ಕೆ ಆರ್ ಎಸ್ – ಕಬಿನಿಗೆ ದಾಖಲೆ ಒಳ ಹರಿವು: ರೈತರಲ್ಲಿ ಹರ್ಷ

Team Newsnap
1 Min Read

ಮಂಡ್ಯ: ಮುಂಗಾರು ಮಳೆಯ ಅಬ್ಬರದಿಂದಾಗಿ ಕಾವೇರಿ ನೀರಿನ ಅವಲಂಬಿತ ರೈತರಲ್ಲಿ ಆಶಾದಾಯಕ ಭರವಸೆ ಬಂದಿದೆ.

ಜುಲೈನಲ್ಲಿ ಕೆಆರ್‌ಎಸ್‌ ಜಲಾಶಯಕ್ಕೆದಾಖಲೆಯ ಒಳಹರಿವು ಬಂದಿರುವ ಹಿನ್ನೆಲೆ ಒಂದೇ ದಿನದಲ್ಲಿ ಜಲಾಶಯದಲ್ಲಿ ಒಂದು TMC ನೀರು ಹೆಚ್ಚಳವಾಗಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ಮೂರು ದಿನ ಉತ್ತಮ ಮಳೆಯಾದ ಹಿನ್ನೆಲೆ ಕೆಆರ್‌ಎಸ್‌ ಜಲಾಶಯಕ್ಕೆ 13,449 ಕ್ಯೂಸೆಕ್ ನೀರು ಒಳಹರಿವು ಬಂದಿದೆ

2023ನೇ ಸಾಲಿನಲ್ಲಿ ಇದೇ ಅಧಿಕ ಪ್ರಮಾಣದ ಒಳಹರಿವು ಆಗಿದೆ. ಡ್ಯಾಂ ಬರಿದಾಗುವ ಸಮಯದಲ್ಲಿ ಈ ಪ್ರಮಾಣದ ಒಳಹರಿವು ಕಾವೇರಿ ನೀರು ಅವಲಂಬಿತ ಜನರಲ್ಲಿ ಮಂದಹಾಸ ತರಿಸಿದೆ.

124.80 ಅಡಿಗಳ ಡ್ಯಾಂ 82.00 ಅಡಿಯಲ್ಲಿ ನೀರಿದೆ. 49.452 ಟಿಎಂಸಿ ಗರಿಷ್ಠ ಸಾಂದ್ರತೆ ಡ್ಯಾಂನಲ್ಲಿ 11.695 ಟಿಎಂಸಿ ನೀರು ಶೇಖರಣೆಯಾಗಿದೆ. ಡ್ಯಾಂನ ಒಳ ಹರಿವಿನ ಪ್ರಮಾಣ 13,499 ಕ್ಯೂಸೆಕ್ ಇದ್ದು, ಡ್ಯಾಂ ಹೊರಹರಿವು 353 ಕ್ಯೂಸೆಕ್ ಇದೆ

ಕೆಆರ್‌ಎಸ್‌ ಜಲಾಶಯದಲ್ಲಿ ನೀರಿನ ಕೊರತೆಯಿಂದಾಗಿ ಬೆಂಗಳೂರು ಹಾಗೂ ಮೈಸೂರಿಗೆ ಕುಡಿಯುವ ನೀರಿನ ಸಮಸ್ಯೆಯಾಗುವ ಆತಂಕ ಶುರುವಾಗಿತ್ತು.

ಜಲಾಶಯದ ನೀರಿನ ಮಟ್ಟ :

ಕಬಿನಿ :

  • ಗರಿಷ್ಠ ಮಟ್ಟ – 2284 ಅಡಿ
  • ಇಂದಿನ ಮಟ್ಟ – 2263.88 ಅಡಿ
  • ಒಳ ಹರಿವು – 16580 ಕ್ಯುಸೆಕ್
  • ಹೊರ ಹರಿವು : 500 ಕ್ಯುಸೆಕ್

ಕೆ ಆರ್ ಎಸ್ :

ಸಿಎಂ ತವರಿನ ಋಣ ತೀರಿಸಲು ಮೈಸೂರಿಗೆ ಬಜೆಟ್ ನಲ್ಲಿ ಭಾರಿ ಕೊಡುಗೆ : ಚಿತ್ರನಗರಿ ನಿರ್ಮಾಣ

  • ಗರಿಷ್ಠ ಮಟ್ಟ – 124.80 ಅಡಿ
  • ಇಂದಿನ ಮಟ್ಟ – 82.00 ಅಡಿ
  • ಒಳಹರಿವು : 13449 ಕ್ಯುಸೆಕ್
  • ಹೊರ ಹರಿವು : 339 ಕ್ಯುಸೆಕ್

Share This Article
Leave a comment