ನೀವು ಈ ಮೀಸಲಾತಿ ವ್ಯವಸ್ಥೆಯನ್ನು ಇನ್ನೂ ಎಷ್ಟು ತಲೆಮಾರಿಗೆ ಕೊಡುತ್ತೀರಿ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.
ರಾಜ್ಯ ಸರ್ಕಾರಗಳು ಇಷ್ಟೆಲ್ಲಾ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವೆ. ಹೀಗಿರುವಾಗ ಯಾವುದೇ ಹಿಂದುಳಿದ ಸಮುದಾಯ ಅಭಿವೃದ್ಧಿ ಆಗಿಲ್ಲವೇ ಎಂದು ಪ್ರಶ್ನಿಸಿದೆ.
ಮಹಾರಾಷ್ಟ್ರದಲ್ಲಿ ಶೇ. 50 ಕ್ಕಿಂತ ಹೆಚ್ಚು ಮೀಸಲಾತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಕೆ ಮಾಡಿರುವ ಅರ್ಜಿಯ ಕುರಿತಾದ ವಿಚಾರಣೆ ನಡೆಸಿದ ವೇಳೆ ಸುಪ್ರೀಂಕೋರ್ಟ್ ಮಹತ್ವದ ಸಂಗತಿ ಬಗ್ಗೆ ಗಮನ ಸೆಳೆದಿದೆ.
ಮೀಸಲಾತಿ ಶೇಕಡ 50 ರಷ್ಟು ಮಿತಿ ಇರಬಾರದು ಎಂದಾದಲ್ಲಿ ಸಮಾನತೆಯ ಪ್ರಶ್ನೆ ಹೇಗೆ ಬರುತ್ತದೆ ಎಂದೂ ಸಹ ಕೇಳಿದೆ.
ನ್ಯಾಯಮೂರ್ತಿ ಅಶೋಕ ಭೂಷಣ್ ನೇತೃತ್ವದ ಪೀಠದಲ್ಲಿ ಈ ಕುರಿತು ವಿಚಾರಣೆ ನಡೆಸಿದ ವೇಳೆ, ಹಿರಿಯ ವಕೀಲ ಮುಕುಲ್ ರೋಹಟಗಿ, ಮಹಾರಾಷ್ಟ್ರ ಮೀಸಲಾತಿ ಹೆಚ್ಚಳ ಮಾಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.
ಮೀಸಲಾತಿ ನಿಗದಿ ಮಾಡುವುದನ್ನು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಡಬೇಕು ಎಂದು ಮನವಿ ಮಾಡಿದ್ದಾರೆ.
ಮೀಸಲಾತಿಗೆ ಯಾವುದೇ ಮಿತಿ ಇರಬಾರದು ಎಂದಾದಲ್ಲಿ ಸಮಾನತೆ ಎಲ್ಲಿದೆ? ಮಿತಿ ಇಲ್ಲದೇ ಹೋದಲ್ಲಿ ಅದರ ಪರಿಣಾಮ ಸೃಷ್ಟಿಯಾಗುವ ಅಸಮಾನತೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಷ್ಟು ತಲೆಮಾರಿನವರೆಗೆ ಮೀಸಲಾತಿಯನ್ನು ಇದೇ ರೀತಿ ಮುಂದುವರಿಸುತ್ತೀರಾ? ಎಂದು ಸುಪ್ರೀಂ ಪ್ರಶ್ನೆ ಮಾಡಿದೆ.
- ನಕಲಿ ಸಿಗರೇಟ್ ತಯಾರಿಸಿ ಮಾರಾಟ – ಕೋಟಿ ಮೌಲ್ಯದ ಸಿಗರೇಟ್ ವಶ
- ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ
- ನಿಮ್ಮ ಮನದ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರೇ ಇಲ್ಲದಾಗ …?
- ಎಳ್ಳು ಬೆಲ್ಲ ತಿಂದು ಅರೋಗ್ಯ ಹೆಚ್ಚಿಸಿಕೊಳ್ಳಿ
- ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
More Stories
ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