ಕೊಡಗಿನಲ್ಲಿ ತಗ್ಗಿದ ಮಳೆ ಆರ್ಭಟ – KRS ಗೆ 26 ಸಾವಿರ ಕ್ಯೂಸೆಕ್ ನೀರು

Team Newsnap
1 Min Read

ಕೊಡಗು ಜಿಲ್ಲೆಯಲ್ಲಿ ವರುಣನ ಆರ್ಭಟ ಕಳೆದ ರಾತ್ರಿಯಿಂದ ಸ್ವಲ್ಪ ಪ್ರಮಾಣದಲ್ಲಿ ತಗ್ಗಿದೆ. ಮಂಡ್ಯದ KRS ಆಣೆಕಟ್ಟೆಗೆ 26 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. KRS ಆಣೆಕಟ್ಟೆಯ ಇಂದಿನ ನೀರಿನ ಪ್ರಮಾಣ 112.64 ಅಡಿ ಇದೆ. ಆಣೆಕಟ್ಟೆ ಭರ್ತಿಗೆ ಇನ್ನು ಕೇವಲ 12 ಅಡಿ ಬಾಕಿ ಇದೆ.

ಕೊಡಗಿನ ಬ್ರಹ್ಮಗಿರಿ ತಪ್ಪಲಲ್ಲಿ ಮಳೆ ಕಡಿಮೆಯಾದರಿಂದ ನೀರಿನ ಮಟ್ಟ ಇಳಿಕೆಯಾಗಿದೆ, ತ್ರಿವೇಣಿ ಸಂಗಮದಲ್ಲೂ ಗಣನೀಯವಾಗಿ ನೀರು ತಗ್ಗಿದೆ. ಭಾಗಮಂಡಲ ನಾಪೋಕ್ಲು ರಸ್ತೆ ಮೇಲೆ ಅರ್ಧ ಅಡಿ ನೀರು ನಿಂತಿದ್ದು ಮಡಿಕೇರಿ ಭಾಗಮಂಡಲ ರಸ್ತೆಯಲ್ಲಿ ಸಂಚಾರ ಆರಂಭವಾಗಿದೆ. 

ಅಕ್ರಮ ಆಸ್ತಿ ಗಳಿಕೆ : ಕಾಂಗ್ರೆಸ್ ಶಾಸಕ ಜಮೀರ್ ನಿವಾಸದ ಮೇಲೆ ACB ದಾಳಿ

ಕಳೆದ ವಾರ ಬ್ರಹ್ಮಗಿರಿ ತಪ್ಪಲಿನಲ್ಲಿ ಭಾರೀ ಮಳೆಯಾಗಿದ್ದರಿಂದ ಭಾಗಮಂಡಲದಲ್ಲಿರುವ ತ್ರಿವೇಣಿ ಸಂಗಮ ಮುಳುಗಡೆಯಾಗಿತ್ತು.

KRS ನೀರಿನ ಮಟ್ಟ :

ಗರಿಷ್ಠ ಮಟ್ಟ -124.80 ಅಡಿ

ಇಂದಿನ ಮಟ್ಟ -112.64 ಅಡಿ

ಒಳಹರಿವು – 26695 ಕ್ಯೂಸೆಕ್

ಹೊರಹರಿವು -1284 ಕ್ಯೂಸೆಕ್

Share This Article
Leave a comment