ಇಬ್ಬರು ಯುವತಿಯರನ್ನು ಬಳಕೆ ಮಾಡಿಕೊಂಡು ಹನಿಟ್ರ್ಯಾಪ್ ಮಾಡಿದ ಆರೋಪದ ಮೇಲೆ ಸ್ಯಾಂಡಲ್ವುಡ್ನ ನಟನನ್ನು ಬಂಧಿಸಲಾಗಿದೆ. ಜೆ.ಪಿ.ನಗರ ನಿವಾಸಿ ಯುವರಾಜ್ ಅಲಿಯಾಸ್ ಯುವ ಬಂಧಿತ ಆರೋಪಿ.
ಬೆಂಗಳೂರಿನ ಉದ್ಯಮಿ ಒಬ್ಬರಿಗೆ ಹನಿ ಟ್ರ್ಯಾಪ್ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಬಂಧಿತ ಯುವರಾಜ್, ಮಿಸ್ಟರ್ ಭೀಮರಾವ್ ಎಂಬ ಸಿನಿಮಾಕ್ಕೆ ನಾಯಕನಾಗಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಮೂಲದ ಉದ್ಯಮಿಗೆ ಚಾಟ್ ಮಾಡಿ ಹಣವನ್ನು ಪೀಕಿಸಿರುವ ಆರೋಪವನ್ನು ಯುವರಾಜ್ ಎದುರಿಸುತ್ತಿದ್ದಾರೆ.
ಇಬ್ಬರು ಯುವತಿಯರ ಹೆಸರು ಬಳಸಿಕೊಂಡು ಚಾಟ್ ಮಾಡಿದ್ದರಂತೆ. ನಂತರ ಉದ್ಯಮಿಗೆ ಭೇಟಿಯಾಗಿ ತಾವು ಕ್ರೈಂ ಪೊಲೀಸರು ಎಂದು ಹೇಳಿ ಹೆದರಿಸಿದ್ದರಂತೆ. ಯುವತಿಯರ ಜೊತೆಗೆ ಅಶ್ಲೀಲ ಚಾಟ್ ಬಗ್ಗೆ ನಿಮ್ಮ ಮೇಲೆ ಕೇಸ್ ದಾಖಲಾಗಿದೆ ಎಂದು ಹೆದರಿಸಿದ್ದರಂತೆ.
ನಿಮ್ಮ ಮೇಲೆ ಕೇಸ್ ಮುಚ್ಚಿ ಹಾಕಬೇಕು ಅಂದರೆ ಹಣವನ್ನ ನೀಡಬೇಕು ಎಂದು ಹೆದರಿಸಿದ್ದರಂತೆ.
ಮೊದಲಿಗೆ ಐವತ್ತು ಸಾವಿರ ಪಡೆದುಕೊಂಡು ನಂತರ ಮೂರು ಲಕ್ಷ ರೂಪಾಯಿ ಹಣವನ್ನ ಡ್ರಾ ಮಾಡಿಸಿಕೊಂಡಿದ್ದರು. ಅಷ್ಟಕ್ಕೂ ಸುಮ್ಮನಾಗದ ಯುವರಾಜ್, ಹಂತ ಹಂತವಾಗಿ 14 ಲಕ್ಷಕ್ಕೂ ಹೆಚ್ಚು ಹಣವನ್ನು ಪೀಕಿದ್ದ ಎಂಬ ಆರೋಪ ಕೇಳಿಬಂದಿದೆ.
ಉದ್ಯಮಿಗೆ ಸಂಶಯ ಬಂದ ನಂತರ ಹಲಸೂರು ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ತನಿಖೆ ವೇಳೆ ಮೋಸ ಮಾಡಿರುವುದು ಗೊತ್ತಾಗಿದೆ, ನಟ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