ಕ್ರೀಡಾ ಲೋಕಕ್ಕೆ ಗುಡ್ ಬೈ ಹೇಳಿ ಅಭಿಮಾನಿಗಳಿಗೆ ಶಾಕ್ ಕೊಟ್ಟ – ಸಿಂಧು

Team Newsnap
3 Min Read

ಭಾರತದ ಬ್ಯಾಡ್ಮಿಂಟನ್ ತಾರೆ, ಒಲಿಂಪಿಕ್ ಪದಕ ವಿಜೇತೆ ಪಿ.ವಿ ಸಿಂಧು ಅಭಿಮಾನಿಗಳಿಗೆ ಬಹುದೊಡ್ಡ ಶಾಕ್ ನೀಡಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ‘ನಾನು ನಿವೃತ್ತಿಯಾಗುತ್ತಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.

ಫಿಟ್ನೆಸ್, ಗಾಯಗಳ ಕಾರಣಗಳನ್ನು ಮುಂದಿಟ್ಟ ಸಿಂಧೂ ಬ್ಯಾಡ್ಮಿಂಟನ್‌ನಿಂದ ನಿವೃತ್ತಿಯಾಗುತ್ತಿರುವಂತೆ ಬರೆದುಕೊಂಡಿದ್ದಾರೆ.

ಡೆನ್ಮಾರ್ಕ್ ಒಪನ್ ನನ್ನ ಕೊನೆಯ ಪ್ರವಾಸ ಎಂದು ಆರಂಭಿಸಿದ ಸಿಂಧೂ, ನನ್ನ ದೊಡ್ಡ ಬರಹವನ್ನು ಸಂಪೂರ್ಣ ಓದಿದಾಗ ನಿಮಗೆ ಅಚ್ಚರಿಯಾಗ ಬಹುದು. ಈ ಲಾಕ್‌ಡೌನ್ ಹಲವು ಪಾಠಗಳನ್ನು ಕಲಿಸಿದೆ. ಹಲವು ದಿನಗಳಿಂದ ಮನೆಯಲ್ಲೇ ಇದ್ದೇನೆ. ಡೆನ್ಮಾರ್ಕ್ ಒಪನ್‌ನೊಂದಿಗೆ ವಿದಾಯ ಹೇಳುತ್ತಿದ್ದೇನೆ ಎಂಬ ಅರ್ಥದಲ್ಲಿ ಬರೆದುಕೊಂಡಿದ್ದಾರೆ.

ಬರಹದ ಅಂತ್ಯದಲ್ಲಿ ನಾನು ವೈರಸ್ ಕುರಿತು ತೋರಿದ ಅಸಡ್ಡೆ, ಶುಚಿತ್ವದೆಡೆಗಿರುವ ನಿರ್ಲಕ್ಷ್ಯತನದಿಂದ ನಿವೃತ್ತಿಯಾಗಲು ಬಯಸುತ್ತೇನೆ, ನಾನು ಅಶಾಂತಿಯಿಂದ ಕೂಡಿದ ಈ ಜಗತ್ತಿನ ಮನಸ್ಥಿತಿಯಿಂದ ನಿವೃತ್ತಿಯಾಗಲು ಬಯಸುತ್ತೇನೆ, ಋಣಾತ್ಮಕ ಅಂಶಗಳಿಂದ, ಕೆಟ್ಟ ಆಲೋಚನೆಗಳಿಂದ ನಿವೃತ್ತಿಯಾಗುತ್ತಿದ್ದೇನೆ ಎಂದು ಪಿವಿ ಸಿಂಧೂ ಸ್ಪಷ್ಟವಾಗಿ ಹೇಳಿದ್ದಾರೆ. ಈ ಮೂಲಕ ತಾನೂ ಕ್ರೀಡೆಯಿಂದ ನಿವೃತ್ತಿಯಾಗುತ್ತಿಲ್ಲ, ಬದಲಾಗಿ ಮತ್ತಷ್ಟು ಬಲಿಷ್ಠವಾಗಿ ಮುಂದಿನ ಟೂರ್ನಿ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.

