 PM

nightingale of india

ಸರೋಜಿನಿ ನಾಯ್ಡು’ಭಾರತದ ಕೋಗಿಲೆ’ ( Sarojini Naidu )

Spread the love

ಸರೋಜಿನಿ ನಾಯ್ಡು ಅವರು 1879 ರಂದು ಹೈದರಾಬಾದ್‌ನಲ್ಲಿ ಜನಿಸಿದರು, ಅವರ ಜನ್ಮದಿನವನ್ನು ಭಾರತದಲ್ಲಿ ‘ರಾಷ್ಟ್ರೀಯ ಮಹಿಳಾ ದಿನ’ ಎಂದು ಆಚರಿಸಲಾಗುತ್ತದೆ.

ಸರೋಜಿನಿ ನಾಯ್ಡು ಒಬ್ಬ ಪ್ರಸಿದ್ಧ ಕವಯಿತ್ರಿ, ಧೀಮಂತ ಮಹಿಳೆ, ಸ್ವಾತಂತ್ರ್ಯ ಹೋರಾಟಗಾರ್ತಿ ಜೊತೆಗೆ ದೇಶದ ಮೊದಲ ಮಹಿಳಾ ರಾಜ್ಯಪಾಲೆಯಾಗಿದ್ದರು.

ಸರೋಜಿನಿ ನಾಯ್ಡು ಅವರ ತಂದೆ ವಿಜ್ಞಾನಿ ಮತ್ತು ಅವರ ತಾಯಿ ತತ್ವಜ್ಞಾನಿ. ನಾಯ್ಡು ಅವರು ಅದ್ಭುತ ವಿದ್ಯಾರ್ಥಿಯಾಗಿದ್ದರು ಮತ್ತು ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದರು.

WhatsApp Image 2023 03 02 at 2.54.56 PM

ಸರೋಜಿನಿ ಚಟ್ಟೋಪಾಧ್ಯಾಯ ಎಂದಿದ್ದ, ಇವರ ನಾಮ, ಗೋವಿಂದರಾಜುಲು ನಾಯ್ಡು ಅವರನ್ನು ವಿವಾಹವಾದ ನಂತರ ಸರೋಜಿನಿ ನಾಯ್ಡು ಎಂದಾಗಿದ್ದು.

‘ಭಾರತದ ಕೋಗಿಲೆ’ (ನೈಟಿಂಗೇಲ್) ಎಂಬ ಬಿರುದು ನೀಡಿದ್ದು, ಮಹಾತ್ಮ ಗಾಂಧೀಜಿ. ಏಕೆಂದರೆ ಅವರ ಕಾವ್ಯವು ಭಾವಗೀತಾತ್ಮಕ ಮತ್ತು ನೈಜಚಿತ್ರಣಗಳಿಂದ ಕೂಡಿದೆ ಎಂದು ಹೇಳಲಾಗುತ್ತದೆ.

ಸರೋಜಿನಿ ನಾಯ್ಡು ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನಾಗರಿಕ ಅಸಹಕಾರ ಚಳುವಳಿಯ ಸಮಯದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. 1942 ರಲ್ಲಿ “ಕ್ವಿಟ್ ಇಂಡಿಯಾ” ಚಳುವಳಿಯ ಸಮಯದಲ್ಲಿ ಸರೋಜಿನಿ ನಾಯ್ಡು ಅವರನ್ನು ಬಂಧಿಸಲಾಯಿತು,ಅವರು ಗಾಂಧೀಜಿಯವರೊಂದಿಗೆ 21 ತಿಂಗಳ ಕಾಲ ಜೈಲಿನಲ್ಲಿದ್ದರು.

ಮಹಿಳಾ ಮತದಾರರ ಆಂದೋಲನದಲ್ಲಿ ಇಂಗ್ಲೆಂಡ್‌ನಲ್ಲಿ ಅನುಭವ ಗಳಿಸಿದ ನಂತರ 1905 ರಲ್ಲಿ ಅವರು ಭಾರತೀಯ ಸ್ವಾತಂತ್ರ್ಯ ಚಳವಳಿಗೆ ಸೇರಿದರು. ನಂತರ ರಾಷ್ಟ್ರೀಯ ಮತ್ತು ಸಾಮಾಜಿಕ ಪ್ರಾಮುಖ್ಯತೆಯ ವಿವಿಧ ವಿಷಯಗಳ ಕುರಿತು ಉಪನ್ಯಾಸಗಳನ್ನು ನೀಡಲು 1915 ರಿಂದ 1918 ರವರೆಗೆ ಭಾರತದಲ್ಲಿ ಪ್ರಯಾಣಿಸಿದರು. – 1925 ರಲ್ಲಿ, ಸರೋಜಿನಿ ನಾಯ್ಡು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮೊದಲ ಭಾರತೀಯ ಮಹಿಳಾ ಅಧ್ಯಕ್ಷರಾಗಿ ನೇಮಕಗೊಂಡರು. – 1929 ರಲ್ಲಿ, ಇವರು ದಕ್ಷಿಣ ಆಫ್ರಿಕಾದಲ್ಲಿ ಈಸ್ಟ್ ಆಫ್ರಿಕನ್ ಇಂಡಿಯನ್ ಕಾಂಗ್ರೆಸ್‌ನ ಅಧ್ಯಕ್ಷತೆ ವಹಿಸಿದ್ದರು. -ಭಾರತದಲ್ಲಿ ಪ್ಲೇಗ್ ಸಾಂಕ್ರಾಮಿಕ ಸಮಯದಲ್ಲಿ ಮಾಡಿದ ಕೆಲಸಕ್ಕಾಗಿ ಬ್ರಿಟಿಷ್ ಸರ್ಕಾರವು ಕೈಸರ್-ಐ-ಹಿಂದ್ ಪದಕವನ್ನು ನೀಡಿತ್ತು.

