ಡಿ.1 ರಿಂದ ಹಾಲಿನ ಖರೀದಿ ದರ ಕಡಿತ: ಮನ್ ಮುಲ್ ಅಧ್ಯಕ್ಷ ರಾಮಚಂದ್ರ

Team Newsnap
2 Min Read
  • ಇದು ತಾತ್ಕಾಲಿಕ ಪರಿಷ್ಕರಣೆ ಯಾದರೂ ರೈತರಿಗೆ ಗಾಯದ ಮೇಲೆ ಬರೆ
  • ಪರಿಷ್ಕರಣೆಯ ನಂತರ ಶೇಕಡ 3.5 ಪ್ಯಾಟ್ ಮತ್ತು ಶೇ 8.5 ಎಸ್. ಎನ್. ಎಫ್ ಇರುವ ಪ್ರತಿ ಲೀಟರ್ ಹಾಲಿಗೆ ರೂ 24.90ರ ಬದಲಾಗಿ ರು 22.40 ಗಳನ್ನು ಸಂಘಗಳಿಗೆ ಪಾವತಿಸಲಾಗುವುದು.
  • ಮುಂದಿನ ದಿನಗಳಲ್ಲಿ ಕೋವಿಡ್ – 19 ನಿಂದ ಚೇತರಿಕೆಯಾಗಿ ಒಕ್ಕೂಟದಲ್ಲಿ ಮಾರಾಟ ವಹಿವಾಟು ಹೆಚ್ಚಳವಾದ ನಂತರ ಆರ್ಥಿಕ ಪರಿಸ್ಥಿತಿ ಸುಧಾರಣೆ ಆದ ನಂತರ ಹಾಲು ಖರೀದಿ ದರವನ್ನು ಹೆಚ್ಚಿಸಲಾಗುವುದು.

ಹಾಲು ಒಕ್ಕೂಟವು ಆರ್ಥಿಕವಾಗಿ ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಡಿ.1 ರಿಂದ ಹಾಲಿನ ಖರೀದಿ ದರವನ್ನು ತಾತ್ಕಾಲಿಕವಾಗಿ ಪರಿಷ್ಕರಿಸಲಾಗಿದೆ ಎಂದು ಮನ್ಮುಲ್ ಒಕ್ಕೂಟದ ಅಧ್ಯಕ್ಷ ಬಿ.ಆರ್. ರಾಮಚಂದ್ರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ramachandra

ಪರಿಷ್ಕರಣೆಯ ನಂತರ ಶೇಕಡ 3.5 ಪ್ಯಾಟ್ ಮತ್ತು ಶೇ 8.5 ಎಸ್.ಎನ್. ಎಫ್ ಇರುವ ಪ್ರತಿ ಲೀಟರ್ ಹಾಲಿಗೆ ರು 24.90ರ ಬದಲಾಗಿ ರು 22.40 ಗಳನ್ನು ಸಂಘಗಳಿಗೆ ಪಾವತಿಸಲಾಗುವುದು. ಮುಂದಿನ ದಿನಗಳಲ್ಲಿ ಕೋವಿಡ್- 19ನಿಂದ ಚೇತರಿಕೆಯಾಗಿ ಒಕ್ಕೂಟದಲ್ಲಿ ಮಾರಾಟ ವಹಿವಾಟು ಹೆಚ್ಚಳವಾದ ನಂತರ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಲಿದೆ. ಆಗ ಮತ್ತೆ ಹಾಲು ಖರೀದಿ ದರವನ್ನು ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ‌.

ಪ್ರಸಕ್ತ ಸಾಲಿನ ಆರಂಭದಿಂದಲೂ ಕೋವಿಡ್=19 ಇರುವ ಹಿನ್ನೆಲೆಯಲ್ಲಿ ಮಾರಾಟ ವಹಿವಾಟುಗಳು ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗದಿರುವ ಕಾರಣ ಮಾರ್ಚ್ 2020ರ ತಿಂಗಳವರೆಗೂ ಇಲ್ಲಿಯವರೆಗೂ ಹಾಲಿನ ಪುಡಿ ಹಾಗೂ ಬೆಣ್ಣೆ ಸಗಟು ರೂಪದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಾರಾಟ ವಾಗಿರುತ್ತದೆ. ಉತ್ಪಾದನಾ ವೆಚ್ಚಕ್ಕೆ ಹೋಲಿಸಿದಲ್ಲಿ ಹಾಲಿನ ಮಾರಾಟದ ಬೆಲೆಯು ಅತಿ ಕಡಿಮೆ ಇರುವ ಕಾರಣ ಒಕ್ಕೂಟಕ್ಕೆ ನಷ್ಟವಾಗಿರುತ್ತದೆ. ಕ್ಷೀರಭಾಗ್ಯ ಯೋಜನೆ ಅಡಿಯಲ್ಲಿ ಜಿಲ್ಲಾಪಂಚಾಯತ್ ಮತ್ತು ಇತರೆ ಒಕ್ಕೂಟಗಳಿಂದ ಹಾಲಿನ ಪುಡಿಗೆ ಕುಂಠಿತವಾಗಿರುತ್ತದೆ ಎಂದು ತಿಳಿಸಿದ್ದಾರೆ.

