February 18, 2026

Newsnap Kannada

The World at your finger tips!

police 1

ಮನೆ ಬಾಗಿಲು ಒಡೆದು ಕಳುವು : 1.30 ಲಕ್ಷ ನಗದು ದೋಚಿದ ಖದೀಮರು

Spread the love

ಮೈಸೂರು :ಮನೆ ಬಾಗಿಲು ಮೀಟಿದ ಖದೀಮರು 1.30 ಲಕ್ಷ ನಗದು,ಒಂದು ಮೊಬೈಲ್ ಹಾಗೂ ಬೆಳ್ಳಿತಟ್ಟೆ ದೋಚಿ ಪರಾರಿಯಾಗಿರುವ ಘಟನೆ ಮೈಸೂರಿನ ವಿಜಯನಗರದ 4 ನೇ ಹಂತದಲ್ಲಿ ನಡೆದಿದೆ.

ಗ್ಯಾಸ್ ಸಿಲಿಂಡರ್ ಡೀಲರ್ ಆಗಿರುವ ಯಶವಂತ್ ಎಂಬುವರಿಗೆ ಸೇರಿದ ಮನೆಯಲ್ಲಿ ಘಟನೆ ನಡೆದಿದೆ.

ಯಶವಂತ್ ರವರು ಬೆಂಗಳೂರಿಗೆ ತೆರಳಿದ್ದ ವೇಳೆ ಖದೀಮರು ಬಾಗಿಲು ಮೀಟಿ 1.30 ಲಕ್ಷ ನಗದು,5 ಸಾವಿರ ಮೌಲ್ಯದ ಮೊಬೈಲ್,5 ಸಾವಿರ ಮೌಲ್ಯದ ಬೆಳ್ಳಿ ತಟ್ಟೆ ದೋಚಿ ಪರಾರಿಯಾಗಿದ್ದಾರೆ.

ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!