July 6, 2022

Newsnap Kannada

The World at your finger tips!

accident

ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ – ಬೀದರ್ ನ ಒಂದೇ ಕುಟುಂಬದ 7 ಜನ ದುರಂತ ಸಾವು

Spread the love

ಉತ್ತರ ಪ್ರದೇಶದ ಕಾಶಿ ಯಾತ್ರೆಗೆ ತೆರಳಿದ್ದ ಬೀದರ್ ಜಿಲ್ಲೆಯ ಒಂದೇ ಕುಟುಂಬದ 7 ಜನರು ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.ಮೃತರು ಬೀದರ್ ಜಿಲ್ಲೆಯ ಗುಂಪಾ ಕಾಲೋನಿಯ ಒಂದೇ ಕುಟುಂಬದವರು ಎಂದು ತಿಳಿದುಬಂದಿದೆ.

ಕಾಶಿಯಿಂದ ಅಯೋಧ್ಯೆಗೆ ಟೆಂಪೋ ಟ್ರಾವಲರ್ ನಲ್ಲಿ ತೆರಳುತ್ತಿದ್ದ ವೇಳೆ ಲಖೀಂ ಪುರ ಬಳಿ ಲಾರಿಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.

ಮತ್ತೊಂದು ವಾಹನ ಓವರ್ ಟೇಕ್ ಮಾಡಲು ಹೋಗಿ ಈ ದುರಂತ ಸಂಭವಿಸಿದೆ. ಟೆಂಪೊದಲ್ಲಿದ್ದ ಕರ್ನಾಟಕದ 7 ಯಾತ್ರಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 9 ಜನರು ಗಂಭೀರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

error: Content is protected !!