ಮುಂಬೈ ಇಂಡಿಯನ್ಸ್ ತಂಡ ಮತ್ತೆ ಮುಖಭಂಗ ಅನುಭವಿಸಿದೆ. RCB ಗೆಲುವಿನ ನಗೆ ಬೀರಿ MI ತಂಡಕ್ಕೆ ಸತತ ಸೋಲಿನ ರುಚಿ ಕಾಣುವಂತೆ ಮಾಡಿದೆ.
ಮುಂಬೈನಲ್ಲಿ ನಡೆದ ಶನಿವಾರದ ಪಂದ್ಯದಲ್ಲಿ 5 ಬಾರಿ IPL ಚಾಂಪಿಯನ್ ತಂಡ ಎಂದು ಖ್ಯಾತಿ ಪಡೆದ MI ತಂಡ 2022 – ಐಪಿಎಲ್ ನಲ್ಲಿ ಸತತ 4ನೇ ಪಂದ್ಯದಲ್ಲೂ ಸೋಲು ಕಂಡಿದೆ. ಇದರಿಂದ ರೋಹಿತ್ ಪಡೆಗೆ ತೀವ್ರ ಮುಖಭಂಗವಾಗಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್ ಸಿ ಬಿ ಆಟಗಾರರು ಮುಂಬೈ ಇಂಡಿಯನ್ಸ್ ತಂಡವನ್ನು ಆರಂಭದ 10 ಓವರ್ ಗಳಲ್ಲಿ ಬಲವಾಗಿ ಕಟ್ಟಿ ಹಾಕಿತು.
8 ನೇ ಓವರ್ ನಲ್ಲಿ 5 ವಿಕೆಟ್ ಕಳೆದುಕೊಂಡ MI ತಂಡ 62 ಮಾತ್ರ ಗಳಿಸಲು ಸಾಧ್ಯವಾಯಿತು.
ಸೂರ್ಯಕುಮಾರ್ ಮಾತ್ರ 50 ಕ್ಕೂ ಹೆಚ್ಚು ರನ್ ಗಳಿಸಿ, ತಂಡಕ್ಕೆ 151 ರನ್ ಗಳ ಗೌರವ ಮೊತ್ತಕ್ಕೆ ತಂದು ನಿಲ್ಲಿಸಿದರು.
RCB ತಂಡವು ಗೆಲುವಿಗೆ 152 ರನ್ ಗಳನ್ನು ಬೆನ್ನೇರಿ ಹೊರಟಿತು. ಆರಂಭಿಕ ಆಟಗಾರ ಅನುಜ್ ರಾವತ್ ಹಾಗೂ ಕೊಹ್ಲಿ ಅತ್ಯುತ್ತಮ ಜೊತೆ ಆಟವಾಡಿ ತಂಡದ ಗೆಲುವಿಗೆ ನೆರವಾದರು. ರಾವತ್ 66 ರನ್ ಪಡೆದುರನ್ ಔಟ್ ಆದರು.
ದಿನೇಶ್ ಕಾರ್ತಿಕ್ ಹಾಗೂ ಕೊಹ್ಲಿ ಜೊತೆ ಆಟದಲ್ಲಿ ಆರ್ ಸಿ ಬಿ ಗೆಲುವು ಸನೀಹಕ್ಕೆ ಬಂದ ವೇಳೆಯಲ್ಲಿ
48 ರನ್ ಮಾಡಿದ ಕೊಹ್ಲಿ ಎಲ್ ಬಿ ಡಬ್ಲ್ಯೂ ಔಟ್ ಆದರು. ನಂತರ ಬಂದ ಮ್ಯಾಕ್ಸ್ ವೆಲ್ ಎರಡು ಬೌಂಡರಿ ಬಾರಿ ಆರ್ ಸಿ ಬಿ ಗೆಲುವು ತಂದು ಕೊಟ್ಟರು.
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
More Stories
ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಟಿ20 ಸರಣಿ
259 ರನ್ ಗಳಿಗೆ ನ್ಯೂಜಿಲೆಂಡ್ ಆಲ್ ಔಟ್ : ಸೇಡು ತೀರಿಸಿಕೊಳ್ಳುವ ತವಕದಲ್ಲಿ ಭಾರತ