ಸಾಧಾರಣ ಕುಟುಂಬದ ಆಟಗಾರ್ತಿ:

ಸಾಧಾರಣ ಕುಟುಂಬದಿಂದ ಬಂದ ಸಿಂಧು ಸಾಧನೆಯಪಥ ಎಂಥವರನ್ನು ಪ್ರೇರೇಪಿಸುವಂಥದ್ದು. ಪಿ.ವಿ ರಮಣ ಹಾಗೂ ಪಿ.ವಿಜಯ ಇಬ್ಬರೂ ಮಾಜಿ ವಾಲಿಬಾಲ್ ಆಟಗಾರರ ಕನಸಿನ ಕೂಸು ಸಿಂಧು ಹೈದರಾಬಾದ್ ನಲ್ಲಿ ಜನಿಸಿದರು. ವೃತ್ತಿಪರ ವಾಲಿಬಾಲ್ ಅಟಗಾರ ರಮಣ ಅವರೂ ಸಹ ಭಾರತ ಸರ್ಕಾರದ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಪಾತ್ರರಾಗಿದ್ದರು. ಖ್ಯಾತ ವಾಲಿಬಾಲ್ ಆಟಗಾರದ ಪುತ್ರಿ ಸಿಂಧು ಮಾತ್ರ ಬ್ಯಾಡ್ಮಿಂಟನ್ ಕಡೆಗೆ ಆಕರ್ಷಿತರಾದರು.

ಸಾಧನೆಯ ದಾರಿಗಳು:

ಎಂಟನೇ ವಯಸ್ಸಿಗೇ ಬ್ಯಾಡ್ಮಿಂಟನ್ ತರಬೇತಿ ಅರಂಭಿಸಿದ ಸಿಂಧು ಮೊದಲಿಗೆ ಸಿಕಂದರಾಬಾದ್ ನ ಭಾರತೀಯ ರೈಲ್ವೇ ಇನ್ಸ್ ಟಿಟ್ಯೂಟ್ ಆಫ್ ಸಿಗ್ನಲ್ ಎಂಜಿನಿಯರಿಂಗ್ ಮತ್ತು ದೂರಸಂಪರ್ಕ ಸಂಸ್ಥೆಯ ಬ್ಯಾಡ್ಮಿಂಟನ್ ಕೋರ್ಟ್ ಗಳಲ್ಲಿ ಮೆಹಬೂಬ್ ಅಲಿ ಅವರ ಮಾರ್ಗದರ್ಶನದಲ್ಲಿ ಪ್ರಾಥಮಿಕ ತರಬೇತಿ ಪಡೆದರು. ನಂತರ ಉನ್ನತ ತರಬೇತಿಗಾಗಿ ಪ್ರೇರಣಾ ಗುರು ಪುಲ್ಲೇಲ ಗೋಪಿಚಂದ್ ಗರಡಿಯಲ್ಲಿ ತರಬೇತಿ ಪಡೆದರು. ಸಿಂಧು ಸಾಧನೆಗೆ ಗೋಪಿಚಂದ್ ಮಾರ್ಗದರ್ಶನ ಪ್ರಮುಖ ಅಸ್ತ್ರವಾಗಿತ್ತು.

