ಕಾಲೇಜ್ವೊಂದರ ಮುಂದೆ ಹಾಡು ಹಗಲೇ 21 ವರ್ಷದ ಯುವತಿಯನ್ನು ಪಾಯಿಂಟ್ ಬ್ಲಾಕ್ ರೇಜ್ನಲ್ಲಿ ಗುಂಡು ಹೊಡೆದು ಕೊಂದಿರುವ ಘಟನೆ ಬೆಚ್ಚಿಬೀಳಿಸಿದೆ.
ರಾಜ್ಯದ ರಾಜಧಾನಿಯಿಂದ ಕೇವಲ 30 ಕಿ.ಮೀ ದೂರದಲ್ಲಿರುವ ಫರಿಯಾಬಾದ್ ನ ಬಲ್ಲಬ್ಗರ್ ನಲ್ಲಿ ಈ ಘಟನೆ ನಡೆದಿದೆ.
ಪರೀಕ್ಷೆ ಬರೆದು ಹೊರ ಬಂದಿದ್ದ ಯುವತಿಯನ್ನು ಕಾರಿನಲ್ಲಿ ಅಪಹರಿಸಲು ಮುಂದಾದಾಗ ಯುವತಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಈ ವೇಳೆ ಪಾಯಿಂಟ್ ಬ್ಲಾಕ್ ರೇಂಜ್ನಲ್ಲಿ ಗುಂಡು ಹಾರಿಸಿ ಭೀಕರ ಹತ್ಯೆ ಮಾಡಲಾಗಿದೆ.
ಈ ದೃಶ್ಯಗಳು ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿವೆ . ವಿಡಿಯೋ ವೈರಲ್ ಆಗಿದೆ. ಯುವತಿಯನ್ನು ನಿಖಿತಾ ಎಂದು ಗುರುತಿಸಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಹಿಳಾ ರಾಷ್ಟ್ರೀಯ ಆಯೋಗ ಘಟನೆ ಕುರಿತು ಕ್ರಮ ತೆಗೆದುಕೊಳ್ಳುವಂತೆ ಹರಿಯಾಣ ಪೊಲೀಸರಿಗೆ ಪತ್ರ ಬರೆದಿದ್ದಾರೆ.
ಈ ಕೃತ್ಯ ಎಸಗಿದ ವ್ಯಕ್ತಿಯನ್ನು ಟೋಸಿಫ್ ಎಂದು ಗುರುತಿಸಲಾಗಿದೆ, ಯುವತಿಯ ಹತ್ಯೆಗೆ ರೆಹಾನ್ ಎಂಬಾಂತ ಕೂಡ ಸಾಥ್ ನೀಡಿದ್ದಾನೆ. ಗುಂಡೇಟಿನಿಂದ ಗಾಯಗೊಂಡಿದ್ದ ಯುವತಿ ರಸ್ತೆ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
ರಕ್ತದ ಮಡುವಿನಲ್ಲಿದ್ದ ಯುವತಿಯನ್ನು ಪೊಲೀಸ್ ಅಧಿಕಾರಿ ಜೈವೀರ್ ಸಿಂಗ್ ಕೊನೆಯದಾಗಿ ಮಾತನಾಡಿಸಿದ್ದಾರೆ. ಈ ವೇಳೆ ಆಕೆ ಟೋಸಿಫ್ ಮೊದಲು ಮಾತನಾಡಲು ಯತ್ನಿಸಿದ ಬಳಿಕ ಗುಂಡು ಹಾರಿಸಿದ ಎಂದು ಹೇಳಿದ್ದಾಳೆ.
ಘಟನೆ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಯುವತಿ ತಂದೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ನಿಖಿತಾಳನ್ನು ಈತ ಹಿಂಬಾಲಿಸಿ ಹಿಂಸೆ ನೀಡುತ್ತಿದ್ದ, ದೌರ್ಜನ್ಯದ ಆರೋಪದ ಮೇಲೆ 2018ರಲ್ಲಿ ಈತನ ವಿರುದ್ಧ ನಿಖಿತಾ ಕುಟುಂಬದವರು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಬಳಿಕ ಈತ ಕೊಲೆ ಮಾಡುವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಈ ದೂರನ್ನು ಹಿಂಪಡೆಯಲಾಗಿತ್ತು ಎಂದಿದ್ದಾರೆ.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