ಸಾವಿರ ಕಷ್ಟಗಳ
ಬದಿಗೊತ್ತಿ
ಬಡ ರೈತನ ಮೊಗದಲ್ಲಿನ ನಗು
ಅದುವೇ ಸಂಕ್ರಾಂತಿ //
ಧರೆ ತನ್ನೊಡಲ
ಬಸಿರೋತ್ತು
ಜೀವಗಳ ಒಡಲ ತುಂಬಿದೊಡೆ
ಅದುವೇ ಸಂಕ್ರಾಂತಿ //
ಬಳಲಿ ಬೆಂಡಾದ
ಬಸವನಿಗೆ ಚಿತ್ತಾರ
ಸಿಂಗರಿಸಿ ಕಿಚ್ಚು ಹಾಯಿಸಿದರೆ
ಅದುವೇ ಸಂಕ್ರಾಂತಿ //
ಪಿತೃ ಪೂರ್ವಜರ
ಆತ್ಮ ಶಾಂತಿಗಾಗಿ
ಗಂಗೆ ಭೋರ್ಗರೆದರೆ ಮುಕ್ತಿಸಲು
ಅದುವೇ ಸಂಕ್ರಾಂತಿ //
ಲೋಕ ಕಲ್ಯಾಣಾರ್ಥವಾಗಿ
ಸತಿ ಪತಿಗಳಾದ
ಶಿವ ಪಾರ್ವತಿಯರ ಮಿಲನ
ಅದುವೇ ಸಂಕ್ರಾಂತಿ //
ಜಗದ ಇಚ್ಚ್ಜಾಮರಣಿ
ಪುಣ್ಯ ಕಾಲವ ತಪಿಸಿ
ಮಕರ ಬೆಳಕಲಿ ಜೀವ ಬಿಟ್ಟಾಗ
ಅದುವೇ ಸಂಕ್ರಾಂತಿ //
ದಕ್ಷಿಣಾಯದಿಮುಚ್ಚಿದ
ಸ್ವರ್ಗದ ಬಾಗಿಲು
ಉತ್ತರಾಯಣ ಕಾಲದಿ ತೆರೆದಾಗ
ಅದುವೇ ಸಂಕ್ರಾಂತಿ //
ಭರತದ ತುಂಬೆಲ್ಲಾ
ಬಿಹು,ಪೊಂಗಲ್, ವಿಷು
ಉತ್ತರ ಪುಣ್ಯ ಕಾಲವೆಂದು
ಸಂಭ್ರಮಿಸುವುದೇ ಸಂಕ್ರಾಂತಿ //
ಧರೆಯ ಬೆಳಕಿಸುವ
ಮಕರದಿ ಹಾಯ್ದು ಹಸಿರು ನೀಡುವ
ಸೂರ್ಯನಿಗೆ ಕೋಟಿ ಪ್ರಣಾಮಗಳ
ಅರ್ಪಿಸುವುದೇ ಸಂಕ್ರಾಂತಿ….//
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು