ಟಿಕ್ಟಾಕ್ ನಲ್ಲಿ ಪರಿಚಯ. ಹಂಗೆ ರೀಲ್ಸ್ ಮಾಡುತ್ತಾ ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿದ್ದ ಈ ಯುವಕ, ಮದುವೆಯಾದ ಬಳಿಕ ಪತ್ನಿಯನ್ನು ಬಿಟ್ಟು ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ಜರುಗಿದೆ
ತನಗೆ ಪತಿ ಬೇಕು ಎಂದು ಪತ್ನಿ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನೀನೇ ಬೇಕೆ ಬೇಕು ಎಂದು ಮದುವೆ ಮಾಡಿಕೊಂಡವ ಇರುವ ಹಣವನ್ನು ಖರ್ಚು ಮಾಡಿ ಬಿಟ್ಟು ಹೋಗಿದ್ದಾನೆ. ಈತನ ಪ್ರೀತಿಯನ್ನೇ ನಂಬಿ ಮನೆ, ಕುಟುಂಬ, ಪೋಷಕರನ್ನು ಬಿಟ್ಟು ಬಂದಿದ್ದ ಯುವತಿ, ಇಂದು ಗಂಡನೂ ಇಲ್ಲದೇ, ಪೋಷಕರು ಇಲ್ಲದೇ ದಿಕ್ಕುತೋಚದ ಸ್ಥಿತಿಯಲ್ಲಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ ಆ ಯುವತಿ.
ಹುಬ್ಬಳ್ಳಿ ಮೂಲದ ಯುವತಿಗೆ ಟಿಕ್ಟಾಕ್ನಲ್ಲಿ ರಮೇಶ್ ಎಂಬ ಯುವಕನ ಪರಿಚಯವಾಗಿತ್ತು. ಯುವತಿಯ ಜೊತೆ ವಿಡಿಯೋ ಮಾಡಿ ಡ್ಯುಯೆಟ್ ಮಾಡುತ್ತಿದ್ದ ರಮೇಶ್, ಟಿಕ್ಟಾಕ್ ಬಳಿಕ ಇನ್ಸ್ ಸ್ಟಾ ರೀಲ್ಸ್ಗೂ ಎಂಟ್ರಿ ಕೊಟ್ಟಿದ್ದ.
ನೀನೇ ಬೇಕು, ಮದುವೆ ಮಾಡ್ಕೊತೀನಿ ಅಂಥ ಹಿಂದೆ ಬಿದ್ದಿದ್ದ. ಈತನ ಬಣ್ಣದ ಮಾತುಗಳನ್ನು ನಂಬಿದ್ದ ಯುವತಿ ಮನೆಯವನ್ನು ಬಿಟ್ಟು ಚಿನ್ನಾಭರಣ, ಹಣ ಸಮೇತ ಬೆಂಗಳೂರಿಗೆ ಬಂದಿದ್ದಳು.
ಬೆಂಗಳೂರಿಗೆ ಯುವತಿ ಬರುತ್ತಿದ್ದಂತೆ ನಗರದ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದ ಆಸಾಮಿ, ಬಳಿಕ ಬಾಡಿಕೆ ಮನೆಯೊಂದನ್ನು ಮಾಡಿ ಆಕೆಯೊಂದಿಗೆ ಸಂಸಾರ ಶುರು ಮಾಡಿದ್ದನಂತೆ. ತನ್ನದೇ ಗ್ಯಾರೇಜ್ ಹಾಗೂ ಪಿಜಿಯೊಂದರಲ್ಲಿ ಕೆಲಸ ಮಾಡ್ತಿದ್ದ ಆತ ಬ್ಯುಸಿನೆಸ್ ಮಾಡ್ಬೇಕು ಅಂಥ ಆಕೆಯ ಬಳಿ ಇದ್ದ ಚಿನ್ನಾಭರಣವನ್ನೂ ಮಾರಾಟ ಮಾಡಿದ್ದ. ಅಲ್ಲದೇ ಆಕೆ ತಂದಿದ್ದ ಲಕ್ಷ ಲಕ್ಷ ಹಣ ಖರ್ಚು ಮಾಡಿದ್ದ. ಇಷ್ಟು ಸಾಲದು ಅಂಥ ಆಕೆಯ ಹೆಸರಿನಲ್ಲಿ 2 ಲಕ್ಷ ರೂಪಾಯಿ ಸಾಲ ಕೂಡ ಪಡೆದು ಖರ್ಚು ಮಾಡಿದ್ದ ಎನ್ನಲಾಗಿದೆ.
ಹಣ ಎಲ್ಲಾ ಖಾಲಿಯಾದ ತನ್ನ ವರಸೆ ಬದಲಿಸಿದ್ದ ಆಸಾಮಿ ಯುವತಿಯನ್ನು ಮನೆಯಲ್ಲಿ ಬಿಟ್ಟು ಎಸ್ಕೇಪ್ ಆಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಇತ್ತ ಪೋಷಕರು, ಗಂಡನೂ ಇಲ್ಲದೇ ಯುವತಿ ಕಂಗಾಲಾಗಿದ್ದು, ಸದ್ಯ ಪತಿಯನ್ನು ಹುಡುಕಿಕೊಡಿ ಎಂದು ಕೆ.ಆರ್ ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