December 26, 2024

Newsnap Kannada

The World at your finger tips!

mandya ukrean

ಭಾರತದ ಎಂಬಸ್ಸಿಗೆ ಸೆಲ್ಯೂಟ್ : ಉಕ್ರೇನ್​ನಿಂದ ಮರಳಿ ಮಂಡ್ಯದ K R S ಹುಡುಗ ಹೇಳಿದ್ದು ಹೀಗೆ…..

Spread the love

ಉಕ್ರೇನ್​ ಮತ್ತು ರಷ್ಯಾದ ನಡುವಿನ ಭೀಕರ ಯುದ್ದದ ಮಧ್ಯೆಯು ತಾಯ್ನಾಡಿಗೆ ಆಗಮಿಸಿದ ಮಂಡ್ಯದ K R S ಮನೋಜ್ ಎಂಬ ವಿದ್ಯಾರ್ಥಿ ಉಕ್ರೇನ್​ನಲ್ಲಿನ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದು ಹೀಗೆ…..

ನಾನು ಕಾರ್ಕಿವ್​ ಅಲ್ಲಿ ವಾಸವಾಗಿದ್ದೆ. ರಷ್ಯಾ ಕಿವ್​ ನಗರವನ್ನು ಆಕ್ರಮಣ ಮಾಡಿದೆ.
ಈ ಸಂದರ್ಭದಲ್ಲಿ ಅಲ್ಲಿನ ವಿದ್ಯಾರ್ಥಿಗಳೆಲ್ಲ ತುಂಬಾ ಭಯಭೀತರಾಗಿದ್ದರು. ಬಾಂಬ್​ ಬ್ಲಾಸ್ಟ್ ಆಗುತ್ತಿತ್ತು. ಇನ್ನು ಯುದ್ದದ ಬಗ್ಗೆ ನಮಗೆ ಎಂಬಸ್ಸಿಯವರು ಮೊದಲೇ ಇನ್ಫರ್ಮ್ ಮಾಡಿದ್ದರು.

ಆದರೆ ವಿಶ್ವವಿದ್ಯಾಲಯದಲ್ಲಿ ನಮಗೆ ಯಾವುದೆ ರೀತಿಯ ಮಾಹಿತಿ ನೀಡಲಿಲ್ಲ ಎಂದರು.

ಯುದ್ದ ಶುರು ಆದ ಮೇಲೆ ತುಂಬಾ ಭಯ ಇತ್ತು. ಎಲ್ಲರೂ ಬಂಕರ್​ ಮತ್ತೆ ಮೆಟ್ರೋಗಳ ಬಳಿ ಬಂದೆವು. ಅಲ್ಲಿ ರೈಲಿನಲ್ಲಿ ಉಕ್ರೇನ್ನರಿಗೆ ಮಾತ್ರ ರೈಲಿನಲ್ಲಿ ಬರುವ ಅವಕಾಶ ಇತ್ತು.

ನಮಗೆ ಕಡಿಮೆ ಆದರೆ ಭಾರತೀಯ ಹೆಣ್ಣು ಮಕ್ಕಳಿಗೆ ಹೋಗಲು ಅವಕಾಶ ಇತ್ತು.

ಪೋಲ್ಯಾಂಡ್​ ಗಡಿಯವರೆಗೂ ಬರುವುದಕ್ಕೆ ತುಂಬಾ ತೊಂದರೆ ಆಯಿತು. ನಂತರ ಯಾವುದೇ ರೀತಿಯ ತೊಂದರೆ ಇಲ್ಲದೆ ದೆಹಲಿಗೆ ತಲುಪಿದೆ.

ನಿಜಕ್ಕೂ ನಮ್ಮ ಭಾರತದ ಎಂಬಸ್ಸಿಗೆ ಸೆಲ್ಯೂಟ್ ಮಾಡ್ತೀನಿ. ಬೇರೆ ದೇಶದ ಎಂಬಸ್ಸಿ ಅವರಿಗಿಂತ ನಮ್ಮ ದೇಶದ ಎಂಬಸ್ಸಿ ತುಂಬಾ ಕೇರ್​ ಮಾಡಿದ್ದಾರೆ ಎಂದು ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!