ಬಾಲಿವುಡ್‌ ನಟ ಸಲ್ಮಾನ್‌ ಖಾನ್‌, ತಂದೆ ಸಲೀಂ ಖಾನ್‌ಗೆ ಬೆದರಿಕೆ ಪತ್ರ

Team Newsnap
2 Min Read

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಮತ್ತು ಅವರ ತಂದೆ ಸಲೀಂ ಖಾನ್‌ ಅವರಿಗೆ ಅಪರಿಚಿತ ವ್ಯಕ್ತಿಯಿಂದ ಪ್ರಾಣ ಬೆದರಿಕೆ ಪತ್ರ ಬಂದಿದೆ

ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಸಿದ್ದಾರೆ. ಭಾನುವಾರ ಬೆಳಗ್ಗೆ ಸಲೀಂ ಖಾನ್‌ ವಾಕಿಂಗ್‌ಗೆ ತೆರಳಿದ್ದಾಗ ಎಂದಿನಂತೆ ಬಾಂದ್ರಾ ಬ್ಯಾಂಡ್‌ಸ್ಟಾಂಡ್‌ನ‌ಲ್ಲಿ ಕುಳಿತಿದ್ದರು. ಆಗ ಅಲ್ಲಿ ಇಡಲಾಗಿದ್ದ ಪತ್ರ ಅವರ ಗಮನಕ್ಕೆ ಬಂದಿದೆ. ಇದನ್ನು ಓದಿ –

ಅದರಲ್ಲಿ, ‘ಸಲೀಂ ಮತ್ತು ಸಲ್ಮಾನ್‌ ಖಾನ್‌, ಆದಷ್ಟು ಬೇಗ ನಿಮಗೆ ಮೂಸೆವಾಲನ ಸ್ಥಿತಿ ಬರಲಿದೆ’ ಎಂದು ಬರೆಯಲಾಗಿತ್ತು.

ಕಂದಕಕ್ಕೆ ಬಿದ್ದ ಚಾರ್​ ಧಾಮ್​ಗೆ ತೆರಳುತ್ತಿದ್ದ ಬಸ್​; 22 ಮಧ್ಯಪ್ರದೇಶದ ಯಾತ್ರಿಕರ ಸಾವು

ಚಾರ್​ ಧಾಮ್​ಗೆ ತೆರಳುತ್ತಿದ್ದ 28 ಯಾತ್ರಾರ್ಥಿಗಳಿದ್ದ ಬಸ್​ ಕಂದಕಕ್ಕೆ ಬಿದ್ದು 22 ಜನರು ಸಾವನ್ನಪ್ಪಿದ್ದಾರೆ.

ಯಮುನೋತ್ರಿಗೆ ತೆರಳುತ್ತಿದ್ದ . ಮಧ್ಯಪ್ರದೇಶದ ಪನ್ನಾ ಜಿಲ್ಲೆಯಿಂದ 28 ಯಾತ್ರಾರ್ಥಿಗಳನ್ನು ಕರೆದುಕೊಂಡು ಬಸ್ ಉತ್ತರಕಾಶಿ ಜಿಲ್ಲೆಯ ದಮ್ತಾ ಬಳಿ ಕಂದಕಕ್ಕೆ ಬಿದ್ದಿದೆ ಎಂದು ರಾಜ್ಯ ಡಿಜಿಪಿ ಅಶೋಕ್ ಕುಮಾರ್ ತಿಳಿಸಿದ್ದಾರೆ.

15 ಜನರ ಮೃತದೇಹಗಳನ್ನು ಹೊರತೆಗೆಯಲಾಗಿದೆ 6 ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅವರು ಹೇಳಿದರು. ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಪ್ರಸ್ತುತ ಸ್ಥಳದಲ್ಲಿದ್ದಾರೆ.

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘಟನೆ ಸಂಬಂಧ ಟ್ವೀಟ್ ಮಾಡಿ, ಉತ್ತರಾಖಂಡದ ಚಾರ್​ ಧಾಮ್​ಗೆ ತೀರ್ಥಯಾತ್ರೆಗಾಗಿ ಯಮುನೋತ್ರಿ ಧಾಮಕ್ಕೆ ಹೋಗುತ್ತಿದ್ದ ಬಸ್ಸು ಕಂದಕಕ್ಕೆ ಬಿದ್ದು ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಯಾತ್ರಿಕರು ಸಾವನ್ನಪ್ಪಿದ್ದಾರೆ. ಮೃತರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಮತ್ತು ಮೃತರ ಕುಟುಂಬ ಸದಸ್ಯರಿಗೆ ಅವರ ಅಗಲಿಕೆಯನ್ನು ಭರಿಸುವ ಶಕ್ತಿ ನೀಡಲಿ ಎಂದು ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ಅಮಿತ್ ಶಾ ಅವರು ಅಪಘಾತದ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದು, ಅಪಘಾತದ ಬಗ್ಗೆ ಮುಖ್ಯಮಂತ್ರಿ ಪುಷ್ಕರ್ ಧಾಮಿ ಅವರೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ. “ಉತ್ತರಾಖಂಡದಲ್ಲಿ ಭಕ್ತರ ಬಸ್ ಕಂದಕಕ್ಕೆ ಬಿದ್ದಿರುವ ಬಗ್ಗೆ ಕೇಳಲು ತುಂಬಾ ದುಃಖವಾಗಿದೆ. ಈ ಕುರಿತು ಮುಖ್ಯಮಂತ್ರಿ ಪುಷ್ಕರ್ ಧಾಮಿ ಅವರೊಂದಿಗೆ ಮಾತನಾಡಿದ್ದೇನೆ. ಸ್ಥಳೀಯ ಆಡಳಿತ ಮತ್ತು ಎಸ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. ಎನ್‌ಡಿಆರ್‌ಎಫ್ ಕೂಡ ಶೀಘ್ರದಲ್ಲೇ ಅಲ್ಲಿಗೆ ತಲುಪಲಿದೆ ಎಂದು ಅವರು
ಟ್ವೀಟ್ ಮಾಡಿದ್ದಾರೆ.

Share This Article
Leave a comment