ಮಂಗಾಡಹಳ್ಳಿ ಗ್ರಾಮದಲ್ಲಿ ಯಶಸ್ವಿ ಯಾದ ಕಂದಾಯ ಅದಾಲತ್

Team Newsnap
1 Min Read

ಜಿಲ್ಲಾಧಿಕಾರಿ ಸೂಚನೆಯಂತೆ ಪೌತಿಖಾತಾ ಆಂದೋಲನ ಹಾಗೂ ಕಂದಾಯ ಅದಾಲತ್ ಕಾರ್ಯಕ್ರಮವನ್ನು ಚನ್ನಪಟ್ಟಣ ತಾಲ್ಲೂಕಿನ ವಿರೂಪಾಕ್ಷಷಿಪುರ ಹೋಬಳಿಯ ಮಂಗಾಡಳ್ಳಿಯಲ್ಲಿ ಉಪತಹಶೀಲ್ದಾರ್ ದಿನಕರನ್ ರವರ ಅಧ್ಯಕ್ಷತೆಯಲ್ಲಿ ನೆರವೇರಿತು.

ಈ ವೇಳೆ ಮಾತನಾಡಿದ ಉಪತಹಶೀಲ್ದಾರ್ ದಿನಕರನ್, ರಾಜ್ಯ ಸರ್ಕಾರದ ಕಂದಾಯ ಇಲಾಖೆಯು ಹಲವು ರೈತರ ಯೋಜನೆಗಳನ್ನು ಜಾರಿಗೆ ತಂದಿದ್ದು, ಕಂದಾಯ ಅದಾಲತ್ ನ ಪಹಣಿ ತಿದ್ದುಪಡಿ, ಪೌತಿ ಖಾತೆ ಆಂದೋಲನ, ಫ್ರೂಟ್ಸ್ ತಂತ್ರಾಂಶ ದಲ್ಲಿ ರೈತರು ತಮ್ಮ ಜಮೀನುಗಳ ಪಹಣಿ ಪತ್ರಿಕೆ ಯೊಂದಿಗೆ ಆಧಾರ್ ನಂ ಲಿಂಕ್ ಮಾಡಿಸಿಕೊಳ್ಳ ಬೇಕಾಗಿ ಮತ್ತು ಗ್ರಾಮದ 60 ವರ್ಷ ಮೇಲ್ಪಟ್ಟ ನಾಗರೀಕರು ತಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ 19 ನ ಲಸಿಕೆಯನ್ನು ಉಚಿತವಾಗಿ ಪಡೆದುಕೊಳ್ಳ ಬೇಕಾಗಿ ಕೋರಿದರು.

ಮಂಗಾಡಹಳ್ಳಿ ಕಂದಾಯವೃತ್ತದ ಗ್ರಾಮಲೆಕ್ಕಾಧಿಕಾರಿ ಭರತ್ ಕುಮಾರ್. ವಿರೂಪಾಕ್ಷಪುರ ಕಂದಾಯವೃತ್ತದ ಗ್ರಾಮಲೆಕ್ಕಾಧಿಕಾರಿ ಮೆಹಬೂಬ್ ಸಾಬ್ ನದಾಫ್. ಜೆ. ಬ್ಯಾಡರಹಳ್ಳಿ ಕಂದಾಯವೃತ್ತದ ಗ್ರಾಮಲೆಕ್ಕಾಧಿಕಾರಿ ವೆಂಕಟೇಶ್ ನಾಯಕ್. ಕೃಷ್ಣಾಪುರ ಕಂದಾಯವೃತ್ತದ ಕಂದಾಯ ವೃತ್ತದ ಗ್ರಾಮಲೆಕ್ಕಾಧಿಕಾರಿ ಮನು, ರಘು ಹಾಜರಿದ್ದರು. ಗ್ರಾ. ಪಂ ಸದಸ್ಯ ರಾದ ಪ್ರಮೀಳ ಶಿವಶಂಕರ್, ಎಂ.ಪಿ ನಟೇಶ್, ಮುಖಂಡರಾದ ರಾಜಣ್ಣ, ಬಸವರಾಜು ರವರು ಉಪಸ್ಥಿತರಾಗಿದ್ದರು.

Share This Article
Leave a comment