January 15, 2025

Newsnap Kannada

The World at your finger tips!

satyajeeth

ಸ್ಯಾಂಡಲ್​ವುಡ್ ಖಳ ನಟ ಸತ್ಯಜೀತ್​ ತೀವ್ರ ಅನಾರೋಗ್ಯ: ಸ್ಥಿತಿ ಗಂಭೀರ- ಬೋರಿಂಗ್ ನಲ್ಲಿ ಚಿಕಿತ್ಸೆ

Spread the love

ಸ್ಯಾಂಡಲ್​ವುಡ್ ನಟ ಸತ್ಯಜೀತ್​ ಅವರು ಅನಾರೋಗ್ಯದಿಂದ ಬಳಲಿ ಗಂಭೀರ ಸ್ಥಿತಿಯಲ್ಲಿ ಇದ್ದಾರೆ.

ಬೆಂಗಳೂರಿನ ಬೋರಿಂಗ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗಷ್ಟೆ ಸತ್ಯಜೀತ್​ ಅವರಿಗೆ ಹೃದಯ ಸ್ಥಂಭನ ಆಗಿತ್ತು.

ಈಗ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ಸತ್ಯಜೀತ್ ಅವರಿಗೆ ಕೊಡಲಾಗುತ್ತಿದ್ದು, ರಕ್ತದೊತ್ತಡ, ಸಕ್ಕರೆ ಮಟ್ಟದಲ್ಲಿ ಏರುಪೇರಾಗುತ್ತಿದೆ. ಬಿಪಿ ಕಡಿಮೆಯಾಗುತ್ತಿದೆ. ವಯಸ್ಸು 70 ದಾಟಿರುವ ಕಾರಣ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಆದರೆ ವೈದ್ಯರು ಪ್ರಯತ್ನವನ್ನು ಮುಂದುವರಿಸಿದ್ದಾರೆ.

ನಟನಿಗೆ ಕೆಲ ದಿನಗಳ ಹಿಂದೆ ಅವರಿಗೆ ಜಾಂಡೀಸ್ ಆಗಿತ್ತು ಅದರ ಬೆನ್ನಲ್ಲೇ ಕಳೆದ ಶುಕ್ರವಾರ ಹೃದಯಾಘಾತ ಸಂಭವಿಸಿತ್ತು.

ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು ಎರಡು ದಿನಗಳ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಆದರೆ, ಆರೋಗ್ಯ ಸ್ಥಿತಿ ಬಿಗಡಾಯಿಸಿದ ಕಾರಣ ಭಾನುವಾರ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈಗಾಗಲೇ ಗ್ಯಾಂಗ್ರಿನ್ ನಿಂದ ಎಡಗಾಲು ತೆಗೆಯಲಾಗಿದೆ. ಗ್ಯಾಂಗ್ರಿನ್ ಬಲಗಾಲಿಗೂ ಹರಡುತ್ತಿದೆ. ತಕ್ಷಣ ಐಸಿಯುನಲ್ಲಿ ಚಿಕಿತ್ಸೆ ಪ್ರಾರಂಭಿಸಲಾಗಿದೆ. ಕಳೆದ ಕೆಲ ವರ್ಷಗಳಿಂದ ಗ್ಯಾಂಗ್ರಿನ್ ನಿಂದ ಬಳಲುತ್ತಿರುವ ಕಾರಣ ಹಣದ ಸಮಸ್ಯೆ ಇದೆ ನಿಜ. ಆದರೆ ಜನರಿಂದ ಹಣ ಪಡೆಯುವುದು ಇಷ್ಟವಿಲ್ಲ. ಫಿಲ್ಮ್ ಚೇಂಬರ್, ಸರ್ಕಾರ ಅಥವ ಇನ್ಶೂರೆನ್ಸ್ ಕಡೆಯಿಂದ ಹಣ ಕೊಟ್ಟರೆ ಚಿಕಿತ್ಸೆಗೆ ಸಹಾಯವಾಗುತ್ತದೆ ಎಂದು ನಟ ಸತ್ಯಜಿತ್ ಪುತ್ರ ಆಕಾಶ್ ಜಿತ್ ಅವರು ಮನವಿ ಮಾಡಿದ್ದಾರೆ.

650 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕೆಎಸ್​ಆರ್​ಟಿಸಿಯಲ್ಲಿ ಚಾಲಕನಾಗಿದ್ದ ಇವರಿಗೆ ಮೊದಲು ನಾನಾ ಪಾಟೇಕರ್ ಜತೆ ಅಂಕುಶ್​ ಸಿನಿಮಾದಲ್ಲಿ ವಿಲನ್​ ಆಗಿ ಅಭಿನಯಿಸುವ ಅವಕಾಶ ಸಿಕ್ಕಿತ್ತು .ಎರಡು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗಳಿದ್ದಾಳೆ.

Copyright © All rights reserved Newsnap | Newsever by AF themes.
error: Content is protected !!