March 15, 2026

Newsnap Kannada

The World at your finger tips!

dubare

ದುಬಾರೆಯಲ್ಲಿ ರಿವರ್ ರ‍್ಯಾಫ್ಟಿಂಗ್ ಮತ್ತೆ ಆರಂಭ

Spread the love

ಕೊಡಗು ಜಿಲ್ಲೆಯ ದುಬಾರೆಯ ಕಾವೇರಿ ನದಿಯಲ್ಲಿ ಜಲಕ್ರೀಡೆ (ರಿವರ್ ರ‍್ಯಾಫ್ಟಿಂಗ್) ಗುರುವಾರದಿಂದ ಮತ್ತೆ ಆರಂಭಗೊಂಡಿದೆ.

dubare1


ಜಿಲ್ಲೆಯಲ್ಲಿ ಎಲ್ಲ ರೀತಿಯ ಜಲಕ್ರೀಡೆ ಮತ್ತು ಸಂಬಂಧಿತ ಚಟುವಟಿಕೆಗಳನ್ನು ನದಿಗಳಲ್ಲಿ, ತೊರೆ ಮತ್ತು ಕೆರೆಗಳಲ್ಲಿ ನಡೆಸಲು ಹಸಿರುನಿಶಾನೆ ತೋರಲಾಗಿದೆ. ಈಜುಕೊಳದಲ್ಲಿ ಕೇವಲ ಸ್ಪರ್ಧಾತ್ಮಕ ತರಬೇತಿ ಉದ್ದೇಶಕ್ಕೆ ಮಾತ್ರ ಅನುಮತಿ ಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.


ಕೊರೊನಾ ತೀವ್ರತೆಯ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ಇದನ್ನು ಸ್ಥಗಿತಗೊಳಿಸಲಾಗಿತ್ತು. ವೈಟ್ ವಾಟರ್ ಗೇಮ್ ಅನ್ನು ಪ್ರಾರಂಭಗೊಳಿಸಲು ಪ್ರವಾಸೋದ್ಯಮ ಇಲಾಖೆ ಉತ್ಸುಕವಾಗಿದೆ.

error: Content is protected !!