ಶ್ರೀರಂಗಪಟ್ಟಣದ ಹುಲಿಕೆರೆಯಲ್ಲಿ ರೌಡಿ ಶೀಟರ್ ಸುಧೀರ್ ಹತ್ಯೆ

Team Newsnap
1 Min Read
Rowdy sheeter Sudhir killed in Hulikere, Srirangapatna ಶ್ರೀರಂಗಪಟ್ಟಣದ ಹುಲಿಕೆರೆಯಲ್ಲಿ ರೌಡಿ ಶೀಟರ್ ಸುಧೀರ್ ಹತ್ಯೆ

ಶ್ರೀರಂಗಪಟ್ಟಣ : ಸ್ನೇಹಿತರೊಂದಿಗೆ ಎಣ್ಣೆ ಪಾರ್ಟಿ ಮಾಡ್ತಿದ್ದಾಗ ಕತ್ತು ಕತ್ತರಿಸಿ ಕೊಲೆ ಮಾಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಹುಲಿಕೆರೆ ಬಳಿ ನಡೆದಿದೆ.

ಗುರುವಾರ ಬೆಳಗ್ಗೆ ರೌಡಿಶೀಟರ್‌ ಸುಧೀರ್‌ ಎಣ್ಣೆ ಪಾರ್ಟಿ ಮಾಡಲು ಸ್ನೇಹಿತರೊಂದಿಗೆ ಹೋಗಿದ್ದಾನೆ. ಈ ಪಾರ್ಟಿಯಲ್ಲಿ ಸುಧೀರ್, ಪೂರ್ಣಚಂದ್ರ ಹಾಗೂ ಇತರೆ ಸ್ನೇಹಿತರೊಂದಿಗೆ ಯಾವುದೋ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾನೆ.

ಪಾರ್ಟಿ ಜಾಗದಲ್ಲಿ ಸುಧೀರ್ ಮತ್ತು ಪೂರ್ಣಚಂದ್ರನ ನಡುವೆ ಗಲಾಟೆ ಆಗಿದೆ. ಇದಾದ ಬಳಿಕ ಸುಧೀರ್ ಪಾರ್ಟಿಯಿಂದ ಎದ್ದು ಬಂದಿದ್ದಾನೆ.

ಇದಾದ ಬಳಿಕ ಹುಲಿಕೆರೆಯ ರಸ್ತೆ ಬಳಿ ಬಂದ ಪೂರ್ಣಚಂದ್ರ ಹಾಗೂ ಸ್ನೇಹಿತರು ರೌಡಿಶೀಟರ್‌‌ ಸುಧೀರ್ ಕುತ್ತಿಗೆ ಕತ್ತರಿಸಿ ಪರಾರಿಯಾಗಿದ್ದಾರೆ.ರಸ್ತೆ ಬದಿ ಹಾಡಹಗಲೇ ನಡೆದಿರುವ ಭೀಕರ ಮರ್ಡರ್ ಬೆಚ್ಚಿ ಬೀಳಿಸಿದೆ.ತಹಶೀಲ್ದಾರ್ ರೈ ಮನೆ ಮೇಲೆ ಲೋಕಾ ದಾಳಿ – ಕೋಟಿಗಟ್ಟಲೇ ಆಸ್ತಿ , ಹಣ ಪತ್ತೆ

ಕೆ ಆರ್ ಎಸ್ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article
Leave a comment