ಉಕ್ರೇನ್ ಮೇಲೆ ರಷ್ಯಾ ‘ವಾಕ್ಯೂಮ್ ಬಾಂಬ್’ ಬಳಕೆ ನಿಜ -ಇಂಗ್ಲೆಂಡ್

Team Newsnap
1 Min Read

ರಷ್ಯಾ ಸೇನೆ ಉಕ್ರೇನ್ ಮೇಲೆ ಮಾರಣಾಂತಿಕ TOS-1A ವೆಪನ್ ಬಳಸಿದೆ. ಈ ಕುರಿತಂತೆ ರಷ್ಯಾ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ ಎಂದು ಇಂಗ್ಲೆಂಡ್ ಹೇಳಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಲಂಡನ್ ರಕ್ಷಣಾ ಸಚಿವಾಲಯ, ರಷ್ಯಾದ ಸೇನೆ TOS-1A ವೆಪನ್ ಮೂಲಕ ವಾಕ್ಯೂಮ್ ಬಾಂಬ್​ಗಳನ್ನ ಬಳಸಿರುವುದು ನಿಜ ಆಗಿದೆ ಎಂದಿದೆ. 

TOS-1A ವೆಹಿಕಲ್ ಮೂಲಕಮಾರಣಾಂತಿಕ ಥರ್ಮೋಬಾರಿಕ್ ರಾಕೆಟ್ಸ್​, ವಾಕ್ಯೂಮ್ ಬಾಂಬ್ ಸ್ಪೋಟಿಸಲು ಬಳಸಲಾಗುತ್ತದೆ.

ಉಕ್ರೇನ್ ಮತ್ತು ಅಮೆರಿಕದ ಅಧಿಕಾರಿಗಳು ಈ ಬಗ್ಗೆ ರಷ್ಯಾದ ಮೇಲೆ ಆರೋಪ ಮಾಡಿದ್ದವು. ರಷ್ಯಾ ಸೇನೆ ಉಕ್ರೇನ್ ಮೇಲೆ ವ್ಯಾಕ್ಯೂಮ್ ಬಾಂಬ್​​ಗಳನ್ನು ಬಳಸಿದೆ.

ಕ್ಲಸ್ಟರ್ ಬಾಂಬ್ ಹಾಗೂ ವ್ಯಾಕ್ಯೂಮ್ ಬಾಂಬ್​ಗಳನ್ನು ಉಕ್ರೇನ್ ಮೇಲೆ ರಷ್ಯಾ ಪ್ರಯೋಗ ಮಾಡಿದೆ ಎಂದು ಉಕ್ರೇನ್ ಅಮೆರಿಕ ರಾಯಭಾರಿ ಒಕ್ಸಾನಾ ಮಾರ್ಕರೋವಾ ಗಂಭೀರ ಆರೋಪ ಮಾಡಿದ್ದರು. ಇದೀಗ ಇಂಗ್ಲೆಂಡ್ ಕೂಡ ಅದೇ ಆರೋಪವನ್ನು ರಷ್ಯಾದ ಮೇಲೆ ಮಾಡಿದೆ.

Share This Article
Leave a comment