WhatsApp Image 2023 03 02 at 2.54.35 PM

ಸ್ವಾತಂತ್ರ್ಯದ ನಂತರ 1947 ರಿಂದ 1949 ರವರೆಗೆ ಯುನೈಟೆಡ್ ಪ್ರಾಂತ್ಯಗಳ ಮೊದಲ ಗವರ್ನರ್ ಆಗಿ ಸೇವೆ ಸಲ್ಲಿಸಿದರು ಮತ್ತು ಭಾರತೀಯ ಸಂವಿಧಾನದ ಕರಡು ರಚನೆಗೆ ಕೊಡುಗೆ ನೀಡಿದರು.

ಭಾರತೀಯ ಕಾಂಗ್ರೆಸ್‌ನಲ್ಲಿ ಸರೋಜಿನಿ ನಾಯ್ಡು ಮೊದಲ ಮಹಿಳಾ ಅಧ್ಯಕ್ಷರಾಗಿದ್ದರು, ಸರೋಜಿನಿ ನಾಯ್ಡು ಅವರನ್ನು ಇಂದಿನ ಉತ್ತರ ಪ್ರದೇಶದ ಯುನೈಟೆಡ್ ಪ್ರಾವಿನ್ಸ್‌ನ ಗವರ್ನರ್ ಆಗಿ ನೇಮಿಸಲಾಯಿತು. ಅವರು ಮಹಿಳಾ ಭಾರತ ಸಂಘದ (WIA) ಸಂಸ್ಥಾಪಕರಲ್ಲಿ ಒಬ್ಬರು. ಸರೋಜಿನಿ ನಾಯ್ಡು ಅವರು 5 ಭಾಷೆಗಳಲ್ಲಿ ಪ್ರವೀಣರಾಗಿದ್ದರು.

ಸರೋಜಿನಿ ನಾಯ್ಡು ಅವರ ಬರವಣಿಗೆಯ ವೃತ್ತಿಜೀವನವು 13 ನೇ ವಯಸ್ಸಿನಲ್ಲಿ ಪ್ರಾರಂಭವಾಯಿತು ಮತ್ತು ಅವರ ಪ್ರಮುಖ ಕೊಡುಗೆ ಕಾವ್ಯ ಕ್ಷೇತ್ರದಲ್ಲಿತ್ತು. ಅವರ ಮೊದಲ ಕವನ ಸಂಕಲನವಾದ ದಿ ಗೋಲ್ಡನ್ ಥ್ರೆಶೋಲ್ಡ್ ಅನ್ನು 1905 ರಲ್ಲಿ ಪ್ರಕಟಿಸಲಾಯಿತು.

ಸರೋಜಿನಿ ನಾಯ್ಡು ಅವರ ಕೆಲವು ಸಾಹಿತ್ಯ ಕೃತಿಗಳು ದಿ ಬರ್ಡ್ ಆಫ್ ಟೈಮ್, ಸಾಂಗ್ಸ್ ಆಫ್ ಲೈಫ್, ಡೆತ್ ಅಂಡ್ ದಿ ಸ್ಪ್ರಿಂಗ್, ದಿ ಬ್ರೋಕನ್ ವಿಂಗ್: ಸಾಂಗ್ಸ್ ಆಫ್ ಲವ್, ಡೆತ್ ಅಂಡ್ ದಿ ಸ್ಪ್ರಿಂಗ್, ಮುಹಮ್ಮದ್ ಜಿನ್ನಾ: ಆನ್ ಅಂಬಾಸಿಡರ್ ಆಫ್ ಯೂನಿಟಿ, ಸಾಂಗ್ಸ್ ಆಫ್ ಇಂಡಿಯಾ, ಅಲಹಾಬಾದ್: ಕಿತಾಬಿಸ್ತಾನ್, ದಿ ಇಂಡಿಯನ್ ವೀವರ್ಸ್, ಫೀಸ್ಟ್ ಆಫ್ ಯೂತ್, ದಿ ಮ್ಯಾಜಿಕ್ ಟ್ರೀ ಮತ್ತು ದಿ ವಿಝಾರ್ಡ್ ಮಾಸ್ಕ್.

ಸರೋಜಿನಿ ನಾಯ್ಡು ಮಾರ್ಚ್ 2, 1949 ರಂದು ಲಕ್ನೋದ ಸರ್ಕಾರಿ ಭವನದಲ್ಲಿ ಹೃದಯಾಘಾತದಿಂದ ನಿಧನರಾದರು.ಕಾಂಗ್ರೆಸ್ ಗೆ ಪಲಾಯನ ಮಾಡಲು ಸಚಿವ ನಾರಾಯಣಗೌಡ ಸಿದ್ದತೆ

#Sarojininaidu #nightingaleofindia #singer #birthday #Womenpresident #governor

Copyright © All rights reserved Newsnap | Newsever by AF themes.
error: Content is protected !!