February 22, 2026

Newsnap Kannada

The World at your finger tips!

WhatsApp Image 2023 07 11 at 11.07.52 AM

ಮನಾಲಿ ಪ್ರವಾಸಕ್ಕೆಂದು ತೆರಳಿದ್ದ ಮೈಸೂರಿನ ನಿವಾಸಿಗರು ನಾಪತ್ತೆ

Spread the love

ಕುಲು ಮನಾಲಿ ಪ್ರವಾಸಕ್ಕೆಂದು ಪ್ಯಾಕೇಜ್ ಟೂರ್‌ನಲ್ಲಿ ತೆರಳಿದ್ದ ಮೈಸೂರಿನ ನಾಲ್ವರು ಪ್ರವಾಸಿಗರು ನಾಪತ್ತೆಯಾಗಿದ್ದಾರೆ.

ಕಳೆದ ಗುರುವಾರ ಮೈಸೂರಿನಿಂದ ಹೊರಟಿದ್ದ ಶ್ರೀನಿಧಿ, ನವ್ಯ, ವೀರ್ ಹಾಗೂ ಅವರ ಪತ್ನಿ, ಪ್ರವಾಸಕ್ಕೆ ಹೋದ ಮೇಲೆ ಭಾನುವಾರ ಕೊನೆಯ ಬಾರಿ ಸಂಪರ್ಕಕ್ಕೆ ಸಿಕ್ಕಿದ್ದು, ಮಳೆ ಜಾಸ್ತಿ ಇದೆ, ರೆಡ್ ಅಲರ್ಟ್ ಘೋಷಣೆ ಮಾಡಿದ್ದಾರೆ. ನಾವು ಕೊಠಡಿಯಲ್ಲಿ ಸುರಕ್ಷಿತವಾಗಿದ್ದೇವೆ ಎಂದು ಕುಟುಂಬಸ್ಥರಿಗೆ ತಿಳಿಸಿದ್ದರು.

ಇದುವರೆಗೂ ಯಾರೊಬ್ಬರ ಬಗ್ಗೆಯೂ ಮಾಹಿತಿ ಇಲ್ಲ. ಈ ಬಗ್ಗೆ ಮನೆಯವರು ಆತಂಕಗೊಂಡಿದ್ದು, ಕುಟುಂಬಸ್ಥರ ಬಗ್ಗೆ ಮಾಹಿತಿ ನೀಡಿ ಸುರಕ್ಷಿತವಾಗಿ ಕರೆತರುವಂತೆ ಮನವಿ ಮಾಡಿದ್ದಾರೆ.

ಇವರೊಂದಿಗೆ ರಾಜ್ಯಾದ್ಯಂತ 50ಕ್ಕೂ ಹೆಚ್ಚು ಮಂದಿ ಪ್ರವಾಸಕ್ಕೆ ತೆರಳಿದ್ದು, ಯಾವ ಟ್ರ್ಯಾವಲ್ಸ್ ಎಂಬ ಬಗ್ಗೆ ಸಂಬಂಧಿಕರಿಗೆ ಸಮರ್ಪಕ ಮಾಹಿತಿ ಇಲ್ಲ ಎಂದು ತಿಳಿದುಬಂದಿದೆ.

error: Content is protected !!