ಬೆಂಗಳೂರಿನಲ್ಲಿ ಚಾಲಕನನ್ನು 1 ಕಿ.ಮೀ ಎಳೆದೊಯ್ದ ಬೈಕ್ ಸವಾರ

Team Newsnap
1 Min Read
A biker dragged a driver for 1 km in Bangalore ಬೆಂಗಳೂರಿನಲ್ಲಿ ಚಾಲಕನನ್ನು 1 ಕಿ.ಮೀ ಎಳೆದೊಯ್ದ ಬೈಕ್ ಸವಾರ

ಬೆಂಗಳೂರಿನ ಮಾಗಡಿ ರಸ್ತೆಯ ಬಳಿ ಯುವಕನೊಬ್ಬ ವಯಸ್ಸಾದ ಚಾಲಕನನ್ನು ಸುಮಾರು 1 ಕಿ.ಮೀ ಎಳೆದೊಯ್ದಿದ್ದಾನೆ.

ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ಈ ಹಿಟ್ ಅಂಡ್ ರನ್ ಕೇಸ್ ಘಟನೆ ನಡೆದಿದೆ.ವೈಟ್‌ಫಿಲ್ಡ್-ಕೆಂಗೇರಿಗೆ ಮೆಟ್ರೋ ಸಂಚಾರಕ್ಕೆ ಸಿದ್ದತೆ 72 ನಿಮಿಷದಲ್ಲಿ ಪ್ರಯಾಣ

ಟೋಲ್ ಗೇಟ್ ಬಳಿ ಬೊಲೆರೊ ವೆಹಿಕಲ್‌ಗೆ ಬೈಕ್ ಸವಾರನೊಬ್ಬ ರಾಂಗ್ ರೂಟ್‍ನಲ್ಲಿ ಬಂದು ಡಿಕ್ಕಿ ಹೊಡೆದಿದ್ದ.

ಈ ಬಗ್ಗೆ ಬೊಲೆರೊ ವೆಹಿಕಲ್‌ ಡ್ರೈವರ್ ಪ್ರಶ್ನಿಸುತ್ತಿದ್ದಂತೆ ಬೈಕ್ ಹತ್ತಿ ಸವಾರ ಎಸ್ಕೇಪ್ ಆಗಲು ಮುಂದಾಗಿದ್ದಾನೆ. ಆದರೆ ಬೈಕ್ ಸವಾರನನ್ನು ಹಿಡಿಯಲು ಬೊಲೆರೊ ವೆಹಿಕಲ್‌ ಚಾಲಕ ಮುಂದಾಗಿದ್ದು, ಚಾಲಕ ಹಿಂದಿನಿಂದ ಬೈಕ್‍ನ್ನು ಹಿಡಿದುಕೊಂಡಿದ್ದಾನೆ.

ಆಗ ಬೈಕ್ ಸವಾರ ಬೊಲೆರೊ ವೆಹಿಕಲ್‌ ಚಾಲಕನನ್ನು ಎಳೆದೊಯ್ದಿದ್ದಾನೆ. ಹೀಗೆ ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿಯಿಂದ ಹೊಸಳ್ಳಿ ಮೆಟ್ರೋ ನಿಲ್ದಾಣದವರೆಗೆ ದರದರನೇ ಬೈಕ್ ಸವಾರ ಎಳೆದೊಯ್ದಿದ್ದಾನೆ. ವಯಸ್ಸಾದ ಚಾಲಕನನ್ನು ಬೈಕ್‍ನಲ್ಲಿ ಎಳೆದೊಯ್ಯುತ್ತಿರುವುದನ್ನು ನೋಡಿದ ಸಾರ್ವಜನಿಕರು ಬೈಕ್ ಸವಾರನನ್ನು ಬೆನ್ನಟ್ಟಿದ್ದಾರೆ.

ಕೊನೆಗೂ ಬೈಕ್ ಸವಾರನನ್ನು ತಡೆಯುವಲ್ಲಿ ಯಶಸ್ವಿಯಾದ ಸಾರ್ವಜನಿಕರು, ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆ ನಂತರ ಬೈಕ್ ಸವಾರನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಸ್ಥಳಕ್ಕೆ ಧಾವಿಸಿದ ವಿಜಯ ನಗರ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಬೈಕ್‍ನ ಹಿಂದೆ ನೇತುಬಿದ್ದು ಒಂದು ಕಿ.ಮೀವರೆಗೆ ಎಳೆದೊಯ್ಯಲ್ಪಟ್ಟ ಬೊಲೆರೊ ವೆಹಿಕಲ್‌ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

Share This Article
Leave a comment