ಎಸ್.ಸಿ.ಒ. ಶೃಂಗಸಭೆಯನ್ನು ಬಹಿಷ್ಕರಿಸಿದ – ಅಜಿತ್ ದೋವಲ್

Team Newsnap
1 Min Read

ರಷ್ಯಾದ ಮಾಸ್ಕೊದಲ್ಲಿ ನಡೆದ ಶಾಂಘೈ ಸಹಕಾರ ಒಕ್ಕೂಟ (ಎಸ್ ಸಿ ಓ) ಶೃಂಗ ಸಭೆಯಲ್ಲಿ ಪಾಕ್ ನಡೆಸಿದ ಪುಂಡಾಟಕ್ಕೆ ಬಹಿಷ್ಕಾರದ ಅಸ್ತ್ರವನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್
ಪ್ರಯೋಗಿಸಿದ್ದಾರೆ.

‘ಪಾಕಿಸ್ತಾನವು ಭಾರತದ ಸೇರಿದ ಭೂ ಭಾಗಗಳನ್ನು ಒಳಗೊಂಡ ಹೊಸ ನಕ್ಷೆ ಯೊಂದನ್ನು ಬಿಡುಗಡೆ ಮಾಡಿ, ಅದರಲ್ಲಿರುವ ಭಾರತದ ಪ್ರದೇಶಗಳು ತನ್ನ ದೇಶಕ್ಕೆ ಸೇರಿದೆ ಎಂಬ ಪುಂಡು ವಾದವನ್ನು ಹೂಡಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಪಾಕ್ ಯಾವುದೇ ಸ್ಷಷ್ಟ ಉತ್ತರವನ್ನು ನೀಡಲಿಲ್ಲ. ಸಭೆಯ ಅಧ್ಯಕ್ಷತೆ ವಹಿಸಿದ್ದ ರಷ್ಯಾವು ಭಾರತದ ವಾದ ಸರಿ ಎನ್ನಿಸಿದರೂ ಮೌನಕ್ಕೆ ಜಾರಿತ್ತು. ನಿರೀಕ್ಷೆಯಂತೆ ಚೀನಾ ತನ್ನ ಮಿತ್ರ ರಾಷ್ಟ್ರ ಪಾಕಿಸ್ತಾನವನ್ನು ಬೆಂಬಲಿಸಿತ್ತು. ಈ ಧೋರಣೆಯನ್ನು ವಿರೋಧಿಸುವ ಉದ್ದೇಶದಿಂದ ಅಜಿತ್ ದೋವಲ್ ಸಭೆ ಬಹಿಷ್ಕಾರದ ಅಸ್ತ್ರವನ್ನು ಪ್ರಯೋಗಿಸಿ ಸಭೆಯಿಂದ ಹೊರನಡೆದಿದ್ದಾರೆ.

ನಮ್ಮ ಈ ನಡೆ ಪಾಕಿಸ್ತಾನಕ್ಕೆ ಎಚ್ಚರಿಕೆಯೂ ಹೌದು.’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾತ್ಸವ್ ಹೇಳಿದ್ದಾರೆ.

‘ಪಾಕಿಸ್ತಾನದ ಈ ಮೊಂಡು ನಡೆ ಸರಿಯಲ್ಲ. ಕಾಲು ಕೆರೆದುಕೊಂಡು ನಮ್ಮ ಜೊತೆ ವಾದಕ್ಕಿಳಿಯುತ್ತಿದೆ. ಯುದ್ಧದ ಉಮೇದನ್ನು ಆ ರಾಷ್ಟ್ರ ಪ್ರದರ್ಶಿಸುತ್ತಿದೆ. ನಮ್ಮ ಬಳಿಯೂ ಅಸ್ತ್ರಗಳಿವೆ’ ಎಂದು ಅನುರಾಗ್ ಪಾಕಿಸ್ತಾನಕ್ಕೆ ಗಂಭೀರ ಎಚ್ಚರಿಕೆಯನ್ನು ನೀಡಿದ್ದಾರೆ.

TAGGED: , ,
Share This Article
Leave a comment