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಚೊಚ್ಚಲ ಚಿನ್ನದ ಪದಕವನ್ನು ತಮ್ಮ ಪೋಷಕರಿಗೆ ಅರ್ಪಿಸಿದ ಸಿಂಧು ಸಾಧನೆಯ ಹಿಂದೆ ಪೋಷಕರ ಪರಿಶ್ರಮ ಅಪಾರವಿದೆ. ಸಿಂಧು ಸಾಧನೆಯ ಪ್ರತಿ ಹೆಜ್ಜೆಯಲ್ಲೂ ಸ್ವತಃ ಕ್ರೀಡಾಪಟು ವಾಗಿರುವ ತಂದೆ ರಮಣ ಅವರ ಮಾರ್ಗದರ್ಶನವಿದೆ. ಮಗಳ ರಿಯೋ ಒಲಿಂಪಿಕ್ಸ್ ತಯಾರಿಗಾಗಿ ರಮಣ ಅವರು ತಮ್ಮ ರೇಲ್ವೆ ನೌಕರಿಗೇ 8 ತಿಂಗಳು ರಜೆ ಹಾಕಿದ್ದರು. ಪ್ರತಿನಿತ್ಯ ಮುಂಜಾನೆ 4 ಗಂಟೆಗೆ ಮಗಳನ್ನು ಗೋಪಿಚಂದ್ ಅಕಾಡೆಮಿಗೆ ಕರೆತಂದು ಪ್ರತಿ ಬಾರಿಯೂ ಆಟದ ಕುರಿತು ಮಗಳೊಂದಿಗೆ ಚರ್ಚಿಸಿ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದ ತಂದೆಯ ಸೂಚನೆಗಳನ್ನೆಲ್ಲ ಸಿಂಧು ರಿಯೋನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಲು ಪರೋಕ್ಷ ಕಾರಣ ಎನ್ನಲಾಗಿದೆ.
ಸಿಂಧೂಗೆ ವಿಶ್ವ ರ್ಯಂಕ ಪಟ್ಟ
ಶಾಲಾಹಂತದಿಂದಲೇ ಸಾಕಷ್ಟು ಸ್ಪರ್ಧೆಗಳಲ್ಲಿ ಮಿಂಚಿದ್ದ ಸಿಂಧು ಇಂದು ವಿಶ್ವ ರ್ಯಾಂಕ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಅಗ್ರಮಾನ್ಯ ಕ್ರೀಡಾಳುವಾಗಿದ್ದಾರೆ. ಅಂತರರಾಷ್ಟ್ರೀಯ ವಲಯದಲ್ಲಿ 2009ರಲ್ಲಿ ಕೊಲಂಬೊದಲ್ಲಿ ನಡೆದ ಸಬ್ ಜೂನಿಯರ್ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಜಯಿಸಲು ಆರಂಭಿಸಿದ ಸಿಂದು ನಂತರ, 2010ರಲ್ಲಿ ಇರಾನ್ ಫಜ್ರ್ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಲೆಂಜ್ ಪಂದ್ಯಾವಳಿಯಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ, 2010ರಲ್ಲಿ ಮೆಕ್ಸಿಕೋದಲ್ಲಿ ನಡೆದ ಕಿರಿಯರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದರು. 2010ರ ಉಬರ್ ಕಪ್ ನಲ್ಲಿ ಭಾರತದ ರಾಷ್ಟ್ರೀಯ ತಂಡದಲ್ಲಿ ತಂಡದ ಸದಸ್ಯರಾಗಿದ್ದ ಅವರು, 2012 ನಡೆದ 19 ವರ್ಷದೊಳಗಿನವರ ಏಷ್ಯಾ ಯೂತ್ ಚ್ಯಾಂಪಿಯನ್ಷಿಪ್ ನಲ್ಲೂ ಸಾಧನೆಗೈದಿದ್ದರು. ಲಂಡನ್ ನಲ್ಲಿ ಜರುಗಿದ್ದ 2012ರ ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್ಸ್ ಪ್ರವೇಶಿಸಿದ್ದ 18ವರ್ಷದ 10ನೇ ಶ್ರೇಯಾಂಕದ ಸಿಂಧು ಏಳನೇ ಶ್ರೇಯಾಂಕಿತ ಚೀನೀ ಆಟಗಾರ್ತಿಯನ್ನು ಸೋಲಿಸಿ ವಿಶ್ವ ಚಾಂಪಿಯನ್ಶಿಪ್ನಲ್ಲಿ ಮಹಿಳೆಯರ ಸಿಂಗಲ್ಸ್ ನಲ್ಲಿ ಭಾರತಕ್ಕೆ ಮೊದಲ ಕಂಚಿನ ಪದಕವನ್ನು ತಂದಿದ್ದರು.

ರಿಯೊ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ ಸಿಂಧು ಅವರಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ 2016ರಲ್ಲಿ ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರು ಅಲ್ಲದೇ, ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಶಿಪ್ ‌ನಲ್ಲಿ ಎರಡು ಬಾರಿ ಕಂಚಿನ ಪದಕ ಗೆದ್ದಿರುವ ಭಾರತದ ಉದಯೋನ್ಮುಖ ಪ್ರತಿಭೆ ಸಿಂಧು ಚೀನಾದ ಮಕಾವ್ ನಲ್ಲಿ 74.6 ಲಕ್ಷರೂ ಬಹುಮಾನ ಮೊತ್ತದ ಮಕಾವ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಟೂರ್ನಿಯಲ್ಲಿ ಪ್ರಶಸ್ತಿ ಗಳಿಸಿದರು. 2017ರಲ್ಲಿ ಸೈಯದ್ ಮೋದಿ ಗ್ರ್ಯಾನ್ಪ್ರಿ ಗೋಲ್ಡ್‌ ಪ್ರಶಸ್ತಿ ಪಡೆದ ಸಿಂಧು, 2016 ವರ್ಷ ರಿಯೊ ಡಿ ಜನೈರೊದಲ್ಲಿ ನಡೆದಿದ್ದ ಒಲಿಂಪಿಕ್ಸ್ ನ ಮಹಿಳೆಯರ ಸಿಂಗಲ್ಸ್ ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

Share This Article
Leave a comment