December 26, 2024

Newsnap Kannada

The World at your finger tips!

police station mandya east mandya east mandya police f7im7j5

ರೌಡಿ ಅಶೋಕ್ ಪೈ ತಂಗಿಯನ್ನು ಬೆದರಿಸಿ 3 ಲಕ್ಷ ರು, 250 ಗ್ರಾಂ ಚಿನ್ನ ದೋಚಿದ ದರೋಡೆಕೋರರು

Spread the love

ತೋಟದ ಮನೆಯಲ್ಲಿದ್ದ ರೌಡಿ ಶೀಟರ್ ಅಶೋಕ್ ಫೈ ಸಹೋದರಿ ವಿಜಯಲಕ್ಷ್ಮಿ ಬೆದರಿಸಿ 3 ಲಕ್ಷ ನಗದು, 250 ಗ್ರಾಂ ಚಿನ್ನವನ್ನು ದರೋಡೆ ಮಾಡಿದ ಪ್ರಸಂಗ ಮದ್ದೂರು ತಾಲೂಕು ಹರಳಕೆರೆ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.

ಮಂಡ್ಯದ ರೌಡಿ ಅಶೋಕ್ ಪೈ ತಂಗಿಯ ಗಂಡ ಅಶ್ವಥ್ ಮನೆಯಲ್ಲಿ ದರೋಡೆ ನಡೆಸಿರುವ ದುಷ್ಕರ್ಮಿಗಳು ತಡರಾತ್ರಿ ಅಶ್ವಥ್ ಮನೆಗೆ ಮಾರಕಾಸ್ತ್ರಗಳೊಂದಿಗೆ ಬಂದ ದುಷ್ಕರ್ಮಿಗಳಿಂದ ಅಶೋಕ್ ಪೈ ಗಾಗಿ ಹುಡುಕಾಟ ಮಾಡಿದ್ದಾರೆ.

ಅಶೋಕ್ ಪೈ ಸಿಗದೆ ಇದ್ದಾಗ ಮನೆಯಲ್ಲಿದ್ದವರನ್ನು ಬೆದರಿಸಿ ಮನೆಯಲ್ಲಿದ್ದ ಹಣ ಮತ್ತು ಆಭರಣಗಳನ್ನು ಕಸಿದು ಪರಾರಿಯಾಗಿದ್ದಾರೆ.‌

ಮನೆಯಲ್ಲಿಟ್ಟಿದ್ದ 3 ಲಕ್ಷ ನಗದು 250ಗ್ರಾಂ ಆಭರಣಗಳನ್ನು ಬೆದರಿಸಿ ಕದ್ದೋಯ್ದಿರೋ ಅಪರಿಚಿತ ದುಷ್ಕರ್ಮಿಗಳು. ಸುದ್ದಿ ತಿಳಿದು ಸ್ಥಳಕ್ಕೆ ಪೊಲೀಸರ ಭೇಟಿ, ಪರಿಶೀಲನೆ ಮಾಡಿದರು.

ಶ್ಚಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿ ದುಷ್ಕರ್ಮಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಯಿತು. ಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.‌

Copyright © All rights reserved Newsnap | Newsever by AF themes.
error: Content is protected !!