December 27, 2024

Newsnap Kannada

The World at your finger tips!

grandma death

ಆಸ್ತಿ ಕಬಳಿಸಲು ವೃದ್ದೆಯ ಶವದ ಹೆಬ್ಬಟ್ಟನ್ನು ಛಾಪ ಕಾಗದಗಳಿಗೆ ಒತ್ತಿಸಿಕೊಂಡ ಸಂಬಂಧಿಕರು

Spread the love

ವೃದ್ಧೆಯ ಆಸ್ತಿ ಕಬಳಿಸಲು ಕಗದ ಪತ್ರಗಳಿಗೆ ಸಹಿಗಾಗಿ ಆಕೆಯ ಶವದ ಹೆಬ್ಬಟ್ಟನ್ನು ಒತ್ತಿಸಿಕೊಂಡ ವಿಲಕ್ಷಣ ಘಟನೆ ಮೈಸೂರಿನ ಶ್ರೀರಾಂಪುರದಲ್ಲಿ ಜರುಗಿದೆ.

ಆಸ್ತಿ ಕಬಳಿಸಲು ಮೃತ ವ್ಯಕ್ತಿಯ ಹೆಬ್ಬೆಟ್ಟಿನ ಗುರುತನ್ನು ಪಡೆಯುವ ಸನ್ನಿವೇಶಗಳನ್ನು ಸಿನಿಮಾಗಳಲ್ಲಿ ನೋಡಿರುತ್ತೇವೆ . ನಿಜ ಜೀವನದಲ್ಲೂ ಅಂತಹ ಒಂದು ಪ್ರಕರಣ ನಡೆದಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಜಯಮ್ಮ ಎಂಬ ವೃದ್ದೆಯೊಬ್ಬರು ಮೃತಪಟ್ಟಿದ್ದಾರೆ. ಆಕೆಯ ಅಣ್ಣನ ಮಕ್ಕಳು ಮತ್ತು ಸಂಬಂಧಿಕರು ಖಾಲಿ ಪತ್ರಗಳಿಗೆ ಹೆಬ್ಬೆಟ್ಟಿನ ಮುದ್ರೆ ಒತ್ತಿಸಿಕೊಂಡಿದ್ದಾರೆ.
ಈ ಸನ್ನಿವೇಶವನ್ನು ಮಹಿಳೆಯೊಬ್ಬರು ಪ್ರಶ್ನಿಸುತ್ತಾ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.

ಹೆಬ್ಬೆಟ್ಟಿನ ಗುರುತಿರುವ ಪತ್ರಗಳನ್ನು ಪಡೆಯಲು ಮಹಿಳೆ ಯತ್ನಿಸಿದ್ದಾರೆ.ಆದರೆ ಇದಕ್ಕೆ ಕೆಲವರು ವಿರೋಧಿಸಿದ ಬೆನ್ನಲ್ಲೇ ಖಾಲಿ ಪತ್ರಗಳನ್ನು ಪಕ್ಕದಲ್ಲೇ ಇರುವ ತಮ್ಮ ಮನೆಗೆ ರವಾನಿಸಿದ್ದಾರೆ.ಅಲ್ಲದೆ ಇದು ತಪ್ಪು ಎಂದು ವಿರೋಧಿಸಿದ ಮಹಿಳೆ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ.

ಸದ್ಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿವೆ. ಇನ್ನು ಕಾನೂನಿನ ಪ್ರಕಾರ ಮೃತ ವ್ಯಕ್ತಿಯ ಹೆಬ್ಬೆಟ್ಟಿನ ಗುರುತು ಪಡೆಯುವುದು ಅಪರಾಧವಾಗಿದೆ
ಪೊಲೀಸರು ಏನು ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

Copyright © All rights reserved Newsnap | Newsever by AF themes.
error: Content is protected !!