January 10, 2025

Newsnap Kannada

The World at your finger tips!

ibrahim 1

ನಾಳೆ ಎಂಎಲ್ ಸಿ ಸ್ಥಾನಕ್ಕೆ ರಾಜಿನಾಮೆ: ಕಾಂಗ್ರೆಸ್ ಗೆ ಒಳ್ಳೆಯದಾಗಲ್ಲ – ಇಬ್ರಾಹಿಂ

Spread the love

ನಾಳೆಯೇ ಕಾಂಗ್ರೆಸ್​ ನ ಎಂಎಲ್​​ಸಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೆನೆ. ನಾನು ಮತ್ತೆ ಕಾಂಗ್ರೆಸ್ ಗೆ ಮರಳುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಇಬ್ರಾಹಿಂ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಇಬ್ರಾಹಿಂ , ಇದುವರೆಗೂ ಮಾಧ್ಯಮದವರು ನನ್ನ ಕೈ ಹಿಡಿದಿದ್ದೀರಿ. ಯಾವುದೇ ಕಾರಣಕ್ಕೂ ನನ್ನ ಕೈ ಬಿಡಬೇಡಿ, ನಾನು ಬಡವ ದುಡ್ಡಿಲ್ಲ. ನೊಂದಿದ್ದೇನೆ . 40 ಕೋಟಿ ರು ಸಾಲ, 9 ಮಕ್ಕಳು ಇದ್ದಾರೆ ಎಂದು
ಇಬ್ರಾಹಿಂ ಕಣ್ಣೀರಿಟ್ಟಿದ್ದಾರೆ.

ನನ್ನ ಮನಸು ನೋಯಿಸಿದವರಿಗೆ ಯಾವತ್ತು ಒಳ್ಳೆದಾಗಲ್ಲ. ನಾನು ಪಕ್ಷ ಬಿಡುವ ಬಗ್ಗೆ ಕಾಂಗ್ರೆಸ್​ ಗಲಿಬಿಲಿ ಆಗಿದೆ. ಸಿದ್ದರಾಮಯ್ಯ ನನ್ನನ್ನು ಆತ್ಮೀಯರು ಅಂತಾರೆ, ಇದೇನಾ ಆತ್ಮೀಯತೆ? ಡಿಕೆಶಿ ಅವರು ಮಾತ್ರ ದೊಡ್ಡವರು ಅವರ ಬಗ್ಗೆ ನಾನು ಮಾತಾಡ್ಬಾರ್ದು ಎಂದು ಬೇಸರ ವ್ಯಕ್ತಪಡಿಸಿದರು.

Copyright © All rights reserved Newsnap | Newsever by AF themes.
error: Content is protected !!