December 22, 2024

Newsnap Kannada

The World at your finger tips!

metro ns

Application Invitation for Recruitment of Various 236 Posts in Our Metro ನಮ್ಮ ಮೆಟ್ರೋದಲ್ಲಿ ವಿವಿಧ 236 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ವೈಟ್‌ಫಿಲ್ಡ್-ಕೆಂಗೇರಿಗೆ ಮೆಟ್ರೋ ಸಂಚಾರಕ್ಕೆ ಸಿದ್ದತೆ 72 ನಿಮಿಷದಲ್ಲಿ ಪ್ರಯಾಣ

Spread the love

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ವೈಟ್‌ಫೀಲ್ಡ್- ಕೆಆರ್ ಪುರಂ ಹಾಗೂ ವೈಟ್‌ಫೀಲ್ಡ್- ಬೈಯಪ್ಪನಹಳ್ಳಿ ಕಾರಿಡಾರ್ ಮುಂದಿನ ಎರಡು ತಿಂಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸುವ ನಿರೀಕ್ಷೆ ಇದೆ.

ಕೆಂಗೇರಿಯಿಂದ ವೈಟ್‌ಫೀಲ್ಡ್‌ಗೆ ರಸ್ತೆ ಮೂಲಕ ಸಂಚರಿಸಲು ಸುಮಾರು ಎರಡು ಗಂಟೆ ಬೇಕಾಗಬಹುದು. ಅದೇ ದೂರವನ್ನು ಮೆಟ್ರೋ ರೈಲು ಕೇವಲ 72 ನಿಮಿಷಗಳಲ್ಲಿ ಕ್ರಮಿಸಲಿದೆ. ಅದೇ ರೀತಿ ವೈಟ್‌ಫೀಲ್ಡ್ -ಬೈಯಪ್ಪನಹಳ್ಳಿ ಮಧ್ಯದ ಪ್ರಯಾಣದ ಸಮಯವನ್ನು ರಸ್ತೆಯ ಮೂಲಕ ಒಂದು ಗಂಟೆ ಹಿಡಿದರೆ ಮೆಟ್ರೋ ಅದನ್ನು 28 ನಿಮಿಷಕ್ಕೆ ಇಳಿಸಲಿದೆ.

ವೈಟ್‌ಫೀಲ್ಡ್ ಮತ್ತು ಕೆಆರ್ ಪುರಂ ನಡುವಿನ ಮೆಟ್ರೋ ಪ್ರಯಾಣದ ಸಮಯ 23-24 ನಿಮಿಷಗಳು ಸಂಚರಿಸಲಿದೆ ಎಂದು BMRCL ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.ಆತ್ಮಹತ್ಯೆ ಬೇಡ, ಆರಗ ಆತ್ಮಸಾಕ್ಷಿಗೆ ತಕ್ಕಂತೆ ನಡೆಯಲಿ: ಎಚ್‌ಡಿಕೆ

ಫೆಬ್ರವರಿ 11ಕ್ಕೆ ಪ್ರಾಯೋಗಿಕ ಸಂಚಾರ

ಬಹುನಿರೀಕ್ಷೆಯ ಈ ಕಾರಿಡಾರ್ ನಲ್ಲಿ ಮುಂದಿನ ತಿಂಗಳ ಫೆಬ್ರವರಿ 11ಕ್ಕೆ ಪ್ರಾಯೋಗಿಕ ಸಂಚಾರ ಕಾರ್ಯ ನಡೆಯಲಿದೆ.

ಪ್ರಯಾಣ ಸಮಯದ ಬಗ್ಗೆ ಇನ್ನಷ್ಟು ನಿಖರ ಮಾಹಿತಿ ಬಹಿರಂಗವಾಗಲಿದೆ. ಫೆಬ್ರವರಿ ಮಧ್ಯದ ವೇಳೆಗೆ ವೈಟ್‌ಫೀಲ್ಡ್‌ನಿಂದ ಕೆಆರ್ ಪುರಂವರೆಗೆ ಮೆಟ್ರೋ ರೈಲು ಸುರಕ್ಷತೆಯ ಆಯುಕ್ತರಿಂದ ಮಾರ್ಗ ಪರಿಶೀಲನೆ ಆಗಲಿದೆ.