ನಷ್ಟ ಹೇಗೆ ಆಗುತ್ತದೆ? :

  • ಪ್ರಸ್ತುತ ಒಕ್ಕೂಟದಲ್ಲಿ ದಿನವಹಿ 8.5 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದೆ.
  • ಹಾಲು ಮತ್ತು ಮೊಸರು ರೂಪದಲ್ಲಿ ಪ್ರತಿದಿನ ಸುಮಾರು 3.23 ಲಕ್ಷ ಲೀಟರ್ ಮಾರಾಟವಾಗುತ್ತಿದೆ.
  • 66 ಸಾವಿರ ಲೀಟರ್ ಯು.ಎಚ್. ಟಿ.ಹಾಲು ಅಂದಾಜು 1.0 ಲಕ್ಷ ಲೀಟರ್ ಅಂತರ ಡೇರಿ ಹಾಲು ಮಾರಾಟ ಮಾಡಿ ಉಳಿದ ಸುಮಾರು 3.5 ಲಕ್ಷ ಲೀಟರ್ ಹೆಚ್ಚುವರಿ ಹಾಲನ್ನು ಸಂಪೂರ್ಣವಾಗಿ ಬೆಣ್ಣೆ ಹಾಗೂ ಹಾಲಿನ ಪುಡಿಯಾಗಿ ಪರಿವರ್ತಿಸಲಾಗುತ್ತಿದೆ.
  • ಹೆಚ್ಚುವರಿ ಸಾಲಿನಲ್ಲಿ ದಿನವಹಿ 1.5 ಲಕ್ಷ ಕೆ.ಜಿ. ಹಾಲನ್ನು ಒಕ್ಕೂಟದಲ್ಲಿ ಪರಿವರ್ತನೆ ಮಾಡುತ್ತಿದ್ದು ಉಳಿಕೆ ಅಂದಾಜು 2.0 ಲಕ್ಷ ಕೆ.ಜಿ. ಅನ್ನು ಪರಿವರ್ತನೆಗಾಗಿ ರಾಜ್ಯದ ಇತರೆ ಡೇರಿಗಳಿಗೆ ಹಾಗೂ ಹೊರರಾಜ್ಯದ ಡೇರಿಗಳಿಗೆ ಕಳುಹಿಸುತ್ತಿರುವುದರಿಂದ ಪರಿವರ್ತನಾ ವೆಚ್ಚ, ಸಾಗಾಣಿಕ ವೆಚ್ಚ, ಹಾಗೂ ದಾಸ್ತಾನು ವೆಚ್ಚವು ಹೆಚ್ಚಾಗುತ್ತಿದೆ.
  • ಕೆನೆರಹಿತ ಹಾಲಿನಪುಡಿಯ ದರವು ಕಳೆದ ವರ್ಷ ಪ್ರತಿ ಕೆ.ಜಿ.ಗೆ 227.00 ಇದ್ದು,ಈ ವರ್ಷ ರೂ 160.00ಕ್ಕೆ ಕುಸಿದಿದ್ದು ಹಾಗೂ ಸಗಟು ಹಾಲು ಮಾರಾಟವೂ ಗಣನೀಯವಾಗಿ ಕಡಿಮೆಯಾಗಿರುತ್ತದೆ. ಒಕ್ಕೂಟದಲ್ಲಿ ಈಗಾಗಲೇ 3479 ಮೆಟ್ರಿಕ್ ಟನ್ ಕೆನೆರಹಿತ ಹಾಲಿನ ಪುಡಿ, 1169 ಮೆಟ್ರಿಕ್ ಟನ್ ಬೆಣ್ಣೆ ಹಾಗೂ 216 ಮೆಟ್ರಿಕ್ ಟನ್ ಕೆನೆಭರಿತ ಹಾಲಿನ ಪುಡಿ ದಾಸ್ತಾನಿದ್ದು ಮಾರಾಟ ದರ ಹಾಗೂ ಬೇಡಿಕೆ ಕೂಡ ದಿನೇ ದಿನೇ ಕಡಿಮೆಯಾಗಿರುತ್ತದೆ.
Share This Article
Leave a comment