December 23, 2024

Newsnap Kannada

The World at your finger tips!

biden

ಎಚ್ – 1 ವಿಸಾ ಗೆ ಮಾಚ್ 31ರ ತನಕ ಟ್ರಂಪ್ ನಿರ್ಬಂಧ : ಬೈಡನ್ ಗೆ ಬಿಸಿ ತುಪ್ಪ

Spread the love

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿನ ಸೋಲಿನ ಸೇಡು ತೀರಿಸಿಕೊಳ್ಳಲು ಅನಿವಾಸಿ ಭಾರತೀಯರ ಮೇಲೆ
ಎಚ್ -1 ಬಿ ವಿಸಾ ನಿರ್ಬಂಧಿತ ಅವಧಿಯನ್ನು ಮಾಚ್ 31 ರ ತನಕ ಮುಂದೂಡಿರುವ ಈಗಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆದೇಶವನ್ನು ಮುಂದೆ ಹೇಗೆ ನಿಭಾಯಿಸುವುದು ಎಂಬುದೇ ನೂತನ ಅಧ್ಯಕ್ಷ ಜೋ ಬೈಡನ್ ಗೆ ಬಿಸಿ ತುಪ್ಪವಾಗಿದೆ.

ಕೋವಿಡ್‌ ಹಿನ್ನೆಲೆಯಲ್ಲಿ ಟ್ರಂಪ್‌ ಸರ್ಕಾರ ಎಚ್‌-1ಬಿ ವೀಸಾದ ಮೇಲೆ ನಿರ್ಬಂಧ ವಿಧಿಸಿ ಅದನ್ನು ಬಳಿಕ ಡಿ. 31ರ ವರೆಗೆ ವಿಸ್ತರಿಸಿತ್ತು. ಇದರಿಂದ ಬಹಳಷ್ಟು ಭಾರತೀಯರು ತೊಂದರೆಗೀಡಾಗಿದ್ದರು.

ಎಚ್‌-1ಬಿ ವೀಸಾ ವಿಚಾರ ಅಮೆರಿಕ ಅಧ್ಯ ಕ್ಷೀಯ ಚುನಾವಣೆಯಲ್ಲೂ ಪ್ರತಿಧ್ವನಿಸಿತ್ತು. ಟ್ರಂಪ್‌ ಅವರ ಈ ನಿರ್ಧಾರವನ್ನೇ ಬಳಸಿಕೊಂಡು ಜೋ ಬೈಡೆನ್‌ ಅವರು ಅನಿವಾಸಿ ಭಾರತೀಯರ ಬಳಿ ಹೋಗಿದ್ದರು. ಡೆಮಾಕ್ರಾಟ್‌ ಪಕ್ಷ ಅಧಿಕಾರಕ್ಕೆ ಬಂದರೆ ಈ ನಿಯಮ ತೆಗೆದು ಹಾಕಲಾಗುವುದು ಎಂದಿದ್ದರು.

ಸೇಡು ತೀರಿಸಿಕೊಂಡ ಟ್ರಂಪ್ :

ಆಗ ಅನಿವಾಸಿ ಭಾರತೀಯರು ಬೈಡೆನ್‌ ಅವರನ್ನು ಬೆಂಬಲಿಸಿದ್ದರಿಂದ ಬೈಡೆನ್‌ ಚುನಾಯಿತರಾದರು. ಇದರಿಂದ ಭಾರತೀಯರ ಮೇಲೆ ಆಕ್ರೋಶಗೊಂಡ ಟ್ರಂಪ್‌ ಅವರು ಎಚ್‌-1ಬಿ ವೀಸಾದ ಮೇಲಣ ನಿರ್ಬಂಧವನ್ನು ಮಾ. 31ರ ತನಕ ವಿಸ್ತರಿಸುವ ಮೂಲಕ ಸೋಲಿನ ಸೇಡು ತೀರಿಸಿಕೊಂಡಿದ್ದಾರೆ.

ತಮ್ಮ ಅಧಿಕಾರಾವಧಿ ಕೇವಲ 3 ವಾರಗಳು ಇರುವಂತೆಯೇ ಡೊನಾಲ್ಡ್‌ ಟ್ರಂಪ್‌ ಈ ನಿರ್ಧಾರ ಕೈಗೊಂಡಿದ್ದಾರೆ. ಅಮೆರಿಕದ ಉದ್ಯೋಗಿಗಳ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ನಿರ್ಬಂಧದ ಸಂದರ್ಭದಲ್ಲಿದ್ದ ಪರಿಸ್ಥಿತಿ ಮತ್ತು ಕಾರಣಗಳು ಈಗಲೂ ಬದಲಾಗಿಲ್ಲ ಎಂದು ಟ್ರಂಪ್‌ ಸಮರ್ಥಿಸಿ ಕೊಂಡಿದ್ದಾರೆ.

