“ನೀವು‌ ಎಷ್ಟು ತಲೆಮಾರಿಗೆ ಮೀಸಲಾತಿ ಕೊಡುತ್ತೀರಾ” – ಸರ್ಕಾರಗಳಿಗೆ ಸುಪ್ರೀಂ ಪ್ರಶ್ನೆ

Team Newsnap
1 Min Read
Presidential Election - Nomination from 11 candidates #thenewsnap #kannadanews #presidental_election #latest_news #bengaluru #delhi #election2022

ನೀವು ಈ ಮೀಸಲಾತಿ ವ್ಯವಸ್ಥೆಯನ್ನು ಇನ್ನೂ ಎಷ್ಟು ತಲೆಮಾರಿಗೆ ಕೊಡುತ್ತೀರಿ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.

ರಾಜ್ಯ ಸರ್ಕಾರಗಳು ಇಷ್ಟೆಲ್ಲಾ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವೆ. ಹೀಗಿರುವಾಗ ಯಾವುದೇ ಹಿಂದುಳಿದ ಸಮುದಾಯ ಅಭಿವೃದ್ಧಿ ಆಗಿಲ್ಲವೇ ಎಂದು ಪ್ರಶ್ನಿಸಿದೆ.

ಮಹಾರಾಷ್ಟ್ರದಲ್ಲಿ ಶೇ. 50 ಕ್ಕಿಂತ ಹೆಚ್ಚು ಮೀಸಲಾತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಕೆ ಮಾಡಿರುವ ಅರ್ಜಿಯ ಕುರಿತಾದ ವಿಚಾರಣೆ ನಡೆಸಿದ ವೇಳೆ ಸುಪ್ರೀಂಕೋರ್ಟ್ ಮಹತ್ವದ ಸಂಗತಿ ಬಗ್ಗೆ ಗಮನ ಸೆಳೆದಿದೆ.‌

ಮೀಸಲಾತಿ ಶೇಕಡ 50 ರಷ್ಟು ಮಿತಿ ಇರಬಾರದು ಎಂದಾದಲ್ಲಿ ಸಮಾನತೆಯ ಪ್ರಶ್ನೆ ಹೇಗೆ ಬರುತ್ತದೆ ಎಂದೂ ಸಹ ಕೇಳಿದೆ.

ನ್ಯಾಯಮೂರ್ತಿ ಅಶೋಕ ಭೂಷಣ್ ನೇತೃತ್ವದ ಪೀಠದಲ್ಲಿ ಈ ಕುರಿತು ವಿಚಾರಣೆ ನಡೆಸಿದ ವೇಳೆ, ಹಿರಿಯ ವಕೀಲ ಮುಕುಲ್ ರೋಹಟಗಿ, ಮಹಾರಾಷ್ಟ್ರ ಮೀಸಲಾತಿ ಹೆಚ್ಚಳ ಮಾಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.

ಮೀಸಲಾತಿ ನಿಗದಿ ಮಾಡುವುದನ್ನು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಡಬೇಕು ಎಂದು ಮನವಿ ಮಾಡಿದ್ದಾರೆ.
ಮೀಸಲಾತಿಗೆ ಯಾವುದೇ ಮಿತಿ ಇರಬಾರದು ಎಂದಾದಲ್ಲಿ ಸಮಾನತೆ ಎಲ್ಲಿದೆ? ಮಿತಿ ಇಲ್ಲದೇ ಹೋದಲ್ಲಿ ಅದರ ಪರಿಣಾಮ ಸೃಷ್ಟಿಯಾಗುವ ಅಸಮಾನತೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಷ್ಟು ತಲೆಮಾರಿನವರೆಗೆ ಮೀಸಲಾತಿಯನ್ನು ಇದೇ ರೀತಿ ಮುಂದುವರಿಸುತ್ತೀರಾ? ಎಂದು ಸುಪ್ರೀಂ ಪ್ರಶ್ನೆ ಮಾಡಿದೆ.

Share This Article
Leave a comment