ಸನ್ನಡತೆ ಆಧಾರ : 84 ಕೈದಿಗಳ ಬಿಡುಗಡೆ : ಸಚಿವ ಅರಗ ಜ್ಞಾನೇಂದ್ರ

Team Newsnap
1 Min Read
Preparedness basis: Release of 84 prisoners: Minister Araga Jnanendra ಸನ್ನಡತೆ ಆಧಾರ : 84 ಕೈದಿಗಳ ಬಿಡುಗಡೆ : ಸಚಿವ ಅರಗ ಜ್ಞಾನೇಂದ್ರ #Thenewsnap #Latestnews #bengaluru #Release_of_thieves #india #Independence_day #karnataka #Mandya_News #mysuru #home_minister

ಸನ್ನಡತೆ ಆಧಾರದ ಮೇಲೆ ಸ್ವಾತಂತ್ರ್ಯ ದಿನದ ಅಂಗವಾಗಿ 84 ಕೈದಿಗಳನ್ನು ಬಿಡುಗಡೆ ಮಾಡಲಾಗುವುದು.ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಶನಿವಾರ ತಿಳಿಸಿದ್ದಾರೆ.

ಜೈಲಲ್ಲಿ ಅಕ್ರಮಗಳ ಕುರಿತು ಇಂದು ಮಾತನಾಡಿದ ಅವರು, ಜೈಲುಗಳಲ್ಲಿ ಗಾಂಜಾ ಪೂರೈಕೆ, ಅಕ್ರಮ ನಡೆಯದಂತೆ ಬಿಗಿ ಕ್ರಮಕೈಗೊಳ್ಳಲಾಗಿದೆ.ಮುರುಗನ್ ಸಮಿತಿ ವರದಿ ಆಧಾರದಲ್ಲಿ ಪರಪ್ಪನ ಅಗ್ರಹಾರದಲ್ಲಿ 15 ಸಿಬ್ಬಂದಿ ಅಮಾನತು ಮಾಡಲಾಗಿದೆ. 30 ಸಿಬ್ಬಂದಿ ವರ್ಗಾವಣೆ ಮಾಡಲಾಗಿದೆ. ಬಹುತೇಕ ಹೊಸ ಸಿಬ್ಬಂದಿಗಳು ಇದ್ದಾರೆ. ಜೈಲು ಸಿಬ್ಬಂದಿ ಅಲರ್ಟ್ ಆಗಿದ್ದಾರೆ, ಎಲ್ಲವನ್ನು ಹಿಡಿಯುತ್ತಿದ್ದಾರೆ ಎಂದು ತಿಳಿಸಿದರು.ಇದನ್ನು ಓದಿ –ಕಿರ್ಗಿಸ್ತಾನ್ ಟ್ರೆಕ್ : ಪ್ರವಾಸಿಗರ ಕಡೆಗೆ ಹಿಮಪಾತದ ಅದ್ಭುತ ಕ್ಷಣ: ಕ್ಯಾಮರಾದಲ್ಲಿ ಸೆರೆ

ಆಜಾದಿ ಕಾ ಅಮೃತ ಮಹೋತ್ಸವ ದಿನದ ಅಂಗವಾಗಿ ನಮ್ಮ‌ 1 ಲಕ್ಷದ ಪೊಲೀಸ್ ಅಧಿಕಾರಿಗಳ ಮನೆ ಮೇಲೆ ತಿರಂಗ ಹಾರಿಸಲಾಗುತ್ತದೆ ಎಂಬುದಾಗಿ ಗೃಹ ಸಚಿವರು ತಿಳಿಸಿದ್ದಾರೆ.

ಪಿಎಸ್‌ಐ ಅಕ್ರಮದ ತನಿಖೆಯನ್ನು ಅತ್ಯಂತ ಗಂಭೀರವಾಗಿ ತನಿಖೆ ಮಾಡಿಸುತ್ತಿದ್ದೇವೆ. ಸಿಐಡಿಗೆ ಯಾವುದೇ ಒತ್ತಡ ಕೊಟ್ಟಿಲ್ಲ ಅವರಿಗೆ ನಾವು ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇವೆ. ಇಡೀ ದೇಶದಲ್ಲೇ ಮೊದಲು ತಪ್ಪಿತಸ್ಥ ಐಪಿಎಸ್ ಅಧಿಕಾರಿಯನ್ನು ಬಂಧಿಸಿದ್ದೇವೆ. ಆದರೆ ಇದರಲ್ಲಿ ಯಾರೇ ಆದರೂ ರಾಜಕೀಯ ಲಾಭ ಪಡೆದುಕೊಳ್ಳಬಾರದು ಎಂದರು.

ಸಮಯ ಬಂದಾಗ ಯಾವುದೇ ಇತರ ಪ್ರಕರಣದ ತನಿಖೆ ಮಾಡುವುದು ತಪ್ಪಲ್ಲ. ನಮ್ಮ ಕಣ್ಣ ಮುಂದೆ ಇರುವುದು ಸದ್ಯ ಪಿಎಸ್ ಐ ಹಗರಣದ ತನಿಖೆ. ಮಧ್ಯವರ್ತಿ, ಹಣ ಕೊಟ್ಟವರ ವಿರುದ್ಧವೂ ಕ್ರಮ ಆಗುತ್ತಿದೆ. ಇನ್ನೊಮ್ಮೆ ಪರೀಕ್ಷೆಯಲ್ಲಿ ಇಂತಹ ಘಟನೆ ಆಗಬಾರದು. ತನಿಖೆ ಆಗುತ್ತಿದೆ, ಯಾವುದೇ ಊಹೆಯ ಮಾತು ಹೇಳಲ್ಲ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

Share This Article
Leave a comment