ಕರ್ನಾಟಕದ ಅಳಿಯ ರಿಷಿ ಸುನಕ್ ಬ್ರಿಟನ್ ಪ್ರಧಾನಿ – ಅ.28 ರಂದು ಪ್ರಮಾಣ ವಚನ ಸಾಧ್ಯತೆ ?

Team Newsnap
1 Min Read
Rishi Sunak is likely to be sworn in as Prime Minister of Britain on August 28? ಕರ್ನಾಟಕದ ಅಳಿಯ ರಿಷಿ ಸುನಕ್ ಬ್ರಿಟನ್ ಪ್ರಧಾನಿ - ಅ.28 ರಂದು ಪ್ರಮಾಣ ವಚನ ಸಾಧ್ಯತೆ ?

ಬ್ರಿಟನ್ ಪ್ರಧಾನ ಮಂತ್ರಿ ಸ್ಥಾನಕ್ಕೆ ಬಾರತೀಯ ಮೂಲದ ಕರ್ನಾಟಕದ ಅಳಿಯ ಹಾಗೂ ಬ್ರಿಟನ್‌ ಸಂಸದ ರಿಷಿ ಸುನಕ್ ಹೆಸರು ಪ್ರಬಲವಾಗಿ ಕೇಳಿ ಬರುತ್ತಿರುವ ಬೆನ್ನಲ್ಲೇ ಅವರ ಆಯ್ಕೆ ಬಹುತೇಕ ಖಚಿತ ಎನ್ನಲಾಗಿದೆ.

ಅರ್ಧಕ್ಕೂ ಹೆಚ್ಚು ಪ್ರಮಾಣದ ಟೋರಿ ಸಂಸದರು ರಿಷಿ ಪರವಾಗಿ ಕಂಡು ಬಂದಿದ್ದರಿಂದ ರಿಷಿ ಸುನಕ್ ( Rishi Sunak ) ಅವರು ಬ್ರಿಟನ್ ( Britain )ಮುಂದಿನ ಪ್ರಧಾನಿಯಾಗಿ ( Prime Minister ) ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.ಕೊಪ್ಪ ಕೆರೆಯಲ್ಲಿ ಈಜಲು ಹೋದ ವಿದ್ಯಾರ್ಥಿ ನೀರಿನ ರಭಸಕ್ಕೆ ಸಿಕ್ಕಿ ದುರಂತ ಸಾವು

ಅತ್ತ ಸಂಸದೆ ಪೆನ್ನಿ ಮೋರ್ಡಾಂಟ್ ಕೂಡ ಪ್ರಧಾನಿ ಸ್ಪರ್ಧೆಯಲ್ಲಿದ್ದಾರೆ ಅವರಿಗೆ ಟೋರಿ ಸಂಸದರ ಬೆಂಬಲ ಕಡಿಮೆ ಇದೆ ಎಂದು ತಿಳಿದು ಬಂದಿದೆ.

ದೊಡ್ಡ ಸವಾಲಿನ ಸಮಯದಲ್ಲಿ ನಾವು ಒಗ್ಗೂಡಬೇಕು. ನಮ್ಮ ಮುಂದಿನ ಪ್ರಧಾನಿಯಾಗಲು ನಮ್ಮ ಸಂಸದೀಯ ಪಕ್ಷದ ಬಹುಪಾಲು ಬೆಂಬಲ ರಿಷಿ ಸುನಕ್ ಅವರಿಗೆ ಇದೆ ಎಂಬುದು ಸ್ಪಷ್ಟವಾಗಿದೆ. ಅವರು ಅದಕ್ಕಾಗಿ ಅಗತ್ಯವಾದ ಪರಿಣತಿ ಮತ್ತು ಅನುಭವವನ್ನು ಹೊಂದಿದ್ದಾರೆ ಎಂದು ಕನ್ಸರ್ವೇಟಿವ್ ಪಾರ್ಟಿ ನಿಕಟಪೂರ್ವ ಅಧ್ಯಕ್ಷ ಬ್ರಾಂಡನ್ ಲೇವಿಸ್ ಟ್ವೀಟ್ ಮಾಡಿದ್ದಾರೆ.

ಬೋರಿಸ್ ಜಾನ್ಸನ್ ತಾವು ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ಪುನರಾಯ್ಕೆ ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ ನಂತರ ರಿಷಿ ಸುನಕ್ ಅವರ ದಾರಿ ಸುಗಮವಾಗಿದೆ.ನಾಳೆ ಸೂರ್ಯಗ್ರಹಣ : ರಾಜ್ಯದ ಹಲವು ದೇವಸ್ಥಾನಗಳಿಗೆ ಪ್ರವೇಶ ನಿರ್ಬಂಧ

ಸೋಮವಾರ ಸಂಜೆ ರಿಷಿ ಸುನಕ್ ಅವರ ಅಧಿಕೃತ ಆಯ್ಕೆಬಗ್ಗೆ ಪ್ರಕಟಣೆ ಹೊರಬೀಳಲಿದೆ, ಅ.28 ರಂದು ಪ್ರಮಾಣವಚನ ಸ್ವೀಕರಿಸಬಹುದು ಎಂದು ವರದಿಗಳು ಹೇಳಿವೆ.

Share This Article
Leave a comment