ನ್ಯೂಸ್ ಸ್ನ್ಯಾಪ್
ನವದೆಹಲಿ
ಮಧ್ಯಮ ವರ್ಗ ಕುಟುಂಬಗಳನ್ನು ನೀವು ನಾಶ ಮಾಡಿದ್ದೀರಿ ಎಂದು ನಟಿ ರಿಯಾ ಚಕ್ರವರ್ತಿ ತಂದೆ ನಿವೃತ್ತ ಸೇನಾ ಅಧಿಕಾರಿ ಇಂದ್ರಜಿತ್ ಚಕ್ರವರ್ತಿ ತುಂಬಾ ನೋವಿನಿಂದ
ಹೇಳಿದ್ದಾರೆ.
ನಟ ಸುಶಾಂತ್ ಸಿಂಗ್ ಆತ್ಮ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಪುತ್ರ ಶೋವಿಕ್ ಬಂಧನದ ನಂತರ ಇದೇ ಮೊದಲ ಬಾರಿಗೆ ಮೌನ ಮುರಿದು ಮಾತನಾಡಿದ, ಇಂದ್ರಜಿತ್
ನಿಮಗೆ ಅಭಿನಂದನೆಗಳು, ಈಗ ನನ್ನ ಮಗನನ್ನು ಬಂಧಿಸಿದ್ದೀರಿ. ಮುಂದೆ, ಬಂಧನ ಪಟ್ಟಿಯಲ್ಲಿ ನನ್ನ ಮಗಳು ರಿಯಾ ಕೂಡ ಇದ್ದಾಳೆ ಎಂಬುದು ನಂಗೆ ಗೊತ್ತು. ತುಂಬಾ
ವ್ಯವಸ್ಥಿತವಾಗಿ ಮಧ್ಯಮ ವರ್ಗದ ಕುಟುಂಬಗಳನ್ನು ನಾಶ ಮಾಡುವ ಪ್ರಯತ್ನಕ್ಕೆ ಕೈ ಹಾಕಿದ್ದೀರಿ. ಆದರೂ ನಂಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇರುವುದರಿಂದ ನಾನು
ನ್ಯಾಯ ಪಡೆದು ಕೊಳ್ಳುತ್ತೇನೆ ಜೈ ಹಿಂದ್ ಎಂದು ಹೇಳಿದರು.
ನನ್ನ 24 ವರ್ಷದ ಪುತ್ರನನ್ನು ಬಂಧಿಸಿದ ಕ್ರಮವನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದಿದ್ದಾರೆ.
ಈ ನಡುವೆ ಸುಶಾಂತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದ್ರಜಿತ್ ಚಕ್ರವತರ್ಿಯನ್ನೂ ಸಹ ಸಿಬಿಐ ವಿಚಾರಣೆಗೆ ಒಳ ಪಡಿಸಿದೆ.
More Stories
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ
ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