ಬಿಜೆಪಿ ಕೇಂದ್ರ ಸರ್ಕಾರವು ದೇಶದ ಹೆಸರನ್ನು `ಇಂಡಿಯಾ’ ಬದಲಿಗೆ `ರಿಪಬ್ಲಿಕ್ ಆಫ್ ಭಾರತ್’ ಎಂದು ಮರುನಾಮಕರಣ ಮಾಡುವ ಹೊಸ ನಿರ್ಣಯವನ್ನು ಸಂಸತ್ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆ .
ಜಿ20 ಶೃಂಗಸಭೆಗೆ ರಾಷ್ಟ್ರಪತಿಗಳು ಗಣ್ಯರಿಗೆ ನೀಡಿದ ಆಹ್ವಾನ ಪತ್ರಿಕೆಯಲ್ಲಿ `ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲಿಗೆ `ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಉಲ್ಲೇಖಿಸಿದ ನಂತರ ಈ ಚರ್ಚೆ ಹುಟ್ಟಿಕೊಂಡಿದೆ.
ಇಂಡಿಯಾ (India) ಬದಲು ದೇಶದ ಹೆಸರನ್ನು `ರಿಪಬ್ಲಿಕ್ ಆಫ್ ಭಾರತ್’ ಎಂದು ಕರೆಯಬೇಕು ಎಂಬುದಾಗಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಲಹೆ ನೀಡಿದ್ದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ನಿರ್ಣಯಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.
ಜಿ20 ಸಭೆಗೆ ಬರುವ ಗಣ್ಯರಿಗೆ ಸೆಪ್ಟೆಂಬರ್ 9 ರಂದು ರಾಷ್ಟ್ರಪತಿ ಭವನದಲ್ಲಿ ಬೃಹತ್ ಔತಣಕೂಟ ಏರ್ಪಡಿಸಲಾಗಿದೆ. ಗಣ್ಯರಿಗೆ ನೀಡಿದ ಆಹ್ವಾನ ಪತ್ರಿಕೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ”President of Bharat’ ಎಂದು ತಮ್ಮ ಹುದ್ದೆಯನ್ನು ಉಲ್ಲೇಖಿಸಿದ್ದಾರೆ. ಈವರೆಗೆ ‘President of India’ ಎಂದು ರಾಷ್ಟ್ರಪತಿಗಳು ತಮ್ಮ ಹುದ್ದೆಯನ್ನು ಉಲ್ಲೇಖಿಸುತ್ತಿದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಖ್ಯಸ್ಥ ಮೋಹನ್ ಭಾಗವತ್ ಕೂಡಾ ಈ ಬದಲಾವಣೆಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. “ಇಂಡಿಯಾ” ಬದಲಿಗೆ “ಭಾರತ್” ಎಂಬ ಪದವನ್ನು ಬಳಸಬೇಕೆಂದು ಭಾಗವತ್ ನಾಗರಿಕರನ್ನು ಒತ್ತಾಯಿಸಿದ್ದು, ದೇಶವನ್ನು ಶತಮಾನಗಳಿಂದ ಭಾರತ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.
ಬಿಜೆಪಿ ಅನೇಕ ನಾಯಕರು ಇದಕ್ಕೆ ಬೆಂಬಲ ಸೂಚಿಸಿದ್ದರೆ, ದೇಶದ ಹೆಸರನ್ನೇ ಬದಲಾಯಿಸಲು ಸರ್ಕಾರ ಮುಂದಾಗಿದೆ ಎಂದು ಐಎನ್‌ಡಿಐಎ ಒಕ್ಕೂಟ ತೀವ್ರವಾಗಿ ಖಂಡಿಸಿದೆ.
- MUDA ಹಗರಣ: ಅಂತಿಮ ತನಿಖಾ ವರದಿ ಐಜಿಪಿಗೆ ಸಲ್ಲಿಕೆ
- ಕೇಂದ್ರ ಸರ್ಕಾರದ 622 ಪುಟಗಳ ಹೊಸ ತೆರಿಗೆ ಮಸೂದೆ – ಪ್ರಮುಖ ಬದಲಾವಣೆಗಳ ಪರಿಚಯ
- ಶೀಘ್ರದಲ್ಲೇ ಬೆಂಗಳೂರುಗೆ ಎರಡನೇ ವಿಮಾನ ನಿಲ್ದಾಣ ಸ್ಥಳದ ಘೋಷಣೆ – ಡಿ.ಕೆ. ಶಿವಕುಮಾರ್
- 2025 ICC ಚಾಂಪಿಯನ್ಸ್ ಟ್ರೋಫಿ: ಟೀಮ್ ಇಂಡಿಯಾ ತಂಡ ಪ್ರಕಟ, ಬುಮ್ರಾ ಔಟ್ – ಹರ್ಷಿತ್ ರಾಣಾ ಸೇರ್ಪಡೆ
- ಮೈಸೂರಿನಲ್ಲಿ ಗಲಭೆ: ನಿಷೇಧಿತ ಸಂಘಟನೆಗಳ ಕೈವಾಡ ಶಂಕೆ
More Stories
ಬೆಂಗಳೂರು ಹೊರತಾಗಿ ಇತರ ಭಾಗಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ: ಡಿ.ಕೆ. ಶಿವಕುಮಾರ್
ಬೆಂಗಳೂರು ಏರೋಸ್ಪೇಸ್ ಉದ್ಯಮಕ್ಕಾಗಿ ಸೂಕ್ತ ಸ್ಥಳ: ದೇಶದ ಪ್ರತಿಭೆಗಳನ್ನು ಉಳಿಸಿಕೊಳ್ಳಲು ಡಿಸಿಎಂ ಡಿ.ಕೆ. ಶಿವಕುಮಾರ್ ಮನವಿ
ಬೆಂಗಳೂರು ಏರೋ ಇಂಡಿಯಾ-2025: ವೈಮಾನಿಕ ಶಕ್ತಿಯ ಭವ್ಯ ಪ್ರದರ್ಶನ