ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ IPS ಹುದ್ದೆಗೆ ಏರಿದ್ದ ಆರೋಪದ ದೂರಿನ ಹಿನ್ನೆಲೆಯಲ್ಲಿ ನಿವೃತ್ತ ಅಧಿಕಾರಿ ಕೆಂಪಯ್ಯ ಇಂದು ವಿಚಾರಣೆಗೆ ಹಾಜರಾಗುವಂತೆ ಡಿಸಿಆರ್ ಇ ನೋಟಿಸ್ ನೀಡಿದೆ.
ಇದು ಒಂದು ದಶಕದ ಹಿಂದಿನ ದೂರು. ಈ ಸಂಬಂಧದ ಫೈಲ್ ಕಳೆದು ಹೋಗಿದ್ದರಿಂದ ಪ್ರಕರಣ ತನಿಖೆ ನಿಂತು ಹೋಗಿತ್ತು. ಈಗ ಫೈಲ್ ಸಿಕ್ಕಿದ್ದರಿಂದ ವಿಚಾರಣೆ ಆರಂಭವಾಗಿದೆ.
ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯವು ( ಡಿಸಿಅರ್ ಇ) ಇಂದು ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ತಾವು ಕುರುಬ ಸಮಾಜಕ್ಕೆ ಸೇರಿದರೂ ಕಾಡು ಎಂಬ ಜಾತಿ ಪ್ರಮಣ ಪತ್ರ ನೀಡಿ ಪರಿಶಿಷ್ಠ ಪಂಗಡದ ಸೌಲಭ್ಯ ಪಡೆದು IPS ಹುದ್ದೆಗೆ ಏರಿದ್ದೀರಿ ಎಂಬ ಆರೋಪದ ದೂರಿನ ವಿಚಾರಣೆ ನಡೆಸಲು ಕೆಂಪಯ್ಯನಿಗೆ ಬುಲಾವ್ ನೀಡಲಾಗಿದೆ.
ದಶಕದ ಹಿಂದಿನ ದೂರಿಗೆ ಈಗ ಮತ್ತೆ ಜೀವ ಬಂದಿರುವ ಹಿನ್ನೆಲೆಯಲ್ಲಿ ಕೆಂಪಯ್ಯನವರಿಗೆ ಮತ್ತೆ ಸಂಕಷ್ಟ ಎದುರಾಗಿದೆ.
- ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 6 ಜನರ ಮೃತದೇಹ ಪತ್ತೆ
- ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: DYSP ವಿರುದ್ಧ ಗಂಭೀರ ಆರೋಪ
- ಐಶ್ವರ್ಯ ಗೌಡ ಪ್ರಕರಣ: ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ
- ಸಾರಿಗೆ ನೌಕರರಿಗೆ ಸರ್ಕಾರದ ಭರವಸೆ: 2 ಸಾವಿರ ಕೋಟಿ PF ನಿಧಿ ಬಿಡುಗಡೆ
- ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ: ಚುನಾವಣೆಯ ಮೂಲಕ ತೀರ್ಮಾನ
More Stories
ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: DYSP ವಿರುದ್ಧ ಗಂಭೀರ ಆರೋಪ
₹450 ಕೋಟಿ ವಂಚನೆ ಹಗರಣ: ಟೀಂ ಇಂಡಿಯಾ ಆಟಗಾರ ಶುಭಮನ್ ಗಿಲ್ಗೆ CID ಸಮನ್ಸ್
1.20 ಲಕ್ಷ ಲಂಚ ಸ್ವೀಕಾರ : ಲೋಕಾಯುಕ್ತ ಬಲೆಗೆ ಬಿದ್ದ ನೀರಾವರಿ ನಿಗಮದ ಅಧಿಕಾರಿಗಳು