ನಟ ರಮೇಶ್ ಅರವಿಂದ್ ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮತ್ತು ಟಿಕ್ ಟಾಕ್, ಸಂಗೀತದ ಮೂಲಕ ಫೇಮಸ್ ಆಗಿದ್ದ ಲೈನ್ ಮನ್ ತಿಮ್ಮಣ್ಣ ಭೀಮಪ್ಪ ಗುರಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಂದು ಅವರ ಹೊಸ ಮನೆ ಗೃಹಪ್ರವೇಶ ಆಗಬೇಕಿತ್ತು. ಅದಕ್ಕೂ ಎರಡು ದಿನ ಮುನ್ನವೇ ಅನುಮಾನಾಸ್ಪದವಾಗಿ 27 ವರ್ಷದ ತಿಮ್ಮಣ್ಣನ ಮೃತದೇಹ ಸಿಕ್ಕಿದೆ.
ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಅಮಲಝರಿ ಗ್ರಾಮದಲ್ಲಿ ಈ ದುರಂತ ನಡೆದಿದೆ
ಸಾಲದ ಹೊರೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಶಂಕಿಸಲಾಗಿದೆ. ಅಮಲಝರಿ ಗ್ರಾಮದ ಹೊರವಲಯದಲ್ಲಿರುವ ಮುಧೋಳ ತಾಲೂಕಿನ ಮಂಟೂರು ಗ್ರಾಮ ವ್ಯಾಪ್ತಿಯ ತೋಟದ ಮನೆಯಲ್ಲಿ ಈ ಘಟನೆ ನಡೆದಿದೆ
ಮೂಲತಃ ಅಮಲಝರಿ ಗ್ರಾಮದ ತಿಮ್ಮಣ್ಣ 10 ನೇ ತರಗತಿ ವರೆಗೂ ವ್ಯಾಸಂಗ ಮಾಡಿದ್ರಲ್ಲದೇ, ಈ ಹಿಂದೆ ನಟ ರಮೇಶ್ ಅರವಿಂದ್ ನಡೆಸಿಕೊಟ್ಟಿದ್ದ ಕನ್ನಡದ ಕೊಟ್ಯಾದಿಪತಿ ಸೀಜನ್ 3 ರಲ್ಲಿ ಭಾಗವಹಿಸಿ 6.40 ಲಕ್ಷ ರೂ ಗೆದ್ದಿದ್ದರು.
ಹಾಸ್ಯ, ಸಂಗೀತದ ಮೂಲಕ ರಂಜಿಸಿ ಟಿಕ್‌ಟಾಕ್‌ನಲ್ಲಿ ಅಭಿಮಾನಿಗಳನ್ನ ಸಹ ಹೊಂದಿದ್ದರು. ಖೋ ಖೋ ಕ್ರೀಡಾಪಟು ಸಹ ಆಗಿದ್ದಂತಹ ತಿಮ್ಮಣ್ಣ ಗ್ರಾಮದ ಮಕ್ಕಳಿಗೆ ತರಬೇತಿ ಕೊಡ್ತಿದ್ದರು ಎನ್ನಲಾಗಿದೆ. ಇನ್ನು ಅನಾರೋಗ್ಯದಿಂದ ಬಳಲುತ್ತಿದ್ದ ತಂದೆ ಚಿಕಿತ್ಸೆಗಾಗಿ ಮತ್ತು ಹೊಸ ಕಟ್ಟಿಸುವ ಸಲುವಾಗಿ 16 ಲಕ್ಷ ಸಾಲ ಮಾಡಿಕೊಂಡಿದ್ರಂತೆ. ಹೀಗಾಗಿ ಸಾಲ ತೀರಿಸಲಾಗದೇ ಮೂರು ದಿನಗಳ ಹಿಂದೆ ತಿಮ್ಮಣ್ಣ ಆತ್ಮಹತ್ಯೆ ಮಾಡಿಕೊಂಡಿರುವುದು ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.
- ರಾಜ್ಯದ ಹವಾಮಾನ ವರದಿ (Weather Report) 22-05-2022
- ಮುಂಬೈ ಇಂಡಿಯನ್ ಗೆ ರೋಚಕ ಗೆಲುವು – RCB ಸೆಮಿಫೈನಲ್ಸ್ ಗೆ DC ತಂಡ ಟೂರ್ನಿಯಿಂದ ಹೊರಕ್ಕೆ
- ಲೀಯಾ – ಪೀಟರ್ ‘ ಬರ್ತ್ ಡೇ’ ಶಾಪಿಂಗ್ಗೆ ಹೋಗಿದ್ದ ಪ್ರೇಮಿಗಳು : ಯುವಕನಿಂದ ಮಾಹಿತಿ
- ದೇಶದ ಜನತೆಗೆ ಸಿಹಿ ಸುದ್ದಿ:ಪೆಟ್ರೋಲ್, ಗ್ಯಾಸ್, ಸಿಮೆಂಟ್, ಗೊಬ್ಬರ, ಪ್ಲಾಸ್ಟಿಕ್, ಉಕ್ಕು ದರ ಇಳಿಕೆ
- ಕೇಂದ್ರ ಸರ್ಕಾರದಿಂದ ಅಬಕಾರಿ ಸುಂಕ ಇಳಿಕೆ! ಪೆಟ್ರೋಲ್ ಪ್ರತಿ ಲೀಟರ್ ಗೆ ₹ 8 ಡೀಸೆಲ್ ₹ 6 ಕಡಿತ
- ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಕಲ್ಲೆಸೆದ ಕಿಡಿಗೇಡಿಗಳು-ಬೆಂಡಿಗೇರಿ ಪ್ರಕ್ಷುಬ್ಧ : ಪೊಲೀಸ್ ಬಂದೋಬಸ್ತು
More Stories
ರಾಜ್ಯದ ಹವಾಮಾನ ವರದಿ (Weather Report) 22-05-2022
ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಕಲ್ಲೆಸೆದ ಕಿಡಿಗೇಡಿಗಳು-ಬೆಂಡಿಗೇರಿ ಪ್ರಕ್ಷುಬ್ಧ : ಪೊಲೀಸ್ ಬಂದೋಬಸ್ತು
ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಬಿದ್ದವರು ಪ್ರೇಮಿಗಳಲ್ಲ – ಕೇವಲ ಸ್ನೇಹಿತರು