January 5, 2025

Newsnap Kannada

The World at your finger tips!

accident

ಧಾರವಾಡದ ಬಳಿ ರಸ್ತೆ ದುರಂತ: ಅಪಘಾತದಲ್ಲಿ ಮಾಜಿ ಶಾಸಕರ ಸೊಸೆ ಸೇರಿ 13 ಕ್ಕೆ ಏರಿದ ಸಾವಿನ ಸಂಖ್ಯೆ

Spread the love

ಧಾರವಾಡ ಬಳಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಟೆಂಪೋ ಟ್ರಾವಲರ್ ಹಾಗೂ ಲಾರಿ ನಡುವೆ ಸಂಭವಿಸಿ ಮುಖಾ ಮುಖಿ ಡಿಕ್ಕಿ ಯಲ್ಲಿ ಮಾಜಿ ಶಾಸಕರ ಸೊಸೆ ಸೇರಿದಂತೆ ಸಾವಿನ ಸಂಖ್ಯೆ 13 ಕ್ಕೆ ಏರಿದೆ.

ಮಾಜಿ ಶಾಸಕ ಗುರು ಸಿದ್ದನಗೌಡರ ಪುತ್ರ ಡಾ ರವಿಕುಮಾರ್ ಪತ್ನಿ ಪ್ರೀತಿ ರವಿಕುಮಾರ್, ಡಾ. ಪ್ರಕಾಶ್ ಮತ್ತಿಹಳ್ಳಿ ಅವರ ಪತ್ನಿ ವೀಣಾ ಪ್ರಕಾಶ್ ಸೇರಿದಂತೆ 13 ಮಂದಿ ದುರಂತ ಸಾವು ಕಂಡಿದ್ದಾರೆ.

acc1

ಈ ಬೆಳಿಗ್ಗೆ 8 ಮಂದಿ ಸಾವು ಕಂಡಿದ್ದರು. ಭೀಕರವಾಗಿ ಗಾಯಗೊಂಡವರಲ್ಲಿ ಮತ್ತೆ ಐವರು ಆಸ್ಪತ್ರೆಗೆ ಸಾಗಿಸುವ ಮುನ್ನ ಹಾಗೂ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಒಟ್ಟು 13 ಮಂದಿ ದುರಂತ ಸಾವು ಕಂಡಂತೆ ಆಗಿದೆ.
ಈ ನಡುವೆ ಸತ್ತರೆಲ್ಲರೂ ದಾವಣಗೆರೆ ಎಂಸಿ ಬ್ಲಾಕ್ – ಎ , ಎಂಸಿಎ -ಬಿ ಹಾಗೂ ವಿದ್ಯಾನಗರ ನಿವಾಸಿಗಳು ಎಂದು ಗುರುತಿಸಲಾಗಿದೆ.

13 ಮಂದಿ ಪೈಕಿ 12 ಮಂದಿ ಬಾಲ್ಯದ ಸ್ನೇಹಿತರು ಆಗಿದ್ದಾರೆ. ಒಬ್ಬ ಮಾತ್ರ ಟೆಂಪೋ ಟ್ರಾವಲರ್ ಚಾಲಕ ಎಂದು ಗುರುತಿಸಲಾಗಿದೆ.

ಸತ್ತವರೆಲ್ಲರೂ ಸೆಂಟ್ ಫಾಲ್ಸ್ ಕಾನ್ವೆಂಟ್ ನ ಹಳೇ ವಿದ್ಯಾರ್ಥಿಗಳು. ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ಎಲ್ಕರೂ ಸೇರಿಕೊಂಡಾಗ ಗೋವಾ, ಪಣಜಿ ಟ್ರಿಪ್ ಗೆ ಹೋಗಲು ನಿರ್ಧರಿಸಿ, ಈ ಬೆಳಗಿನ ಜಾವ 3. 30ಕ್ಕೆ ದಾವಣಗೆರೆ ಯಿಂದ ಹೊರಟಿದ್ದರು

ಬೆಳಿಗ್ಗೆ 7.30 ರ ವೇಳೆಗೆ ಧಾರವಾಡ ಸಮೀಪದ ಇಟ್ಟಿಗಟ್ಟ ಮರಳು ತುಂಬಿದ ಲಾರಿ ಟೆಂಪೋ ಟ್ರಾವಲರ್ ಗೆ ಮುಖಾಮುಖಿ ಯಾಗಿ ಡಿಕ್ಕಿ ಹೊಡೆದಿದೆ.

WhatsApp Image 2021 01 15 at 1.59.54 PM

ಟೆಂಪೋದಲ್ಲಿ ಇದ್ದ 16 ಮಂದಿ ಮಹಿಳೆಯರ ಪೈಕಿ 12 ಮಂದಿ ದುರಂತ ಸಾವು ಕಂಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!