ಮೈಸೂರಿನಲ್ಲಿ ಚರಂಡಿ ಸ್ವಚ್ಚತೆಗೆ ರೋಬೋಟ್ ಬಳಕೆ – ಆಯುಕ್ತ ಹೆಗ್ಡೆ

Team Newsnap
1 Min Read

ಸಾಂಸ್ಕ್ರತಿಕ ನಗರಿ ಮೈಸೂರಿನ ಒಳಚರಂಡಿ ಸ್ವಚ್ಚತೆಗೆ ರೊಬೋಟ್ ಯಂತ್ರ ಬಳಕೆಗೆ ನಿರ್ಧಾರ ಮಾಡಲಾಗಿದೆ.

ಇದು ಸ್ವಚ್ಛತಾ ವಾಹನ ಹೋಗದ ಕಡೆ, ಮ್ಯಾನ್‌ ಹೋಲ್‌ಗಳಲ್ಲಿ ಇಳಿದು ಮನುಷ್ಯರಂತೆ ಸ್ಚಚ್ಛತಾ ಕಾರ್ಯ ನಡೆಸಲಿದೆ ಎಂದು ನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗ್ಡೆ ತಿಳಿಸಿದ್ದಾರೆ.

ರಾಜ್ಯದಲ್ಲೇ ಮೊದಲ ಬಾರಿಗೆ ಮೈಸೂರು ಪಾಲಿಕೆ ಈ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ. ಒಳಚರಂಡಿ ಸ್ವಚ್ಚತೆ ಗಾಗಿ ರೊಬೋಟ್ ಬಳಕೆ ಮಾಡಲು ಈಗಾಗಲೇ ರೋಬೊಟ್ ಖರೀದಿ ಕೂಡ ಮಾಡಲಾಗಿದೆ ಎಂದು ಹೇಳಿದರು.

ಒಳಚರಂಡಿ ಕಾರ್ಮಿಕರ ಸುರಕ್ಷತೆಯನ್ನು ಪ್ರಧಾನವಾಗಿ ಪರಿಗಣಿಸಲಾಗಿದೆ. ಕಾರ್ಮಿಕರು ಅನಾರೋಗ್ಯ, ಅವಘಡಗಳ ತಪ್ಪಿಸಲು ಇದು ಸಹಾಯಕಾರಿಯಾಗಿದೆ.
ಶೀಘ್ರದಲ್ಲೇ ನಗರದ ಒಳಚರಂಡಿ ಸ್ವಚ್ಚತೆಗೆ ರೊಬೋಟ್ ಬಳಕೆ ಮಾಡಲಾಗುವುದು. ನಗರಾಭಿವೃದ್ಧಿ ಸಚಿವರಿಂದ ಯಂತ್ರಕ್ಕೆ ಚಾಲನೆ ಸಿಗಲಿದೆ ಎಂದು ಆಯುಕ್ತರು ತಿಳಿಸಿದರು.

Share This Article
Leave a comment