ಟ್ರಂಪ್‌ ನಿರ್ಧಾರದಿಂದ ಅಪಾರ ಸಂಖ್ಯೆಯಲ್ಲಿರುವ ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವೃತ್ತಿಪರರು ಹಾಗೂ ಅಮೆರಿಕ ಮತ್ತು ಭಾರತದ ಕಂಪೆನಿಗಳ ಮೇಲೆ ಪರಿಣಾಮ ಬೀರಲಿದೆ. ಎಚ್‌-1ಬಿ ವೀಸಾ ನವೀಕರಣಕ್ಕೂ ತೊಂದರೆಯಾಗಲಿದೆ.

ಬೈಡೆನ್‌ ಏನು ಮಾಡುತ್ತಾರೆ?


ಎಚ್‌ -1 ಬಿ ವೀಸಾದ ಮೇಲಣ ನಿಷೇಧವನ್ನು ಮಾ. 31ರ ವರೆಗೆ ವಿಸ್ತರಿಸಲಾಗಿರುವುದರಿಂದ ಮುಂದಿನ ನಿರ್ಧಾರ ಕೈಗೊಳ್ಳುವ ಹೊಣೆ ಬೈಡೆನ್‌ ಅವರ ಹೆಗಲಿಗೇರಿದೆ. ಈ ನಿಷೇಧವನ್ನು ವಿಸ್ತರಿಸದೇ ಇರುತ್ತಿದ್ದರೆ ಅಲ್ಲಿನ ಜನರಿಗೆ ಉದ್ಯೋಗ ಅವಕಾಶಗಳು ಕಡಿಮೆಯಾಗುತ್ತಿದ್ದವು. ನಾನು ಚುನಾವಣೆಯಲ್ಲಿ ಸೋತರೂ ಅಮೆರಿಕದ ಹಿತವನ್ನು ಕಾಪಾಡುತ್ತಿದ್ದೇನೆ ಎಂಬ ಸಂದೇಶವನ್ನು ಈ ಮೂಲಕ ಟ್ರಂಪ್‌ ರವಾನಿಸಿದ್ದಾರೆ.

ಅಮೆರಿಕದ 46ನೇ ಅಧ್ಯಕ್ಷರಾಗಿ ಈ ವರ್ಷದ ಜ. 20ರಂದು ಪ್ರಮಾಣವಚನ ಸ್ವೀಕರಿಸಲಿರುವ ಜೋ ಬೈಡೆನ್‌ ಎಚ್‌-1 ಬಿ ವೀಸಾದ ಕುರಿತಂತೆ ಮಾ. 31ರಂದು ಕೈಗೊಳ್ಳುವ ನಿರ್ಧಾರ ಅತ್ಯಂತ ನಿರ್ಣಾಯಕವಾಗಿರಲಿದೆ. ಎಚ್‌-1ಬಿ ವೀಸಾ ನಿಷೇಧವನ್ನು ಹಿಂದೆಗೆದುಕೊಳ್ಳುವುದಾಗಿ ಬೈಡೆನ್‌ ಈ ಹಿಂದೆಯೇ ಭರವಸೆ ನೀಡಿರುವರಾದರೂ ಇದನ್ನು ಈಡೇರಿಸಿದಲ್ಲಿ ಅಮೆರಿಕನ್ನರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ.

ಭಾರತೀಯರೇ ಹೆಚ್ಚು
ಎಚ್‌ -1 ಬಿ ವೀಸಾಗಳ ಅತೀ ದೊಡ್ಡ ಫ‌ಲಾನುಭವಿಗಳಲ್ಲಿ ಭಾರತೀಯರು ಸೇರಿದ್ದಾರೆ. ಹೀಗಾಗಿ ಈ ನಿಷೇಧ ಪರಿಣಾಮ ಬೀರಲಿದೆ. ಅಮೆರಿಕದ ಸಂಶೋಧನ ಸಂಸ್ಥೆ ಬ್ರೂಕಿಂಗ್ಸ್‌ನ ಅಧ್ಯಯನದ ಪ್ರಕಾರ ಜೂ. 22ರ ಘೋಷಣೆಯಿಂದ ಫಾರ್ಚೂನ್‌ 500 ಕಂಪೆನಿಗಳಿಗೆ 100 ಬಿಲಿಯನ್‌ ಡಾಲರ್‌ ನಷ್ಟವಾಗಿದೆ. ಫಾರ್ಚೂನ್‌ 500 ಕಂಪೆನಿಗಳಲ್ಲಿ ಟೆಕ್‌ ಸಂಸ್ಥೆಗಳಾದ ಅಮೆಜಾನ್‌, ಆಯಪಲ್‌, ಆಲ್ಫಾಬೆಟ್‌ (ಗೂಗಲ್‌ನ ಮೂಲ ಕಂಪೆನಿ), ಮೈಕ್ರೋಸಾಫ್ಟ್ ಮತ್ತು ಕಾಗ್ನಿಜೆಂಟ್‌ ಟೆಕ್ನಾಲಜಿ ಸೊಲ್ಯೂಷನ್ಸ್‌ನಲ್ಲಿ ಹೆಚ್ಚು ಭಾರತೀಯರು ಉದ್ಯೋಗದಲ್ಲಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!