ಇಮ್ರಾನ್ ಖಾನ್ ಪಾಕ್ ಪ್ರಧಾನಿ ಹುದ್ದೆಗೆ ರಾಜೀನಾಮೆ – ಸರ್ಕಾರ ಪತನ : ಅವಿಶ್ವಾಸಕ್ಕೂ ಮುನ್ನವೇ ಅಧಿಕಾರ ತ್ಯಾಗ

Team Newsnap
1 Min Read

ಕಳೆದ ಮಧ್ಯರಾತ್ರಿ ಪಾಕಿಸ್ತಾನದಲ್ಲಿ ನಡೆದ ರಾಕೀಯ ಹೈ ಡ್ರಾಮಾದಲ್ಲಿ ಇಮ್ರಾನ್ ಖಾನ್ ಸೇರಿ ಸ್ಪೀಕರ್ , ಡೆಪ್ಯೂಟಿ ಸ್ಪೀಕರ್ ಎಲ್ಲರೂ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದರು. ಈ ನಿರ್ಧಾರದಿಂದ ಇಮ್ರಾನ್ ಸರ್ಕಾರ ಕೊನೆಗೂ ಪತನಗೊಂಡಂತಾಗಿದೆ.

ಓವರ್ ಕೊನೆಯ ಬಾಲ್ ವರೆಗೂ ಆಟ ಆಡಿ ತಮ್ಮ ಸರ್ಕಾರ ಉಳಿಸಿಕೊಳ್ಳುವುದಾಗಿ ಹೇಳಿದ್ದ ಇಮ್ರಾನ ಮಾತುಗಳು ಹುಸಿಯಾಗಿವೆ.

ತಮ್ಮದೇ ಆದ PTI ಪಕ್ಷದ 35 ಕ್ಕೂ ಸಂಸದರು ಅವಿಶ್ವಾಸದ ಪರವಾಗಿ ಇರುವುದರಿಂದ ಸರ್ಕಾರದ ವಿಶ್ವಾಸ ಉಳಿಸಿಕೊಳ್ಳುವುದು ಕಷ್ಟ ಎಂಬುದನ್ನು ಅರಿತ ಇಮ್ರಾನ್ ಕೊನೆಗೆ ರಾಜೀನಾಮೆ ನೀಡುವ ನಿರ್ಧಾರ ಮಾಡಿದರು.

ಅವಿಶ್ವಾಸದ ಮೂಲಕ ಸರ್ಕಾರದ ಪತನಕ್ಕೆ ಕಾರಣವಾದ ಇಮ್ರಾನ್ ಖಾನ್ ಪಾಕಿಸ್ತಾನದ ಮೊದಲ ಪ್ರಧಾನಿಯಾಗಿದ್ದಾರೆ. 4 ವರ್ಷಗಳ ಕಾಲ ಪಾಕಿಸ್ತಾನವನ್ನು ಆಳಿದ ಇಮ್ರಾನ್ ಸಾಕಷ್ಟು ಸವಾಲುಳನ್ನು ಎದುರಿಸಿದ್ದರು.

ಪ್ರಧಾನಿ ಹುದ್ದೆಯಿಂದ ನಿರ್ಗಮಿಸುತ್ತಿದ್ದಂತೆ ಇಮ್ರಾನ್ ಪ್ರಧಾನಿಗಳ ಅಧೀಕೃತ ನಿವಾಸವನ್ನೂ ಕೂಡ ರಾತ್ರಿಯೇ ತೆರವುಗೊಳಿಸಿದರು.

ಇಂದು ಮಧ್ಯಾಹ್ನ 2 ಗಂಟೆ ವೇಳೆಗೆ ಪಾಕಿಸ್ತಾನ ಮುಂದಿನ ಪ್ರಧಾನಿ ಆಯ್ಕೆ ನಡೆಯಲಿದೆ . ಮಾಜಿ ಪ್ರಧಾನಿ ನವಾಜ್ ಷರೀಪ್ ಕಿರಿಯ ಸಹೋದರ ಶಹಾಬಾಜ್ ಷರೀಪ್ ಆಯ್ಕೆಯಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.

Share This Article
Leave a comment