ಭಾರತಕ್ಕೆ 35 ಡಾಲರ್ ರಿಯಾಯಿತಿ ದರದಲ್ಲಿ ರಷ್ಯಾ ಕಚ್ಚಾ ತೈಲ ಪೂರೈಕೆಗೆ ಒಪ್ಪಿಗೆ

Team Newsnap
0 Min Read

ಭಾರತದಲ್ಲಿ ಪ್ರತಿ ದಿನ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಏರಿಕೆಯಾಗುತ್ತಿದೆ. ಈ ಕಾರಣಕ್ಕಾಗಿ ರಿಯಾಯಿತಿ ದರದಲ್ಲಿ ಭಾರತಕ್ಕೆ ಕಚ್ಚಾ ತೈಲ ಪೂರೈಕೆ ಮಾಡಲು ರಷ್ಯಾ ಮುಂದಾಗಿದೆ.

ಯುದ್ಧಪೂರ್ವ ಬೆಲೆಯಲ್ಲಿ ಪ್ರತಿ ಬ್ಯಾರಲ್‌ಗೆ 35 ಡಾಲರ್‌ ರಿಯಾಯಿತಿಯಲ್ಲಿ ಭಾರತಕ್ಕೆ ಕಚ್ಚಾ ತೈಲವನ್ನು ನೀಡಲು ರಷ್ಯಾ ಒಪ್ಪಿಕೊಂಡಿದೆ

ಫೆಬ್ರವರಿ ಅಂತ್ಯದಿಂದ ಕಚ್ಚಾ ತೈಲ ದರ 10 ಡಾಲರ್‌ಗಿಂತ ಹೆಚ್ಚಾಗಿದೆ. ಏಷ್ಯಾದಲ್ಲಿ ಎರಡನೇ ಅತಿದೊಡ್ಡ ತೈಲ ಆಮದುದಾರನಾಗಿರುವ ಭಾರತವು ಈ ವರ್ಷಕ್ಕೆ ಒಪ್ಪಂದ ಮಾಡಿಕೊಂಡಿರುವಂತೆ, 15 ಮಿಲಿಯನ್ ಬ್ಯಾರೆಲ್‌ಗಳನ್ನು ತೆಗೆದುಕೊಳ್ಳುತ್ತದೆ ಎಂದು ರಷ್ಯಾ ಖಚಿತಪಡಿಸಿಕೊಳ್ಳಲು ಬಯಸಿದೆ.

ಈ ಸಂಬಂಧ ಎರಡೂ ರಾಷ್ಟ್ರಗಳು ಮಾತುಕತೆ ನಡೆಸಿವೆ ಎಂದು ವರದಿಯಾಗಿದೆ.

Share This Article
Leave a comment