ನಟ, ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಪ್ರಗತಿ ದಂಪತಿಗಳ 2 ವರ್ಷದ ಪೋರ, ರಣ್ವಿತ್, ಕಪ್ಪು ಬಣ್ಣದ ಸೂಟು ತೊಟ್ಟು ಹಳದಿ ಬಣ್ಣದ ಪುಟ್ಟ ಲ್ಯಾಂಬೋರ್ಗಿನಿ ಕಾರು ಏರಿ ‘ಹೀರೋ’ ಲುಕ್ ನಲ್ಲಿ ಕಾಣಿಸಿಕೊಂಡಿ ದ್ದಾನೆ.
ಹಿಂದುಗಡೆ ಕೇಳಿ ಬರುವ ಹೀರೋ ಚಿತ್ರದ ರಿಧಮ್ ಬಿಜಿಗೆ ರಣ್ವಿತ್ ಥೇಟ್ ‘ಹೀರೋ’ನಂತೆಯೇ ಮಿಂಚಿದ್ದಾನೆ.
ರಿಷಬ್ ಶೆಟ್ಟಿ ಇಂದು ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ನೋಡಿದರೆ ಅಪ್ಪನಂತೆ ಮಗ ರಣ್ವಿತ್ ಕೂಡ ಕೂಡ ಸಿನಿಮಾಗೆ ಎಂಟ್ರಿ ಕೊಡುತ್ತಾನೆ ಎಂದು ಊಹಿಸಬಹುದು.
ರಿಷಬ್ ಶೆಟ್ಟಿ ಹಾಗೂ ಪ್ರಗತಿ ದಂಪತಿಯ ಪುತ್ರ ರಣ್ವಿತ್‍ಗೆ ಇಂದು ಎರಡನೇ ವರ್ಷದ ಜನ್ಮದಿನದ ಸಂಭ್ರಮ. ಈ ಸಡಗರವನ್ನು ಫಿಲ್ಮಿ ಸ್ಟೈಲಿನಲ್ಲಿಯೆ ಆಚರಿಸಿದ್ದಾರೆ ಶೆಟ್ಟರು.
ತಮ್ಮ ಮಗನಿಗೆ ಅಂದವಾದ ಉಡುಗೆ ತೊಡಿಸಿ, ಪುಟ್ಟದೊಂದು ಕಾರು ಕೊಡಿಸಿದ್ದಾರೆ.
ಮಕ್ಕಳು ಗೊಂಬೆಗೆ ಬಟ್ಟೆ ತೊಡಿಸಿ ಆಟ ಆಡಿದ್ರೆ, ಗೊಂಬೆಯಂತೆ ಮುದ್ದಾದ ಮಗುವಿಗೆ ಚಂದದ ಬಟ್ಟೆ ತೊಡಿಸಿ ಆಡಿ ಆನಂದಿಸೋದು ʼದೊಡ್ಡವರ ಮಕ್ಕಳಾಟʼ. ಇವತ್ತು ನಮ್ಮ ಬಂಗಾರಿಗೆ ಎರಡು ತುಂಬಿದೆ. ಈ ಸಂಭ್ರಮದಲ್ಲಿ ನಾನು ಪ್ರಗತಿ ಆಡಿದ ಮಕ್ಕಳಾಟವನ್ನು ನಿಮ್ಮೊಡನೆ ಹಂಚಿಕೊಳ್ತಿದ್ದೇವೆ ಎಂದು ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.