ಎನ್ಈಪಿ ಕುರಿತು ನಾಳೆ ರಾಜ್ಯಪಾಲರುಗಳ ಸಮಾವೇಶ

Team Newsnap
1 Min Read
Pic credits : digitalleaarning.eletsonline.com

ನ್ಯೂಸ್ ಸ್ನ್ಯಾಪ್
ನವದೆಹಲಿ
ರಾಷ್ಟ್ರೀಯ ನೀತಿ ಕುರಿತ ದೇಶದ ಎಲ್ಲಾ ರಾಜ್ಯಪಾಲರ ಮಹತ್ವದ ಸಭೆಯೊಂದು ನಾಳೆ ನವದೆಹಲಿಯಲ್ಲಿ ನಡೆಯಲಿದೆ. ವಿಡಿಯೋ ಲಿಂಕ್ ಮೂಲಕ ದೇಶದ ರಾಷ್ಟ್ರಪತಿ ಕೋವಿಂದ್ ಹಾಗೂ ಪ್ರಧಾನ ಮಂತ್ರಿ ಮೋದಿ ಉದ್ಘಾಟನಾ ಭಾಷಣ ಮಾಡಲಿದ್ದಾರೆ.
ಕೇಂದ್ರ ಶಿಕ್ಷಣ ಸಚಿವಾಲಯ ಆಯೋಜಿಸಿರುವ ಈ ಸಮಾವೇಶದಲ್ಲಿ ಉನ್ನತ ಶಿಕ್ಷಣದ ಪರಿವರ್ತನೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಈಪಿ) ಪಾತ್ರ 2020 ಕುರಿತು ಚರ್ಚೆಗಳು ನಡೆಯಲಿವೆ. ರಾಜ್ಯಪಾಲರೊಂದಿಗೆ ಎಲ್ಲಾ ರಾಜ್ಯದ ಶಿಕ್ಷಣ ಸಚಿವರು, ವಿವಿಗಳ ಉಪ ಕುಲಪತಿಗಳು ಹಾಗೂ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಸರ್ಕಾರವು ರಾಷ್ಟ್ರೀಯ ನೀತಿ ಜಾರಿಗೊಳಿಸಿದ ನಂತರ ಮೊದಲ ಸಭೆ ಇದಾಗಿದೆ. 34 ವರ್ಷಗಳ ನಂತರ ರಾಷ್ಟ್ರೀಯ ಶಿಕ್ಷಣ ನೀತಿಗೆ ಹೊಸ ರೂಪ ನೀಡಲಾಗಿದೆ.ಶಾಲೆ ಮತ್ತು ಉನ್ನತ ಶಿಕ್ಷಣ ಎರಡರಲ್ಲೂ ಈ ನೀತಿ ಮಹತ್ವದ ಬದಲಾವಣೆ ತರಲಿದೆ.

Share This Article
Leave a comment