ರೋಹಿಣಿ ವಿರುದ್ಧ ರೂಪ ಕಿಡಿ : ಆಕೆಯದ್ದು ತೋಳ ಬಂತು ತೋಳ ಕಥೆ – ತೋಳ ಹಿಡಿಯಲೇ ಇಲ್ಲ

Team Newsnap
1 Min Read
Not to make a defamatory statement : Court ban for Rupa - Big relief for Rohini ಮಾನಹಾನಿ ಹೇಳಿಕೆ ನೀಡದಂತೆ ಡಿ. ರೂಪಾಗೆ ಕೋರ್ಟ್ ನಿರ್ಬಂಧ - ರೋಹಿಣಿಗೆ ಬಿಗ್ ರಿಲೀಫ್

ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಕಾರ್ಯವೈಖರಿಯ ಬಗ್ಗೆ ಹಿರಿಯ ಐಪಿಎಸ್ ಅಧಿಕಾರಿ ಡಿ.ರೂಪ ಮತ್ತೆ ಅಸಮಧಾನ ವ್ಯಕ್ತಪಡಿಸಿದ್ದಾರೆ.

ರೂಪ ಸಾಮಾಜಿಕ ಜಾಲತಾಣದಲ್ಲಿ ರೋಹಿಣಿ ಸಿಂಧೂರಿ ಮೈಸೂರಿನಲ್ಲಿ ಡಿಸಿಯಾಗಿದ್ದ 10 ತಿಂಗಳು ‌ ಸಮಯದಲ್ಲಿ ಒಂದೇ ಒಂದು ಇಂಚು ಭೂಮಿಯನ್ನು ವಶಪಡಿಸಿಕೊಳ್ಳಲು ಆಗಲಿಲ್ಲ ಎಂದು ಟ್ವಿಟರ್ ನಲ್ಲಿ ವ್ಯಂಗ್ಯವಾಡಿದ್ದಾರೆ.

ಮೈಸೂರಿನ ಡಿಸಿಯಾಗಿದ್ದ ರೋಹಿಣಿ ಸಿಂಧೂರಿ ಹತ್ತು ತಿಂಗಳ ಅವಧಿಯಲ್ಲಿ ಒಂದು ಇಂಚು ಭೂಮಿಯನ್ನು ಕೂಡ ಭೂ ಮಾಫಿಯದಿಂದ ಪಡೆದುಕೊಳ್ಳಲಿಲ್ಲ. ಒತ್ತುವರಿ ಮಾಡಿದ್ದ ಭೂಗಳ್ಳರ ವಿರುದ್ಧ ಕಾನೂನಾತ್ಮಕವಾಗಿ ಕ್ರಮಕೈಗೊಳ್ಳಲಿಲ್ಲ. ಮೈಸೂರಿನಲ್ಲಿ ಆಗಿದ್ದಂತಹ ಭೂ ಮಾಫಿಯದ ವಿಚಾರದಲ್ಲಿ ಮೈಸೂರು ಡಿಸಿಯಾಗಿದ್ದ ರೋಹಿಣಿ ಸಿಂಧೂರಿ ಏನೂ ಮಾಡಲಿಲ್ಲ. ರೋಹಿಣಿ ಸಿಂಧೂರಿ ತೋಳ ಬಂತು ತೋಳ ಕಥೆ ಹೇಳಿಕೊಂಡು ಕಾಲ ಕಳೆದ್ರೆ ವಿನಃ ತೋಳ ಹಿಡಿಯುವ ಕೆಲಸ ಆಗಲೇ ಇಲ್ಲ‌ ಎಂದು ಹೇಳಿದ್ದಾರೆ.‌

ಸ್ವಿಮ್ಮಿಂಗ್ ಪೂಲ್ ವಿಚಾರ ಸಣ್ಣದಾಗಿದ್ದರೂ ಅದನ್ನು ಮಾಡಲು ಅನುಮತಿ ಪಡೆದಿಲ್ಲಾ ಅನ್ನೋದು ಮೈಸೂರು ವಿಭಾಗೀಯ ಕಮೀಷನರ್ ವರದಿಯಲ್ಲಿ ಬಹಿರಂಗವಾಗಿದೆ. ಅಕ್ರಮ ಯಾರೇ ಮಾಡಿದರು ಅಕ್ರಮನೇ ಭೂಮಾಫಿಯಾ ಸೇರಿದಂತೆ ಹಲವು ಪ್ರಕರಣಗಳಲ್ಲಿ ಇನ್ನು ಕ್ರಮ ಆಗಿಲ್ಲ, ಅಗತ್ಯ ಆಗಬೇಕು ಎಂದು ಒತ್ತಾಯಿಸಿದ್ದಾರೆ.

Share This Article
Leave a comment