ಮೆಟ್ರೋ ಅವಲಂಬಿತರಿಗೆ ಇನ್ನಷ್ಟು ನೆರವಾಗಲು ಕೆಆರ್ ಪುರಂ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವೆ ಬಿಎಂಟಿಸಿ ಫೀಡರ್ ಬಸ್‌ ಸೇವೆ ದೊರೆಯಲಿದೆ.

ಕೆಆರ್ ಪುರಂ ಮತ್ತು ಬೈಯಪ್ಪನಹಳ್ಳಿ ಮಧ್ಯದ ಮೆಟ್ರೋ ಮಾರ್ಗ ಇದೇ ವರ್ಷ ಜೂನ್‌ಗೆ ಸಿದ್ಧವಾಗಲಿದೆ. ಮೇ ಹೊತ್ತಿಗೆ ವಿಧಾನಸಭಾ ಚುನಾವಣೆ ಪ್ರಕಟವಾದರೆ ನೀತಿ ಸಂಹಿತೆ ಜಾರಿಯಾದರೆ ಒಂದಷ್ಟು ಕೆಲಸಗಳು ವಿಳಂಬವಾಗಬಹುದು.

ನಮ್ಮ ಮೆಟ್ರೋ ಕಳೆದ ಅಕ್ಟೋಬರ್‌ನಲ್ಲಿ ವೈಟ್‌ಫೀಲ್ಡ್ ಮತ್ತು ಪಟ್ಟಂದೂರು ಅಗ್ರಹಾರ ನಡುವೆ ರೈಲನ್ನು ಬಳಸಿಕೊಂಡು 3.5-ಕಿ.ಮೀ. ಪ್ರಾಯೋಗಿಕ ಸಂಚಾರ ನಡೆಸಿತು. ನಂತರ ಈ ಮಾರ್ಗವನ್ನು ಕೆಆರ್ ಪುರಂ ವರೆಗೆ ವಿಸ್ತರಿಸಿತು. ಇಲ್ಲಿವರೆಗೆ ಫೆಬ್ರವರಿ 8 ರಿಂದ ರೈಲುಗಳ ಪ್ರಾಯೋಗಿಕ ಪ್ರಯಾಣ ಆರಂಭಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೈಟ್‌ಫೀಲ್ಡ್ -ಕೆಆರ್ ಪುರಂ ಮಧ್ಯದ ನಿಲ್ದಾಣಗಳಿವು

ವೈಟ್‌ಫೀಲ್ಡ್ -ಕೆಆರ್ ಪುರಂ ಮಧ್ಯೆ ಏಳು ಮೆಟ್ರೋ ರೈಲುಗಳು ಸೇವೆಗೆ ಹಂತ ಹಂತವಾಗಿ ನಿಯೋಜನೆಗೊಳ್ಳಲಿವೆ. ಬೈಯಪ್ಪನಹಳ್ಳಿಯಿಂದ ರೈಲು ಹೊರಟರೆ ಬೆನ್ನಿಗನಹಳ್ಳಿ, ಕೆಆರ್ ಪುರಂ, ಮಹದೇವಪುರ, ಗುರುದಾಚಾರ್ಪಾಳ್ಯ, ಹೂಡಿ ಜಂಕ್ಷನ್, ಸೀತಾರಾಮ ಪಾಳ್ಯ, ಕುಂದಲಹಳ್ಳಿ, ನಲ್ಲೂರಹಳ್ಳಿ, ಸತ್ಯ ಸಾಯಿ ಆಸ್ಪತ್ರೆ, ಪಟ್ಟಂದೂರು ಅಗ್ರಹಾರ, ಕಾಡುಗೋಡಿ, ಚನ್ನಸಂದ್ರ ಮೂಲಕ ಹಾದು ವೈಟ್‌ಫೀಲ್ಡ್ ತಲುಪಲಿದೆ.

Copyright © All rights reserved Newsnap | Newsever by AF themes.
error: Content is protected !!