ಮೃತರು ಆಂಧ್ರದ ಗೊರೆಂಟ್ಲ ಮೂಲದವರಾಗಿದ್ದು ಬೆಂಗಳೂರಿನ ಹೊಂಗಸಂದ್ರದಲ್ಲಿ ವಾಸವಾಗಿದ್ದರು. ದಸರಾ ಹಬ್ಬಕ್ಕೆ ಗೊರೆಂಟ್ಲ ಗ್ರಾಮಕ್ಕೆ ತೆರಳಿದ್ದ ಇವರು ಹಬ್ಬ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಅರುಣಾ, ನವೀನ್ ಕುಮಾರ್, ನಂಜುಂಡಪ್ಪ, ಪದ್ಮಾವತಿ, ಋತ್ವಿಕ್ ಕುಮಾರ್ ಮೃತಪಟ್ಟಿದ್ದಾರೆ. ಉಳಿದ ಹೆಸರು ಲಭ್ಯವಾಗಿಲ್ಲ.
ಇಂದು ಬೆಳಗ್ಗೆ ಅತಿಯಾದ ಮಂಜು ಇತ್ತು. ಈ ಕಾರಣಕ್ಕೆ ಚಾಲಕನಿಗೆ ರಸ್ತೆಯ ಗುರುತು ಸಿಗದೇ ನಿಂತಿದ್ದ ಟ್ಯಾಂಕರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿರಬಹುದು ಎಂದು ಶಂಕಿಸಲಾಗಿದೆ.ನಟ ದರ್ಶನ್, ಜಗ್ಗೇಶ್, ರಾಕ್ ಲೈನ್ ವೆಂಕಟೇಶ್ ಗೆ ಅರಣ್ಯ ಇಲಾಖೆ ನೋಟೀಸ್
ಟಾಟಾ ಸುಮೋ ಬಹಳ ವೇಗವಾಗಿ ಸಂಚರಿಸುತಿತ್ತು. ಹೈದರಾಬಾದ್ – ಬೆಂಗಳೂರು ಹೈವೇಯಲ್ಲಿ ರಸ್ತೆಯ ಗುರುತು ಸಿಗದೇ ಈ ಕಾರು ಗುದ್ದಿರಬಹುದು. ಕಾರಿನಲ್ಲಿದ್ದ 14 ಮಂದಿ ಪೈಕಿ 10 ಮಂದಿ ಸ್ಥಳದಲ್ಲೇ ಸಾವನಪ್ಪಿದ್ದರೆ ಇಬ್ಬರು, ಮೂವರು ಮಾತ್ರ ಉಸಿರಾಡುತ್ತಿದ್ದರು ಎಂದು ತಿಳಿಸಿದ್ದಾರೆ
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು